ತಿರುಪತಿಯಲ್ಲಿ ಮತ್ತೊಂದು ಭೋಜನಶಾಲೆ: ಇನ್ನು ಊಟಕ್ಕಿಲ್ಲ ಲಾಂಗ್ ಕ್ಯು

tirupathi
ತಿರುಪತಿ, ಜುಲೈ 8: ಈ ಬಾರಿ ನೀವು ತಿರುಪತಿಗೆ ಹೋದರೆ ಅಲ್ಲಿ ಊಟಕ್ಕಾಗಿ ಲಾಂಗ್ ಕ್ಯು ನಿಲ್ಲಬೇಕಿಲ್ಲ. ಏಕೆಂದರೆ ಪ್ರತಿ ದಿನ ಇನ್ನೂ 75,000 ಭಕ್ತರಿಗೆ ಏಕಕಾಲಕ್ಕೆ ಊಟದ ವ್ಯವಸ್ಥೆಯನ್ನು ಹೊಸದಾಗಿ ಮಾಡಲಾಗಿದೆ. ತಿರುಮಲ ವೆಂಕಟೇಶ್ವರ ದೇವಾಲಯದಲ್ಲಿ ಇಂತಹ ಉಚಿತ ಊಟದ ಸೌಲಭ್ಯ ಒದಗಿಸುವ ಭೋಜನ ಶಾಲೆಯನ್ನು ಗುರುವಾರ ತಿರುಮಲದಲ್ಲಿ ಕಾರ್ಯಾರಂಭಿಸಿದೆ.

ಒಂದು ಬಾರಿಗೆ 1000 ಮಂದಿ ಊಟ ಮಾಡಲು ಅನುಕೂಲವಿರುವ ನಾಲ್ಕು ಭೋಜನ ಶಾಲೆಗಳನ್ನು ಈ ನೂತನ ಕಟ್ಟಡ ಒಳಗೊಂಡಿದ್ದು, ನಿರ್ಮಾಣಕ್ಕಾಗಿ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) 33 ಕೋ. ರೂ. ಖರ್ಚು ಮಾಡಿದೆ ಎಂದು ಮೂಲಗಳು ತಿಳಿಸಿವೆ.

ರಾಷ್ಟ್ರಪತಿ ಪ್ರತಿಭಾ ದೇವಿ ಸಿಂಗ್‌ ಪಾಟೀಲ್‌ ಇದನ್ನು ಉದ್ಘಾಟಿಸಿದ್ದಾರೆ. ಈ ಸಂದರ್ಭದಲ್ಲಿ ಪತಿ ದೇವಿ ಸಿಂಗ್‌ ರಾಮ್‌ ಸಿಂಗ್‌ ಶೇಖಾವತ್‌ ಹಾಗೂ ಕುಟುಂಬದವರೊಡನೆ ಆಗಮಿಸಿದ ಪ್ರತಿಭಾ, ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಬುಧವಾರವೇ ಕ್ಷೇತ್ರಕ್ಕೆ ಆಗಮಿಸಿದ್ದ ರಾಷ್ಟ್ರಪತಿಯವರ ಜತೆ ಆಂಧ್ರ ಪ್ರದೇಶ ರಾಜ್ಯಪಾಲ ಇ. ಎಸ್‌. ಎಲ್‌. ನರಸಿಂಹಂ, ಮುಖ್ಯಮಂತ್ರಿ ಕಿರಣ್‌ ಕುಮಾರ್ ರೆಡ್ಡಿ, ಹಾಗೂ ಪಿಆರ್ ಪಿ ಮುಖ್ಯಸ್ಥ ಕೆ. ಚಿರಂಜೀವಿ ಉಪಸ್ಥಿತರಿದ್ದರು. ಇದು ತಿರುಪತಿ ದೇವಳಕ್ಕೆ ಪ್ರತಿಭಾ ಅವರ ಎರಡನೇ ಭೇಟಿಯಾಗಿದ್ದು ಈ ಹಿಂದೆ 2008ರಲ್ಲಿ ಟಿಟಿಡಿ ನಡೆಸುವ ಶ್ರೀ ವೆಂಕಟೇಶ್ವರ ಭಕ್ತಿ ವಾಹಿನಿಗೆ ಚಾಲನೆ ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+