ಕರುಣಾನಿಧಿ ಸೊಸೆ ಕೊರಳಿಗೆ ಬಿತ್ತು ಭೂ ಕಬಳಿಕೆ ಆರೋಪ

karunanidhi family
ಚೆನ್ನೈ, ಜುಲೈ 8: ಡಿಎಂಕೆ ನಾಯಕ ಕರುಣಾನಿಧಿ ಅವರ ಬಹುತೇಕ ಇಡೀ ಕುಟುಂಬವೇ ಜೈಲು ಪಾಲಾಗುವ ಲಕ್ಷಣಗಳಿವೆ. ಕರುಣಾ ಕುಟುಂಬದಲ್ಲಿ ಹಗರಣಗಳ ಸರಮಾಲೆ ಹಾಸುಹೊಕ್ಕಿದೆ. ಮೊದಲು ಎ. ರಾಜಾ, ಬಳಿಕ ಕನಿಮೋಳಿ 2ಜಿ ಪ್ರಕರಣ ಸಂಬಂಧ ತಿಹಾರ್ ಜೈಲು ಸೇರಿದರು. ಗುರುವಾರ ದಯಾನಿಧಿ ಮಾರನ್‌ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು.

ಇದರ ಬೆನ್ನಲ್ಲೇ ಇದೀಗ ಕರುಣಾನಿಧಿ ಪುತ್ರ, ಕೇಂದ್ರ ಸಚಿವ ಎಂ.ಕೆ. ಅಳಗಿರಿ ಅವರ ಪತ್ನಿ, ಕಾಂತಿ ಅಳಗಿರಿ ನಾನು ಯಾರಿಗೂ ಕಮ್ಮಿ ಇಲ್ಲ ಎನ್ನುತ್ತಾ ವಿವಾದಕ್ಕೆ ಗ್ರಾಸ ಒದಗಿಸಿದ್ದಾರೆ. ದೇವಸ್ಥಾನದ ಜಾಗವೊಂದನ್ನು ಅಕ್ರಮವಾಗಿ ಕಬಳಿಸಿದ್ದಾರೆ ಎಂಬ ಆರೋಪ ಅವರ ವಿರುದ್ಧ ಕೇಳಿಬಂದಿದೆ. ಮದುರೈ ಸಮೀಪದ ಉಥನ್‌ಗುಡಿಯಲ್ಲಿರುವ ದೇಗುಲವೊಂದಕ್ಕೆ ಭಕ್ತರೊಬ್ಬರು 1936ರಲ್ಲಿ 23 ಎಕರೆ ಜಾಗ ನೀಡಿದ್ದರು. ಇದನ್ನು ಯಾರಿಗೂ ಮಾರದಂತೆ ಷರತ್ತು ವಿಧಿಸಿದ್ದರು.

ಆದರೆ ಕೆಲ ದಿನಗಳ ಹಿಂದೆ ಸುಮಾರು 50 ಕೋಟಿ ರೂ. ಬೆಲೆಬಾಳುವ ಈ ಜಮೀನನ್ನು ಸುಳ್ಳು ದಾಖಲೆ ಸೃಷ್ಟಿಸಿ ವಿವಾದಿತ ಲಾಟರಿ ಉದ್ಯಮಿ ಸ್ಯಾಂಟಿಗೋ ಮಾರ್ಟಿನ್‌ ಎಂಬುವವರಿಗೆ ಅಕ್ರಮವಾಗಿ ಮಾರಾಟ ಮಾಡಲಾಗಿದೆ. ಜೊತೆಗೆ ಈ ಜಾಗದ ಪವರ್ ಆಫ್ ಅಟಾರ್ನಿಯನ್ನು ಡಿಎಂಕೆ ನಾಯಕ ಅನ್ಬಳಗನ್‌ ಅವರ ಸಂಬಂಧಿ ಸುಕುಮಾರನ್‌ ಎಂಬುವವರಿಗೆ ನೀಡಲಾಗಿತ್ತು.

ಇವರ ಮೂಲಕ ಜಮೀನು ಇದೀಗ ಕಾಂತಿ ಅಳಗಿರಿ ಹೆಸರಿಗೆ ವರ್ಗಾವಣೆಯಾಗಿದೆ ಎಂದು ದೇಗುಲದ ಅರ್ಚಕ ಸುಬ್ರಹ್ಮಣ್ಯನ್‌ ಅಯ್ಯರ್ ದೂರಿದ್ದಾರೆ. ಈ ಕುರಿತು ಪ್ರಕರಣವನ್ನೂ ದಾಖಲಿಸಿದ್ದಾರೆ. ಮುಖ್ಯಮಂತ್ರಿ ಜಯರಾಂ ಜಯಲಲಿತಾ ಅವರು ಮುಂದಿನದನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಪ್ರಮಾಣ ಮಾಡಿದಂತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+