ಅನಂತ ಅಧ್ಯಯನ: ಜಗದ್ವಿಖ್ಯಾತ ಪ್ಯಾರಿಸ್ ಮ್ಯೂಸಿಯಂಗೆ ಮೊರೆ

International Council for Museum -Paris
ನವದೆಹಲಿ, ಜುಲೈ 7: ಶ್ರೀ ಅನಂತ ಪದ್ಮನಾಭಸ್ವಾಮಿ ದೇವಸ್ಥಾನದ ನೆಲಮಾಳಿಗೆಯ ಉಗ್ರಾಣಗಳಲ್ಲಿ ಪತ್ತೆಯಾಗಿರುವ ಅಪಾರ ಪ್ರಮಾಣದ ಸಂಪತ್ತನ್ನು ಸಂರಕ್ಷಿಸಿಡಲು ಜಗದ್ವಿಖ್ಯಾತ ಪ್ಯಾರಿಸ್ಸಿನ ಇಂಟರ್ ನ್ಯಾಷನಲ್ ಕೌನ್ಸಿಲ್ ಫಾರ್ ಮ್ಯೂಸಿಯಂಗೆ ಮೊರೆ ಹೋಗಲಾಗಿದೆ.

ನವದೆಹಲಿಯ ನ್ಯಾಶನಲ್‌ ಮ್ಯೂಸಿಯಂ ಯುನಿವರ್ಸಿಟಿಯು ಸಂಪತ್ತಿನ ಅಧ್ಯಯನ ನಡೆಸಲು ತಜ್ಞರ ತಂಡವೊಂದನ್ನು ರಚಿಸಿದ್ದು, ಅದರಲ್ಲಿ ಅಂತಾರಾಷ್ಟ್ರೀಯ ಮಟ್ಟದ ತಜ್ಞರೂ ಇರುತ್ತಾರೆ. ನ್ಯಾಶನಲ್‌ ರೀಸರ್ಚ್‌ ಲ್ಯಾಬೋರೇಟರಿ ಫಾರ್ ಕನ್ಸರ್ವೇಶನ್‌, ಆರ್ಕಿಯಾಲಾಜಿಕಲ್‌ ಸರ್ವೇ ಆಫ್ ಇಂಡಿಯಾ ಮತ್ತು ಪ್ಯಾರಿಸ್‌ನ ಇಂಟರ್ ನ್ಯಾಷನಲ್‌ ಕೌನ್ಸಿಲ್‌ ಫಾರ್ ಮ್ಯೂಸಿಯಂ ತಜ್ಞರು ವಾರದೊಳಗೆ ತಿರುವನಂತಪುರ ತಲುಪಲಿದ್ದಾ ಎಂದು ಯುನಿವರ್ಸಿಟಿಯ ಆಡಳಿತಾಧಿಕಾರಿ ಸಿ. ವಿ. ಆನಂದಬೋಸ್‌ ತಿಳಿಸಿದ್ದಾರೆ.

ಸಂಪತ್ತು ದೇವಸ್ಥಾನದಲ್ಲೇ ಇರಲಿ: ಅನಂತ ಪದ್ಮನಾಭಸ್ವಾಮಿ ದೇವಸ್ಥಾನವನ್ನು ರಾಜ್ಯದ ಪ್ರತಿಷ್ಠೆ ಎಂದು ಬಣ್ಣಿಸಿರುವ ಚಾಂಡಿ ಸಂಪತ್ತನ್ನು ರಕ್ಷಿಸುವುದು ಸರಕಾರದ ಮತ್ತು ಸಮಾಜದ ಹೊಣೆ. ಆದರೆ ಆ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳುವುದು ಸುಪ್ರೀಂ ಕೋರ್ಟಿಗೆ ಬಿಟ್ಟಿದ್ದು ಎಂದು ಮುಖ್ಯಮಂತ್ರಿ ಉಮ್ಮನ್‌ ಚಾಂಡಿ ಹೇಳಿದ್ದಾರೆ.

ಸಂಪತ್ತು ದೇವಸ್ಥಾನದಲ್ಲೇ ಇರಬೇಕೆಂಬುದು ಸರಕಾರ, ಜನರ ಮತ್ತು ಹಿಂದೂ ಸಂಘಟನೆಗಳ ಇಚ್ಛೆ ಎಂದು ಸಂಪುಟ ಸಭೆಯ ಬಳಿಕ ಚಾಂಡಿ ಹೇಳಿದರು. ದೇವಸ್ಥಾನಕ್ಕೆ ಈಗ ತಾತ್ಕಾಲಿಕ ಭದ್ರತಾ ವ್ಯವಸ್ತೆಯನ್ನು ಮಾಡಲಾಗಿದೆ ಹಾಗೂ ಸರಕಾರ ದೇವಸ್ಥಾನದ ಆಚಾರ -ವಿಚಾರ ಹಾಗೂ ಸಂಸ್ಕೃತಿಗೆ ಅಡಚಣೆಯಾಗದಂತೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಖಾಯಂ ಭದ್ರತೆಯನ್ನು ಕೊಡುವ ವಿಧಾನಗಳನ್ನು ಪರಿಶೀಲಿಸುತ್ತಿದೆ. ಭಕ್ತರಿಗೆ ಅಡಚಣೆಯಾಗದ ರೀತಿಯಲ್ಲಿ ಭದ್ರತೆ ಏರ್ಪಾಡು ಮಾಡಬೇಕಾಗಿದೆ ಹಾಗೂ ಇದಕ್ಕೆ ನ್ಯಾಯಾಲಯದ ಅನುಮತಿ ಅಗತ್ಯವಿದೆ ಎಂದು ಚಾಂಡಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+