ಕುಮಾರಸ್ವಾಮಿ ಆಮರಣಾಂತ ಉಪವಾಸ ನಿಶ್ಚಿತ

ಸಿಬಿಐಗೆ ತನಿಖೆಯನ್ನು ಒಪ್ಪಿಸಬೇಕೆಂದು ನೀಡಲಾಗಿದ್ದ ಒಂದು ವಾರದ ಗಡುವನ್ನು ಬಿಜೆಪಿ ಮೀರಿದೆ. ಬಿಜೆಪಿ ಸರಕಾರ ತಮ್ಮ ಆಗ್ರಹಕ್ಕೆ ಪ್ರತಿಸ್ಪಂದಿಸಲು ವಿಫಲವಾಗಿದ್ದಾರೆ. ಆದ್ದರಿಂದ ವಿಧಾನಸೌಧದ ಬಳಿಯಿರುವ ಬಸವೇಶ್ವರ ಪ್ರತಿಮೆಯೆದಿರು ನಿರಶನ ಹೂಡುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಅವರು ಗುರುವಾರ ಮತ್ತೆ ನುಡಿದರು.
ಸಿಬಿಐಗೆ ತನಿಖೆಯನ್ನು ಒಪ್ಪಿಸುವುದಿಲ್ಲ ಎಂದು ಹೇಳಿದ್ದು ಜವಾಬ್ದಾರಿ ಮತ್ತು ಅಧಿಕಾರವೇ ಇಲ್ಲದ ವ್ಯಕ್ತಿಯಿಂದ (ಯಡಿಯೂರಪ್ಪನವರ ರಾಜಕೀಯ ಕಾರ್ಯದರ್ಶಿ ಬಿಜೆ ಪುಟ್ಟಸ್ವಾಮಿ). ಬಿಜೆಪಿಯ ಯಾವುದೇ ಹಿರಿಯ ನಾಯಕರಾಗಲಿ, ಖುದ್ದು ಮುಖ್ಯಮಂತ್ರಿಯಾಗಲಿ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಅವರ ಬೇಜವಾಬ್ದಾರಿಯನ್ನು ತೋರಿಸುತ್ತದೆ ಎಂದು ಅವರು ಆರೋಪಿಸಿದರು.
ಇನ್ನೂ ಎರಡು ದಿನ ಅವರಿಗೆ ಟೈಮಿದೆ. ಅಷ್ಟರಲ್ಲಾಗಲೆ ಸಿಬಿಐಗೆ ಈ ಪ್ರಕರಣವನ್ನು ಒಪ್ಪಿಸದಿದ್ದರೆ ಬಹಿರಂಗವಾಗಿ ದೇವೇಗೌಡ ಕುಟುಂಬಕ್ಕೆ ಕ್ಷಮೆ ಕೇಳಬೇಕೆಂದು ಕುಮಾರಸ್ವಾಮಿ ಆಗ್ರಹಿಸಿರದು. ತಮ್ಮ ತಂದೆ ಗದ್ದುಗೆಯಲ್ಲಿದ್ದಾಗ ಎಂದೂ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿಲ್ಲ. ದುಡ್ಡೇನಾದರೂ ಸಂಪಾದಿಸಿದ್ದರೆ ಅದು ಬೆವರು ಹರಿಸಿ ಸಂಪಾದಿಸಿದ್ದು ಎಂದು ಎಚ್ಡಿಕೆ ಹೇಳಿದರು.












Click it and Unblock the Notifications