ದಯೆ ತೋರದ ಪ್ರಧಾನಿ: ಕೊನೆಗೂ ಮಾರನ್ ರಾಜೀನಾಮೆ
ನವದೆಹಲಿ,
ಜುಲೈ 7: 2 ಜಿ ಹಗರಣದ ಸುಳಿಗೆ ಸಿಕ್ಕಿ ಕೇಂದ್ರ ಜವಳಿ ಸಚಿವ ದಯಾನಿಧಿ ಮಾರನ್ ಅವರು ತಮ್ಮ ರಾಜೀನಾಮೆ ಪತ್ರವನ್ನು ಪ್ರಧಾನಿ ಮನಮೋಹನ್ ಸಿಂಗ್ ಅವರ ಕೈಗೆ ಕೊಟ್ಟು ಚೆನ್ನೈ ವಿಮಾನ ಹತ್ತಿದ್ದಾರೆ. 2ಜಿ ಹಗರಣದಲ್ಲಿ ಮಾರನ್ ವಿರುದ್ಧ ಬಲವಾದ ಸಾಕ್ಷ್ಯವಿದ್ದು, ಶೀಘ್ರವೇ ಆರೋಪಪಟ್ಟಿ ದಾಖಲಿಸುವುದಾಗಿ ಸಿಬಿಐ ಬುಧವಾರವಷ್ಟೇ ಕೋರ್ಟಿಗೆ ತಿಳಿಸಿತ್ತು. id="toptextpromo">ಕೆಂಪು
ಗೂಟದ ಕಾರನ್ನು ಪಕ್ಕಕ್ಕಿಟ್ಟು ಸಾದಾ ಕಾರಿನಲ್ಲಿ ನೇರವಾಗಿ ಪ್ರಧಾನಿ ನಿವಾಸ ತಲುಪಿದ ಮಾರನ್ ಸಿಂಗ್ ಜತೆ ಕೆಲವೇ ಕ್ಷಣ ಮಾತನಾಡಿ ನಂಬರ್ 7, ರೇಸ್ ಕೋರ್ಸ್ ರಸ್ತೆಯಿಂದ ಹೊರಬಿದ್ದರು. ಮಾರ್ಗದಲ್ಲಿ ನಿಂತಿದ್ದ ಮಾಧ್ಯಮಗಳ ಕಡೆ ಕಣ್ಣೆತ್ತಿಯೂ ನೋಡದೆ ಯಾವುದೇ ಪ್ರತಿಕ್ರಿಯೆ ನೀಡದೆ ಚೆನ್ನೈಗೆ ಹೊರಟೇ ಬಿಟ್ಟರು. id='are-slot-1' class='oiad oi-axt oiadv'> id='top-searched-articles'>ಬಹುತೇಕ
ಎಲ್ಲ ಸಚಿವರನ್ನೊಳಗೊಂಡ ಸಂಪುಟ ಸಭೆ ಗುರುವಾರ ಬೆಳಗ್ಗೆ ನಡೆದಿತ್ತು. ಸಿಬಿಐ ಆರೋಪಗಳ ಬಗ್ಗೆ ಸಭೆಯಲ್ಲಿ ಯಾವುದೇ ಚರ್ಚೆ ನಡೆಯಲಿಲ್ಲವಾದರೂ ಸಭೆ ಮುಗಿಯುತ್ತಿದ್ದಂತೆ ಮೊದಲು ನಿರ್ಗಮಿಸಿದ್ದು ಮಾರನ್ ಅವರೇ.











Click it and Unblock the Notifications