ಅನಂತ ನಿಧಿ ಚಿತ್ರೀಕರಣಕ್ಕೆ ಕೋರ್ಟ್ ಆದೇಶ: ಭಕ್ತರಿಗೆ ದರ್ಶನ ಭಾಗ್ಯ?

ಇದೇ ವೇಳೆ ಕೋರ್ಟಿನಿಂದ ನೇಮಕಗೊಂಡಿರುವ ಸಮಿತಿ ಶೋಧ ಕಾರ್ಯದಲ್ಲಿ ತೊಡಗಿದ್ದು, ಸಮಿತಿಯ ಸದಸ್ಯರು ಯಾವುದೇ ಕಾರಣಕ್ಕೂ ಮಾಧ್ಯಮದ ಜತೆ ಅಥವಾ ಸಾರ್ವಜನಿಕವಾಗಿ ದೇಗುಲದ ಸಂತ್ತಿನ ಬಗ್ಗೆ ತುಟಿ ಬಿಚ್ಚಬಾರದು ಎಂದು ಕಟ್ಟೆಚ್ಚರ ನೀಡಿದೆ.
ಅನಂತ ದೇಗುಲ ನಿಧಿ ಬಗ್ಗೆ ಶುಕ್ರವಾರ ಮತ್ತೆ ವಿಚಾರಣೆ ನಡೆಸಲಾಗುವುದು. ಆವೇಳೆಗೆ ತಜ್ಞರೊಬ್ಬರನ್ನು ನೇಮಿಸಿ, ಸಂಪತ್ತಿನ ಬಗ್ಗೆ ಮುಂದೇನು ಮಾಡಬೇಕು ಎಂಬ ಬಗ್ಗೆ ಸಲಹೆ ನೀಡುವಂತೆಯೂ ಸೂಚಿಸಿದೆ.
ದೇವಸ್ಥಾನದ ನೆಲಮಾಳಿಗೆಯಲ್ಲಿರುವ ಉಗ್ರಾಣಗಳಿಂದ ಹೊರತೆಗೆಯಲಾಗುತ್ತಿರುವ ಎಲ್ಲ ಆಭರಣ, ಅಮೂಲ್ಯ ವಸ್ತುಗಳ ಬಗ್ಗೆ ಸವಿವರ ಸಿದ್ಧಪಡಿಸಿಟ್ಟುಕೊಳ್ಳುವಂತೆ ಶೋಧ ಸಮಿತಿಗೆ ನಿರ್ದೇಶಿಸಿದೆ. ಈ ರೀತಿ ಪಟ್ಟಿ ಸಿದ್ಧಪಡಿಸುವುದು ಕೇರಳ ಹೈಕೋರ್ಟಿನ ನ್ಯಾಯಮೂರ್ತಿ ಎಂ.ಎನ್. ಕೃಷ್ಣನ್ ಮತ್ತು ನ್ಯಾ. ಸಿ.ಎಸ್. ರಾಜನ್ ಅವರ ಸಮಕ್ಷಮದಲ್ಲಿ ನಡೆಯಬೇಕು. ಜತೆಗೆ ಪ್ರಕರಣದ ಅರ್ಜಿದಾರರೂ ಆದ ಮಾರ್ತಾಂಡ ವರ್ಮಾ ಅವರ ಉಪಸ್ಥಿತಿಯ ಜರೂರತ್ತು ಇರುತ್ತದೆ ಎಂದಿದೆ. ಮಾರ್ತಾಂಡ ವರ್ಮಾ ಅವರು ಈ ಹಿಂದಿನ ತಿರುವಾಂಕೂರು ರಾಜ ರಾಮ ವರ್ಮ ಅವರ ಕಿರಿಯ ಸೋದರ.
ಹಾಗೆಯೇ ಕೇರಳ ಸರಕಾರದ ಮುಜರಾಯಿ ಇಲಾಖೆ ಕಾರ್ಯದರ್ಶಿ ಮತ್ತು ಪುರಾತತ್ವ ಇಲಾಖೆಯ ಉನ್ನತಾಧಿಕಾರಿಯೊಬ್ಬರೂ ಪಟ್ಟಿ ರಚನೆ ವೇಳೆ ಉಪಸ್ಥಿತರಿರಬೇಕು ಎಂದು ತಾಕೀತು ಮಾಡಿದೆ. ಇಡೀ ಪ್ರಕ್ರಿಯೆಯನ್ನು ನ್ಯಾ. ಎಂ.ಎನ್. ಕೃಷ್ಣನ್ ಅವರ ನೇತೃತ್ವಕ್ಕೆ ಕೋರ್ಟ್ ವಹಿಸಿದೆ.












Click it and Unblock the Notifications