ಮಂಗಳೂರು ಕೆಸರುಗದ್ದೆ ನೃತ್ಯ ಸ್ಪರ್ಧೆ ನಿಮಗೆ ಗೊತ್ತಾ?

Kesarugadde dance in Mangalore
ಮಂಗಳೂರು, ಜು. 6 : ಕರಾವಳಿಯಲ್ಲಿ ಕೈಗಾರಿಕೆಗಳ ಸ್ಥಾಪನೆಯಿಂದಾಗಿ ಕೃಷಿ ಅತ್ಯಂತ ವೇಗವಾಗಿ ನಶಿಸುತ್ತಿದೆ. ಮೂರು ಬೆಳೆ ಬೆಳೆಯುತ್ತಿದ್ದ ಗದ್ದೆಗಳು ಮಹಲುಗಳಾಗಿ ಪರಿವರ್ತನೆಯಾಗುತ್ತಿವೆ. ಗದ್ದೆಗಳನ್ನು ಮಣ್ಣು ತುಂಬಿಸಿ ಮನೆ ಸೈಟು ನಿರ್ಮಿಸಲಾಗುತ್ತಿದೆ. ಎಲ್ಲಿ ನೋಡಿದರೂ ಗಗನ ಚುಂಬಿ ಕಟ್ಟಡಗಳು ತಲೆಯೆತ್ತುತ್ತಿವೆ. ಭತ್ತ, ಗೇರು, ತೆಂಗು, ಅಡಿಕೆ ಕೃಷಿಗೆ ಹೆಸರುವಾಸಿಯಾಗಿದ್ದ ಕರಾವಳಿ ಈಗ ಮಹಲುಗಳ ಸಂಸ್ಕೃತಿಗೆ ಒಗ್ಗಿಕೊಳ್ಳುತ್ತಿದೆ. ಮಿಸ್ ವರ್ಲ್ಡ್ ನಿಂದ ಅಂಡರ್ ವರ್ಲ್ಡ್ ವರೆಗೂ (ಕು)ಖ್ಯಾತಿ ಪಡೆದಿರುವ ಇಲ್ಲಿ ಮೂಲ ಸಂಸ್ಕೃತಿ ನಾಶವಾಗುತ್ತಿದೆ.

ಟಿವಿ, ಮೊಬೈಲ್, ಕಂಪ್ಯೂಟರ್ ದಾಳಿಯಿಂದಾಗಿ ಬಹುಬೇಗ ಇಲ್ಲಿನ ಸಂಸ್ಕೃತಿ ಪಾಶ್ಚಿಮಾತ್ಯ ಸಂಸ್ಕೃತಿಯೊಂದಿಗೆ ಲೀನವಾಗುತ್ತಿದೆ. ಈ ಕಾರಣದಿಂದಲೇ ಯುವಪೀಳಿಗೆಯನ್ನು ಮತ್ತೆ ಗತಕಾಲದ ಮೂಲ ಸಂಸ್ಕೃತಿ ಪರಿಚಯಿಸಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಇಂಥವುಗಳ ಪೈಕಿ ಇತ್ತೀಚಿನ ದಿನಗಳಲ್ಲಿ ಕೆಸರುಗದ್ದೆ ಓಟ, ಆಟೋಟಗಳು ಕರಾವಳಿಯ ಅನೇಕ ಕಡೆಗಳಲ್ಲಿ ಜನಪ್ರಿಯವಾಗುತ್ತಿವೆ.

ಇತ್ತೀಚೆಗೆ ಮಂಗಳೂರು ಹೊರವಲಯದ ಪಾವಂಜೆಯಲ್ಲಿ ಎರಡು ದಿನಗಳ ಕಾಲ ಕೆಸರುಗದ್ದೆ ಕ್ರೀಡೋತ್ಸವ ಆಯೋಜಿಸಲಾಗಿತ್ತು. ಈ ಪೈಕಿ ಕುತೂಹಲ ಕೆರಳಿಸಿದ ಅಂಶವೆಂದರೆ ಕೆಸರುಗದ್ದೆ ನೃತ್ಯ ಸ್ಪರ್ಧೆ. ಸಾಮಾನ್ಯವಾಗಿ ವೇದಿಕೆಗಳಲ್ಲಿ, ಬಯಲು ಮಂಟಪದಲ್ಲಿ ನೃತ್ಯ ಪ್ರದರ್ಶನ, ಸ್ಪರ್ಧೆಗಳು ನಡೆಯುವುದುಂಟು. ಆದರೆ ಇಲ್ಲಿ ಕೆಸರುಗದ್ದೆಯಲ್ಲಿ ಸ್ಪರ್ಧಿಗಳು ನರ್ತಿಸಬೇಕು. ನಿಜಕ್ಕೂ ಇದು ನೃತ್ಯಗಾರ್ತಿಯರಿಗೂ ಥ್ರಿಲ್ಲಿಂಗ್.

ಜನಪದ ಉಡುಗೆತೊಟ್ಟು, ಹಾಡಿಗೆ ಕೆಸರಿನಲ್ಲಿ ಹೆಜ್ಜೆ ಹಾಕುವುದು ಅಷ್ಟು ಸುಲಭವಂತೂ ಅಲ್ಲ. ಇಂಥ ಪ್ರಯತ್ನ ಪಾವಂಜೆಯಲ್ಲಿ ಸಾಕಾರಗೊಂಡು ನೋಡುಗರನ್ನು ಮುದಗೊಳಿಸಿತ್ತು ಕೆಸರುಗದ್ದೆ ನೃತ್ಯ ಸ್ಪರ್ಧೆ.

ಗದ್ದೆಯ ಕೆಸರು ಹೇಗಿರುತ್ತದೆ ಎನ್ನುವುದೇ ಪಟ್ಟಣಗಳ ಮಕ್ಕಳಿಗೆ ಗೊತ್ತಿರದ ಸನ್ನಿವೇಶ ಈಗಿನದು. ಅಂಥದ್ದರಲ್ಲಿ ಭತ್ತ ಬೆಳೆಯುವ ಗದ್ದೆ, ಅದೂ ಕೆಸರಲ್ಲಿ ಕುಣಿಯುವುದೆಂದರೆ ಒಂಥರಾ ಕುಷಿ, ಇದನ್ನು ಮಕ್ಕಳು ನಿಜಕ್ಕೂ ಎಂಜಾಯ್ ಮಾಡಿದರು. ಈ ಕೆಸರುಗದ್ದೆ ನೃತ್ಯ ಸ್ಪರ್ಧೆಯಲ್ಲಿ ಸುರತ್ಕಲ್ ಕಲಾಕುಂಭ ಸಾಂಸ್ಕ್ರತಿಕ ತಂಡ ಪ್ರಥಮ ಬಹುಮಾನ ಪಡೆದು ಕೆಸರುಗದ್ದೆಯಲ್ಲೂ ನೃತ್ಯ ಮಾಡಿ ಗೆಲ್ಲಬಹುದು ಎನ್ನುವುದನ್ನು ಮನವರಿಕೆ ಮಾಡಿಕೊಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+