ನೀಲಂ ಅಚ್ಯುತರಾವ್ ರಾಜ್ಯದ ಹೊಸ ಡಿಜಿ ಐಜಿಪಿ

ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಅಪರಾಧ) ಹುದ್ದೆಯಲ್ಲಿದ್ದ ನೀಲಂ ಅಚ್ಯುತರಾವ್ ಅವರಿಗೆ ಮುಂಬಡ್ತಿ ಪಡೆದು ಸಿಐಡಿ ಡಿಜಿಪಿ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರಪ್ರಥಮ ಬಾರಿಗೆ ಹಂಗಾಮಿಯಾಗಿ ಹೊಸ ಡಿಜಿಪಿಯಾಗಿ ಎಸ್ ಟಿ ರಮೇಶ್ ಅವರನ್ನು ಫೆ 1 ರಂದು ನೇಮಿಸಿ ರಾಜ್ಯ ಗೃಹ ಸಚಿವ ಆರ್ ಅಶೋಕ್ ಆದೇಶ ಹೊರಡಿಸಿದ್ದರು.
ಕೊನೆಗೆ ರಾಜ್ಯ ಮಹಾ ನಿರ್ದೇಶಕರ ಶ್ರೇಣಿಯಲಿರುವ ಹಿರಿಯ ಐಪಿಎಸ್ ಅಧಿಕಾರಿಗಳಾದ ಎಸ್.ಟಿ.ರಮೇಶ್, ಡಾ.ಡಿ.ವಿ.ಗುರುಪ್ರಸಾದ್ ( ಸಿಐಡಿ ಹಾಲಿ ಮಹಾನಿರ್ದೇಶಕ), ಎನ್.ಅಚ್ಯುತರಾವ್ ಅವರಲ್ಲಿ ಒಬ್ಬರಿಗೆ ಸ್ಥಾನ ನೀಡಲು ನಿರ್ಧರಿಸಿದ ಸರ್ಕಾರ, ನೀಲಂ ಅಚ್ಯುತರಾವ್ ಅವರನ್ನು ಆಯ್ಕೆ ಮಾಡಿದೆ.
ಸಿಎಟಿ ತಡೆಯಾಜ್ಞೆ: ಪೊಲೀಸ್ ಮಹಾನಿರ್ದೇಶಕರ ಸ್ಥಾನಕ್ಕೆ ಎಡಿಜಿಪಿ ಶ್ರೇಣಿಯ ಅಧಿಕಾರಿಗಳನ್ನು ಪರಿಗಣಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ಶಂಕರ ಬಿದರಿ ಅವರು ಸಿಎಟಿ (ಕೇಂದ್ರ ಆಡಳಿತಾತ್ಮಕ ನ್ಯಾಯಾಧಿಕರಣ) ಮನವಿ ಮಾಡಿದ್ದರು. ಇದರಿಂದ ಡಿಜಿಪಿ ನೇಮಕಾತಿ ವಿಳಂಬವಾಗಿತ್ತು. [ಈ ದಿನದ ಎಲ್ಲಾ ಲೇಖನಗಳು]












Click it and Unblock the Notifications