10 ಸಾವಿರ ಕೋಟಿ ಒಡೆಯ ಯಡ್ಡಿಗೆ ಸಿದ್ದು ಬಹುಪರಾಕ್!
ಹುಬ್ಬಳ್ಳಿ
ಜು 5: ಒಂದು ಕಾಲದಲ್ಲಿ ಒಪ್ಪತ್ತಿನ ಊಟಕ್ಕೂ ಗತಿ ಇಲ್ಲದೆ ಒದ್ದಾಡುತ್ತಿದ್ದ ಯಡಿಯೂರಪ್ಪ, ಇಂದು 10 ಸಾವಿರ ಕೋಟಿ ಒಡೆಯರಾಗಿದ್ದಾರೆ. ಇದು ನಾನು ಕಂಡ ಅದ್ಭುತ ಪವಾಡ. ಅಕ್ರಮ ಆಸ್ತಿ ಗಳಿಕೆ, ಭೂ ಹಗರಣಗಳ ಮೂಲಕರ್ತ ಯಡಿಯೂರಪ್ಪ ಈ ಪರಿ ಆಸ್ತಿ ಮಾಡಿದ್ದಾರೆ ಎಂದರೆ ಯಾವ ಪರಿ ವಂಚನೆ ಮಾಡಿರಬಹುದು ನೀವೆ ಊಹಿಸಿಕೊಳ್ಳಿ ಎಂದು ಮಾಧ್ಯಮ ಮಿತ್ರರಿಗೆ ಸಿದ್ದರಾಮಯ್ಯ ಪ್ರಶ್ನೆ ಎಸೆದರು. id="toptextpromo">ಗದಗ್
ನಲ್ಲಿ ಸುದ್ದಿಗಾರರೊಂದಿಗೆ ಸಿದ್ದರಾಮಯ್ಯ ಮಾತನಾಡುತ್ತಾ, "ಆಸ್ತಿ ಇಲ್ಲದೆ ಬೂಕನಕೆರೆಯಿಂದ ಶಿವಮೊಗ್ಗಕ್ಕೆ ಓಡಿ ಬಂದಿದ್ದ ಯಡಿಯೂರಪ್ಪ 10 ಸಾವಿರ ಕೋಟಿ ರು ಗಳಿಸಲು ತುಂಬಾ ತ್ಯಾಗ, ಶ್ರಮ, ಬಲಿದಾನಗಳನ್ನು ಮಾಡಿದ್ದಾರೆ. ರಾಜ್ಯದ ಸುಮಾರು 50 ಸಾವಿರ ಕೋಟಿ ರು ಖನಿಜ ಸಂಪತ್ತನ್ನು ಗಣಿ ಧಣಿಗಳೊಂದಿಗೆ ಸೇರಿ ಲೂಟಿ ಮಾಡಿದ್ದರೆಂದು ಸಿದ್ದು ಆರೋಪಿಸಿದರು. id='are-slot-1' class='oiad oi-axt oiadv'> id='top-searched-articles'>ಅಪರೇಷನ್
ಕಮಲ ಮೂಲಕ ರಾಜ್ಯದಲ್ಲಿ ರಾಜಕೀಯ ವ್ಯಭಿಚಾರಕ್ಕೆ ಬಿಜೆಪಿ ನಾಂದಿ ಹಾಡಿತು. ದುಡ್ಡು ಬಾಚುವುದರಲ್ಲಿ ಯಡಿಯೂರಪ್ಪ ನಿಸ್ಸೀಮ, ಚಾಮುಂಡಿ ಬೆಟ್ಟದಲ್ಲಿರುವ ಮಹಿಷಾಸುರನೂ ಒಂದೇ, ಬೂಕನಕೆರೆ ಯಡಿಯೂರಪ್ಪನೂ ಒಂದೇ ಎಂದು ಸಿದ್ದು ಹಲ್ಲುಕಿರಿಯುತ್ತಾ ಯಡಿಯೂರಪ್ಪ ಅವರ ಮೇಲೆ ವಿಷಕಾರಿದರು.











Click it and Unblock the Notifications