ಶ್ರೀರಂಗಪಟ್ಟಣ ಬಳಿ ಕಾರು-ರೈಲು ಡಿಕ್ಕಿ: ಇಬ್ಬರ ಸಾವು
ಶ್ರೀರಂಗಪಟ್ಟಣ,
ಜುಲೈ 1: ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್ ಎಸ್ ರೈಲು ನಿಲ್ದಾಣದ ಬಳಿ ಶನಿವಾರ ರಾತ್ರಿ ರೈಲು, ಕಾರು ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಮೃತಪಟ್ಟಿದ್ದಾರೆ. ಇದರಿಂದ ರೊಚ್ಚಿಗೆದ್ದ ಸ್ಥಳೀಯರ ಜನ ಭಾನುವಾರ ತೀವ್ರ ಪ್ರತಿಭಟನೆ ನಡೆಸಿದ್ದಾರೆ. id="toptextpromo">ಮಲ್ಲೇಗೌಡನಹಳ್ಳಿಯ
ರಮೇಶ್ (40), ಪಾಂಡವಪುರ ತಾಲ್ಲೂಕಿನ ಸಿಂಧಬೋಗನಗ್ರಾಮದ ವೈಕುಂಠೇಗೌಡ (37) ಮೃತ ಪಟ್ಟವರು. ಮಾನವ ರಹಿತ ರೈಲ್ವೆ ಕ್ರಾಸಿಂಗ್ ಬಳಿ ರಾತ್ರಿ 9.05 ಗಂಟೆಗೆ ಈ ಅಪಘಾತ ಸಂಭವಿಸಿದೆ. id='are-slot-1' class='oiad oi-axt oiadv'> id='top-searched-articles'>ರೈಲು
ಅರಸೀಕೆರೆಯಿಂದ ಮೈಸೂರಿಗೆ ಬರುತ್ತಿತ್ತು. ಕಾರು ಮಲ್ಲೇಗೌಡನಹಳ್ಳಿಯಿಂದ ಕೆಆರ್‌ಎಸ್‌ಗೆ ಬರುತ್ತಿತ್ತು. ಡಿಕ್ಕಿಯ ರಭಸಕ್ಕೆ ಕಾರು ಎರಡು ತುಂಡಾಗಿದ್ದು ಅರ್ಧ ಕಿಲೋ ಮೀಟರ್ ದೂರದಲ್ಲಿ ಬಿದ್ದಿದ್ದು ಮೃತದೇಹಗಳು ಛಿದ್ರಗೊಂಡಿವೆ.











Click it and Unblock the Notifications