ತವರಿಗೆ ಹೊರಟ ದೀದಿ, ಸಚಿವ ಮುನಿಯಪ್ಪ ಅಷ್ಟೇ ಇನ್ನ ...

K H Muniyappa
ನವದೆಹಲಿ, ಜುಲೈ 3: ರೈಲ್ವೆ ಖಾತೆ ಸಹಾಯಕ ಸಚಿವ ಕೆ ಎಚ್ ಮುನಿಯಪ್ಪ ಅಕ್ಷರಶಃ ದೀದಿಗೆ ಸಹಾಯಕರಾಗಿದ್ದುಕೊಂಡು ನೇರವಾಗಿ ರಾಜ್ಯಕ್ಕೆ ಒಂದಷ್ಟು ರೈಲ್ವೆ ಯೋಜನೆಗಳನ್ನು ತರುವಲ್ಲಿ ಯಶಸ್ವಿಯಾಗುತ್ತಿದ್ದರು. ಆದರೆ ಈಗ ಬೋಗಿಯಿಂದ ಎಂಜಿನ್ ಬೇರ್ಪಟ್ಟಿದೆ. ಕುಮಾರಿ ಮಮತಾ ಬ್ಯಾಜರ್ಜಿ ಅವರು ತವರಿನಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಚಲಾಯಿಸುತ್ತಿರುವುದರಿಂದ ಸಚಿವಾಲಯದಲ್ಲಿ ಮುನಿಯಪ್ಪ ಅವರ ಹಿಡಿತ ಸಡಿಲವಾಗುತ್ತಿದೆ.

ಇನ್ನು ಪಕ್ಷದ ಬಲಗೈ ಬಂಟ ಮುನಿಯಪ್ಪ ಅವರನ್ನು ಕಾಂಗ್ರೆಸ್ಸೂ ಕಡೆಗಣಿಸಿದೆಯೇ? ಇಂತಹ ಅನುಮಾನಗಳಿಗೆ ಕಾರಣವಾಗುವ ಘಟನೆಗಳು ರೈಲ್ವೆ ಇಲಾಖೆಯಲ್ಲಿ ತಣ್ಣಗೆ ನಡೆಯುತ್ತಿವೆ. ಸಚಿವಾಲಯದಲ್ಲಿನ ಮೂವರು ರಾಜ್ಯ ಸಚಿವರ ಪೈಕಿ ಮಮತಾ ಬ್ಯಾನರ್ಜಿ ಅವರ ಪ್ರತಿನಿಧಿ ಮುಕುಲ್‌ ರಾಯ್‌ಗೆ ಬಹುತೇಕ ಎಲ್ಲಾ ಪ್ರಮುಖ ಜವಾಬ್ದಾರಿ ವಹಿಸಿದ್ದರೆ, ಮುನಿಯಪ್ಪ ಅವರಿಗೆ ಅಷ್ಟೇನು ಮಹತ್ವವಲ್ಲದ ವ್ಯವಹಾರಗಳನ್ನು ತಗುಲಿ ಹಾಕುವ ಮೂಲಕ ಇದ್ದೂ ಇಲ್ಲದಂತೆ ಮಾಡುವ ಜಾಣತನ ತೋರಿದಂತೆ ಕಾಣುತ್ತಿದೆ.

ಮಮತಾ ಬ್ಯಾನರ್ಜಿ ರೈಲ್ವೆ ಖಾತೆ ಕ್ಯಾಬಿನೆಟ್‌ ಸಚಿವ ಸ್ಥಾನ ಬಿಟ್ಟ ಮೇಲೆ ಅದನ್ನು ಸ್ವತಃ ಪ್ರಧಾನಿ ಸಿಂಗ್‌ ವಹಿಸಿಕೊಂಡಿದ್ದಾರೆ. ಇನ್ನು ಖಾತೆಯಲ್ಲಿ ತಮ್ಮ ಪ್ರತಿನಿಧಿಯೊಬ್ಬರಿರಲಿ ಎನ್ನುವ ಕಾರಣಕ್ಕೆ ಪಕ್ಷದ ಸಂಸದ ಮುಕುಲ್‌ ರಾಯ್‌ ಅವರಿಗೆ ಇತ್ತಿಚೆಗಷ್ಟೇ ರೈಲ್ವೆ ಖಾತೆಯ ರಾಜ್ಯ ಸಚಿವ ಹುದ್ದೆಯನ್ನು ಮಮತಾ ದಯಪಾಲಿಸಿಕೊಂಡಿದ್ದರು.

ಅಚ್ಚರಿಯೆಂದರೆ ಹುದ್ದೆ ಏರಿ ಇನ್ನೂ ತಿಂಗಳಾಗದ ರಾಯ್‌ಗೆ ಇಲಾಖೆಯ 11 ಪ್ರಮುಖ ವಿಷಯಗಳಿಗೆ ಸಂಬಂಧಿಸಿದ ಹೊಣೆಯನ್ನು ವಹಿಸಲಾಗಿದೆ. ಅಂದರೆ ರೈಲ್ವೆ ಇಲಾಖೆಯ ಬಹುತೇಕ ಎಲ್ಲಾ ಪ್ರಮುಖ ನಿರ್ಧಾರಗಳನ್ನು ರಾಯ್‌ ತೆಗೆದುಕೊಂಡು, ಅದನ್ನು ಸಚಿವ ಸಂಪುಟ ಅಥವಾ ಪ್ರಧಾನಿ ಸಿಂಗ್‌ಗೆ ಕಳುಹಿಸಿಕೊಡುವ ಕೆಲಸ ಮಾಡಲಿದ್ದಾರೆ.

ಇದಾದ ಬಳಿಕದ ಕೆಲ ಪ್ರಮುಖ ಕಾರ್ಯಗಳ ನಿರ್ವಹಣೆ ಹೊಣೆ ಸಿಕ್ಕಿರುವುದು ಮತ್ತೂಬ್ಬ ರೈಲ್ವೆ ಖಾತೆ ರಾಜ್ಯ ಸಚಿವ ಭರತ್‌ಸಿನ್ಹಾ ಸೋಲಂಕಿಗೆ. ಅಚ್ಚರಿ ಎಂದರೆ ಕಾಂಗ್ರೆಸ್‌ನ ಹಿರಿಯ ನಾಯಕರ ಪೈಕಿ ಒಬ್ಬರಾದ ಮುನಿಯಪ್ಪ ಅವರಿಗೆ ಲೆವೆಲ್‌ ಕ್ರಾಸಿಂಗ್‌, ವೇತನ ಆಯೋಗಕ್ಕೆ ಸಂಬಂಧಿಸಿದ ವಿಷಯ, ನೌಕರರ ಆಸ್ಪತ್ರೆಗಳಿಗೆ ಸಂಬಂಧಿಸಿದ ವಿಷಯ, ರೈಲ್ವೆ ಇಲಾಖೆ ನಿರ್ವಹಿಸುವ ಶಿಕ್ಷಣ ಸಂಸ್ಥೆ ಮತ್ತು ಸಾರ್ವಜನಿಕ ದೂರುಗಳ ಬಗ್ಗೆ ಹೀಗೆ ಅಷ್ಟೇನು ಪ್ರಮುಖವಲ್ಲದ ಕೆಲಸಗಳ ಹೊಣೆ ವಹಿಸಲಾಗಿದೆ. ಮುನಿನಿಪ್ಪ ಇಷ್ಟೇನೇ...ಅನ್ನುವಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+