ಈಶ್ವರಪ್ಪ ಮೇಲೆ ಯಡಿಯೂರಪ್ಪಂಗೆ ಯಾಕೆ ಮುನಿಸು?
ಶಿವಮೊಗ್ಗ
ಜು 3: ಆಣೆ ಪ್ರಮಾಣದ ಪ್ರಹಸನವನ್ನು ಹಾಗೋ ಹೀಗೋ ಮಾಡಿ ಮುಗಿಸಿದ ಸಿಎಂ ಯಡಿಯೂರಪ್ಪ ಅವರಿಗೆ ಮತ್ತದೇ ಹಳೆ ತಲೆನೋವು ಕಾಣಿಸಿಕೊಂಡಿದೆ. ಸಚಿವ ಸಂಪುಟ ವಿಸ್ತರಣೆ ಎಂದರೆ ಜೇನು ಗೂಡಿಗೆ ಕೈ ಹಾಕುವ ಕೆಲಸ ಎಂಬುದನ್ನು ಅರಿತಿರುವ ಸಿಎಂ, ಮಾಧ್ಯಮದ ಮುಂದೆ ಈ ಬಗ್ಗೆ ಏನು ಹೇಳದೆ ನುಣುಚಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಆಷಾಢ ನಂತರ ಸಂಪುಟ ವಿಸ್ತರಣೆ ಶತಃಸಿದ್ಧ ಎಂದು ಈಶ್ವರಪ್ಪ ಎಲ್ಲೆಡೆ ಹೇಳಿಕೊಂಡು ತಿರುಗುತ್ತಿರುವುದು ಸಿಎಂಗೆ ಕಿರಿಕಿರಿ ಉಂಟು ಮಾಡುತ್ತಿದೆ. id="toptextpromo">ರಾಜ್ಯ
ಸಚಿವ ಸಂಪುಟದಲ್ಲಿ ಖಾಲಿ ಇರುವ ಆರೇಳು ಸೀಟಿಗಾಗಿ ಸುಮಾರು 20 ಮಂದಿ ಕಾದು ಕೂತಿದ್ದಾರೆ. ಎಂಎಲ್ ಎ ಸಿಪಿ ಯೋಗೀಶ್ವರ ಹಾಗೂ ಸ್ವತಂತ್ರ ಅಭ್ಯರ್ಥಿ ವರ್ತೂರು ಪ್ರಕಾಶ್ ಮಂಚೂಣಿಯಲ್ಲಿದ್ದಾರೆ. ಸಿಟಿ ರವಿ ಜೊತೆಗೆ ಮೂಲ ಬಿಜೆಪಿ ಶಾಸಕರು ಸಚಿವ ಸ್ಥಾನಕ್ಕೆ ಸುಮಾರು ವರ್ಷದಿಂದ ಅರ್ಜಿ ಸಲ್ಲಿಸುತ್ತಲೇ ಬಂದಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಈ
ಮಧ್ಯೆ ಈಶ್ವರಪ್ಪ ಅವರ ರಾಜ್ಯ ಪ್ರವಾಸದ ಬಗ್ಗೆ ಯಡಿಯೂರಪ್ಪ ಅವರಿಗೆ ಅಸಮಾಧಾನ ಉಂಟಾಗಿದೆ. ಸುಮಾರು 11 ಜಿಲ್ಲೆಗಳಲ್ಲಿ ಈಶ್ವರಪ್ಪ ಸುತ್ತಾಡಿ ಬಂದಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಜಿಲ್ಲಾ ಪ್ರವಾಸದ ಅವಶ್ಯಕತೆ ಏನಿದೆ ಎಂದು ಯಡಿಯೂರಪ್ಪ ಪಶ್ನಿಸಿದ್ದಾರೆ. ಹೋದ ಕಡೆ ಎಲ್ಲಾ ಶಾಸಕರಿಗೆ ಆಶ್ವಾಸನೆ ನೀಡುತ್ತಾ, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಘೋಷಿಸುತ್ತಿದ್ದಾರೆ. ಇವರ ವರ್ತನೆ ಮತ್ತು ರಾಜಕಾರಣದ ರೀತಿಯಿಂದ ಯಡಿಯೂರಪ್ಪ ಬೇಸರಗೊಂಡಿದ್ದಾರೆ.











Click it and Unblock the Notifications