ಅರಾಜ'ಕತೆ': ಮಿಣ ಮಿಣ ಮೀನಾ, ತಲೆಚಚ್ಚಿಕೊಂಡ ಶಾಸಕ

ಘಟನೆ ಒಂದು: ಕೋಲಾರದ ವಕ್ಕಲೇರಿ ಜಿ.ಪಂ. ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಛತ್ರಕೋಡಿಹಳ್ಳಿ ಮತಗಟ್ಟೆಯಲ್ಲಿ ಕೆಲವರು ಅಕ್ರಮ ಮತದಾನದಲ್ಲಿ ತೊಡಗಿದ್ದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಮನೋಜ್ ಕುಮಾರ್ ಮೀನಾ ಮತದಾರನೊಬ್ಬನ ಕತ್ತಿನ ಪಟ್ಟಿ ಹಿಡಿದುಕೊಂಡು ಗುಂಪು ಚದುರಿಸಲು ಮುಂದಾದರು. ಸುಮ್ಮನೆ ನಿಂತಿದ್ದವರನ್ನೂ ಬಿಡದೆ ಲಾಠಿ ಹಿಡಿದು ಮೀನಾ ಮಿಣ ಮಿಣ ಮಿಂಚಿದರು.
ಘಟನೆ ಎರಡು: ಇದು ಕೋಲಾರದ ಚೆನ್ನಯ್ಯ ರಂಗಮಂದಿರದಲ್ಲಿ ನಡೆದ ಘಟನೆ; ಮತ್ತೊಮ್ಮೆ ಅದೇ ಅಧಿಕಾರಿ ಇಲ್ಲಿಯೂ ಖಳನಾಯಕ. ಸುವರ್ಣ ಭೂಮಿ ಯೋಜನೆಗೆ ತಾಲ್ಲೂಕಿನ ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡುವಲ್ಲಿ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿ, ಕರ್ನಾಟಕ ರಕ್ಷಣಾ ವೇದಿಕೆ ಮುಖಂಡ ಕೃಷ್ಣೇಗೌಡ ಆಯ್ಕೆ ಪ್ರಕ್ರಿಯೆಯನ್ನು ಪ್ರಶ್ನಿಸಿದರು. ಅಷ್ಟಕ್ಕೇ ಸಿಟ್ಟಿಗೆದ್ದ ಜಿಲ್ಲಾಧಿಕಾರಿ ಮೀನಾ, ಕೃಷ್ಣೇಗೌಡರನ್ನು ಎಳೆದು, ಅವರ ಕತ್ತಿಗೆ ಕೈ ಹಾಕಿ ಹೊರಕ್ಕೆ ತಳ್ಳಿದರು.
ದಾಖಲಾರ್ಹ ಸಂಗತಿ ಏನೆಂದರೆ ಚಾಮರಾಜನಗರದಲ್ಲಿ ಜಿಲ್ಲಾಧಿಕಾರಿಯಾಗಿದ್ದಾಗ (ಡಿಸೆಂಬರ್12, 2009) ಇದೇ ಖಳನಾಯಕ್ ಅಧಿಕಾರಿ ಮೀನಾ, ರೈತರ ಮೇಲೆ ಲಾಠಿ ಪ್ರಹಾರಕ್ಕಿಳಿದು ಸರಕಾರವನ್ನು ಮುಜಗುರಕ್ಕೀಡುಮಾಡಿದ್ದರು. ಅದೇ ಕಾರಣಕ್ಕೆ ಜಿಲ್ಲೆಯಿಂದ ಎತ್ತಂಗಡಿಯೂ ಆಗಿದ್ದರು. ಆಣೆ-ಪ್ರಮಾಣ ರಾಜಕೀಯದಿಂದ ಒಂದಷ್ಟು ಬಿಡುವು ಪಡೆದಂತೆ ಕಾಣುತ್ತಿರುವ ನಾಡಿನ ಮುಖ್ಯಮಂತ್ರಿಗಳು ಇಂತಹ ಉದ್ದಟತನದ ಅಧಿಕಾರಿ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತಾರೋ?
ಘಟನೆ ಮೂರು: ಮೈಸೂರಿನಲ್ಲಿ ರಸ್ತೆ ಬದಿ ವ್ಯಾಪಾರಿಗಳನ್ನು ಎತ್ತಂಗಡಿ ಮಾಡುವುದರ ವಿರುದ್ಧ ಪ್ರತಿಭಟನೆ ನಡೆಯುತ್ತಿತ್ತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಶಾಸಕ ಎಚ್. ಎಸ್. ಶಂಕರಲಿಂಗೇಗೌಡರು ವ್ಯಾಪಾರಿಗಳ ಪರ ನಿಂತು, ಅಧಿಕಾರಿಗಳ ವಿರುದ್ಧ ಸಿಟ್ಟಿಗೆದ್ದರು. ಪೊಲೀಸರಿಂದ ಲಾಠಿ ಕಿತ್ತುಕೊಂಡವರೇ ಒಂದೇ ಸಮನೆ ಲಾಠಿಯಿಂದ ತಮ್ಮ ಹಣೆ ಚಚ್ಚಿಕೊಳ್ಳತೊಡಗಿದರು ...












Click it and Unblock the Notifications