ಕನ್ನಡಿಗರಿಗೆ ಉದ್ಯೋಗ ನೀಡದ್ದಕ್ಕೆ ಕೋರ್ಟ್ ತರಾಟೆ

ನಿನ್ನೆ ರಾಜ್ಯ ಹೈಕೋರ್ಟಿನಲ್ಲಿ ವಿಚಾರಣೆ ನಡೆಸಿದ ಒಂದು ಪ್ರಕರಣವನ್ನೇ ತೆಗೆದುಕೊಳ್ಳಿ. ಇಂತಹ ಕಂಪನಿಗಳ ದಾಷ್ಟ್ಯಕ್ಕೆತಕ್ಕ ಉತ್ತರವನ್ನೇ ಕೋರ್ಟ್ ನೀಡಿದೆ. ಭೂಕಳೆದುಕೊಂಡವರಿಗೆ ಭೂಮಿ ನೀಡದಕ್ಕೆ ವೊಲ್ವೊ ಇಂಡಿಯಾ ಕಂಪನಿಯನ್ನು ಕೋರ್ಟ್ ತರಾಟೆಗೆ ತೆಗೆದುಕೊಂಡದ್ದು ಹೀಗೆ.
ಏನಿದು ಪ್ರಕರಣ: ಕರ್ನಾಟಕ ಕೈಗಾರಿಕಾ ಭೂ ಅಭಿವೃದ್ಧಿ ಪ್ರಾಧಿಕಾರವು ಬೆಂಗಳೂರಿನಲ್ಲಿ ವೊಲ್ವೊ ಇಂಡಿಯಾ ಕಂಪನಿಯ ಘಟಕ ನಿರ್ಮಾಣಕ್ಕಾಗಿ 189 ಎಕರೆ ಭೂಮಿ ನೀಡಿತ್ತು. ರೈತರಿಂದ ವಶಪಡಿಸಿಕೊಂಡ ಭೂಮಿಗೆ ಪರಿಹಾರ ರೂಪದಲ್ಲಿ ರೈತರ ಕುಟುಂಬದ ವ್ಯಕ್ತಿಗೆ ಕಂಪನಿ ಉದ್ಯೋಗ ನೀಡಬೇಕಿತ್ತು. ಭೂಮಿ ಕಳೆದುಕೊಂಡ ನನಗೆ ಇನ್ನೂ ಕಂಪನಿ ಉದ್ಯೋಗ ನೀಡಿಲ್ಲವೆಂದು ವೆಂಕಟೇಶ ಗೌಡ ಎಂಬವರು ದೂರು ದಾಖಲಿಸಿದ್ದರು.
ವಿಚಾರಣೆ ನಡೆಸಿದ ಕೋರ್ಟ್ ಭೂಮಿ ಕಳೆದುಕೊಂಡವರಿಗೆ ಉದ್ಯೋಗ ನೀಡಿದ ಕುರಿತು ದಾಖಲೆಯನ್ನು ಕಂಪನಿಯಲ್ಲಿ ಕೇಳಿತ್ತು. ಆದರೆ ಸ್ಥಳೀಯ 12 ಜನರಿಗೆ ಖಾಯಂ ಉದ್ಯೋಗ ಮತ್ತು 7 ಜನರನ್ನು ಗುತ್ತಿಗೆ ಆಧಾರದಲ್ಲಿ ನೇಮಕಮಾಡಿಕೊಳ್ಳಲಾಗಿದೆ ಎಂದು ಹೇಳಿದ ಕಂಪನಿಯು ಭೂಮಿ ಕಳೆದುಕೊಂಡವರ ಕುರಿತಾದ ಮಾಹಿತಿ ಇಲ್ಲವೆಂದು ಹೇಳಿತು.
ಬೆರಳೆಣಿಕೆಯ ಜನರಿಗೆ ಉದ್ಯೋಗ ನೀಡಿರುವುದು ಮತ್ತು ಭೂಮಿ ಕಳೆದುಕೊಂಡವರ ಮಾಹಿತಿ ಇಲ್ಲವೆಂದದ್ದು ನ್ಯಾಯಮೂರ್ತಿ ಶೈಲೇಂದ್ರ ಕುಮಾರ್ ನ್ನು ಕೆರಳಿಸಿತು. ನೀವು ಸರಕಾರದಂತೆ ವರ್ತಿಸಬೇಡಿ. ಯಾರೆಲ್ಲ ಭೂಮಿಯನ್ನು ಕಳೆದುಕೊಂಡಿದ್ದರೋ ನಿಯಮ ಪ್ರಕಾರ ಅವರಿಗೆ ಉದ್ಯೋಗ ನೀಡಿ ಎಂದು ಆದೇಶಿಸಿದರು.












Click it and Unblock the Notifications