ತುಮಕೂರು ಜಿಲ್ಲೆಯಲ್ಲಿ ಯಮದೂತ ಟೆಂಪೊ ಟ್ರ್ಯಾಕ್ಸ್ ಇನ್ನಿಲ್ಲ

ತುಮಕೂರಿನಿಂದ ಕಿಬ್ಬನಹಳ್ಳಿ ಕ್ರಾಸ್ ವರೆಗೆ ಪ್ರತಿನಿತ್ಯ ನೂರಾರು ಟೆಂಪೋ ಟ್ರ್ಯಾಕ್ಸ್ ಗಳು ಸಂಚರಿಸುತ್ತಿದ್ದು, ಈ ಟ್ರ್ಯಾಕ್ಸ್ ನ ಚಾಲಕರು ಅತಿ ವೇಗ ಮತ್ತು ಅಜಾಗರೂಕತೆಯಿಂದ ಸಂಚರಿಸುವುದು ಸಾಮಾನ್ಯ. ಈ ಅಪಘಾತಕ್ಕೂ ಟೆಂಪೋ ಟ್ರ್ಯಾಕ್ಸ್ ಚಾಲಕನ ಅಜಾಗರೂಕತೆಯೇ ಕಾರಣ ಎನ್ನಲಾಗಿದೆ.
ಮೊದಲೇ ಟೆಂಪೋ ಚಾಲಕ ಸುಧೀರ್ ವೇಗವಾಗಿ ವಾಹನ ಚಲಾಯಿಸುತ್ತಿದ್ದ. ಅದರ ಜೊತೆಗೆ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ. ಎದುರಿಗೆ ಬರುತ್ತಿದ್ದ ವಾಹನಗಳ ಬಗ್ಗೆ ಆತನಿಗೆ ಪರಿವೆಯೇ ಇಲ್ಲದಾಗಿತ್ತು.
ನಿಯಮ ಪಾಲಿಸುವವರೇ ಇಲ್ಲ!
ಇನ್ನು ಜಿಲ್ಲೆಯಾದ್ಯಂತ ಸಂಚರಿಸುವ ಖಾಸಗಿ ಬಸ್ ಗಳಿಂದ ಹಿಡಿದು ಟೆಂಪೋಗಳವರೆಗೆ ಯಾರೊಬ್ಬರೂ ಸಂಚಾರ ನಿಯಮ ಪಾಲಿಸುವುದೇ ಇಲ್ಲ ಎಂಬ ದೂರು ವ್ಯಾಪಕವಾಗಿದೆ. ಸಂಚಾರಿ ನಿಯಮಗಳು ಹಾಗೂ ಮೋಟಾರು ವಾಹನಗಳ ಕಾಯ್ದೆ ನಿಯಮವನ್ನು ಸಂಪೂರ್ಣವಾಗಿ ಗಾಳಿಗೆ ತೂರಲಾಗಿದೆ. ಟೆಂಪೋ ಟ್ರ್ಯಾಕ್ಸ್ ನಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ತುಂಬಿಕೊಳ್ಳಲಾಗಿದೆ.
ರಾಷ್ಟ್ರೀಯ ಹೆದ್ದಾರಿ -206 ರಲ್ಲಿ ಸಂಚರಿಸುವ ಟೆಂಪೋಗಳು ಸಂಚಾರಿ ನಿಯಮವನ್ನು ಉಲ್ಲಂಘಿಸಿ ಸಂಚಾರಿ ಪೊಲೀಸರ ಎದುರಿಗೇ ಜನರನ್ನು ಕುರಿಯಂತೆ ತುಂಬಿಕೊಂಡು ಹೋಗುತ್ತಿದ್ದರೂ ಅವರು ದಿವ್ಯ ಮೌನ ವಹಿಸುತ್ತಾರೆ.












Click it and Unblock the Notifications