ಬಿಗಿಭದ್ರತೆಯಲ್ಲಿ ಭಕ್ತರ ಅಮರನಾಥ ಯಾತ್ರೆ
"ಅಮರನಾಥ
ಯಾತ್ರೆಯ ಸುರಕ್ಷತೆಗಾಗಿ ಹತ್ತು ಸಾವಿರಕ್ಕೂ ಹೆಚ್ಚು ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಇದರಲ್ಲಿ ಸುಮಾರು 5 ಸಾವಿರ ಸಂಖ್ಯೆಯ ಸಿಆರ್ ಪಿಎಫ್ ಯೋಧರು ಮತ್ತು ಅಷ್ಟೇ ಸಂಖ್ಯೆಯಲ್ಲಿ ರಾಜ್ಯ ಪೊಲೀಸ್ ಸಿಬ್ಬಂದಿಗಳಿದ್ದಾರೆ" ಎಂದು ಭದ್ರತಾ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. id="toptextpromo">"ಜಮ್ಮುಮತ್ತು
ಕಾಶ್ಮಿರದ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಹೆಚ್ಚಿನ ಕಡೆಗಳಲ್ಲಿ ಮಿಲಿಟರಿ ಪಡೆಗಳು ಯಾತ್ರಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ. ಭಯೋತ್ಪಾದಕರ ದಾಳಿ ಕುರಿತು ಇಂಟಲಿಜೆನ್ಸ್ ಯಾವುದೇ ಮುನ್ಸೂಚನೆ ನೀಡಿಲ್ಲ" ಎಂದರು. id='are-slot-1' class='oiad oi-axt oiadv'> id='top-searched-articles'>"ಇಂದು
ಅಮರನಾಥ ಯಾತ್ರೆಯ ಸುಮಾರು 2 ಸಾವಿರ ಭಕ್ತರ ಮೊದಲ ತಂಡವು ಜಮ್ಮುವಿನಿಂದ ಹೊರಟಿದೆ. ಈ ವರ್ಷ ಸುಮಾರು 2.5 ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆಯಿದೆ" ಎಂದರು. ಅಮರನಾಥ ಯಾತ್ರೆಯು ಆಗಸ್ಟ್ 13ರ ರಕ್ಷಾ ಬಂಧನದಂದು ಕೊನೆಗೊಳ್ಳಲಿದೆ.











Click it and Unblock the Notifications