ದಿವ್ಯಾ ಮರ್ಡರ್ : ಕೊಂದವ ಪ್ರೇಮಿಯಲ್ಲ, ವಿಕೃತ ಕಾಮಿ

ಜಗಳವಾಡುವಾಗ ನಾನು ಆಕೆಯನ್ನು ದೂಡಿದೆ. ಆದು ಅವಳ ಜೀವಕ್ಕೆ ಅಪಾಯವಾಯಿತು. ಕಲ್ಲಿಗೆ ತಲೆ ಬಡಿದು ಅವಳು ಅಲ್ಲೇ ಹೆಣವಾಗಿ ಬಿಟ್ಟಳು ಎಂದು ಗೋಳಾಡಿದ್ದ ಅಶೋಕ್ ನಿಜ ಬಣ್ಣ ಈಗ ಬಯಲಾಗಿದೆ. ಗೋರೆಗುಡ್ಡಕ್ಕೆ ಕರೆದೊಯ್ದ ಫ್ಯಾಶ್ ಬಾಕ್ ಕಥೆ ಓದಿ...ನಂತರ ದಿವ್ಯಾಳನ್ನು ಪುಸಲಾಯಿಸಿ ದೈಹಿಕವಾಗಿ ಬಳಸಿಕೊಂಡಿದ್ದಾನೆ. ನಂತರ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ. ಸಾಲದ್ದಕ್ಕೆ ತಲೆ ಮೇಲೆ ಕಲ್ಲು ಎತ್ತಿಹಾಕಿದ್ದಾನೆ. ಆಕೆಯನ್ನು ಬಲಾತ್ಕರಿಸಿ ಹತ್ಯೆ ಮಾಡಿರುವ ಬಗ್ಗೆ ಶವಪರೀಕ್ಷೆಯಿಂದ ದೃಢಪಟ್ಟಿದೆ. ಅಶೋಕ, ಹೆಣದ ಮೇಲೂ ತನ್ನ ಕಾಮನೆ ತೀರಿಸಲು ಮುಂದಾಗಿದ್ದನೋ ಇಲ್ಲವೋ ಸ್ಪಷ್ಟವಾಗಿಲ್ಲ.ಕೊಲೆ ಮಾಡಿದ್ದು ಮಾತ್ರ ಅಶೋಕ್ ಎಂದು ಸ್ಪಷ್ಟವಾಗಿದೆ.
"ಮೊದಲು ಅವಳು ಯಾರಿಗೂ ಸಿಗಬಾರದು ಎಂದು ಹೀಗೆ ಕೊಲೆ ಮಾಡಿದೆ ನನಗೆ ಅವಳನ್ನು ಮದುವೆಯಗುವ ಧೈರ್ಯ ಇರಲಿಲ್ಲ. ಕೊಲೆ ಆದ ಮೇಲೆ ಬಟ್ಟೆ ಬಿಚ್ಚಿ, ಪ್ರಕರಣಕ್ಕೆ ಬೇರೆ ಅರ್ಥ ಕಲ್ಪಿಸಲು ಯತ್ನಿಸಿದೆ. ನಂತರ ಭಯಗೊಂಡು, ಬೆಂಗಳೂರು, ಹೊಳೆನರಸೀಪುರ, ಹಾಸನ, ಮಂಗಳೂರು, ಸುಳ್ಯ ಎಲ್ಲೆಡೆ ಸುತ್ತಾಡಿದೆ. ಕೊನೆಗೆ ತಾಳಗುಪ್ಪ ಬಳಿ ನೆಲೆಸಿದ್ದೆ" ಎಂದು ವಿಕೃತ ಪ್ರೇಮಿ ಅಶೋಕ್ ಹೇಳುತ್ತಾನೆ.
ಅಂತೂ ಕುಮಟಾ ಸಮೀಪದ ಚಿತ್ರಗಿಯ ಉಲ್ಲಾಸ ನಗರದ ಟೇಲರ್ ವಿಷ್ಣು ನಾಯ್ಕ ಹಾಗೂ ಲಲಿತಾರ ಒಬ್ಬಳೇ ಮಗಳು ದಿವ್ಯಾಶ್ರೀ ದಾರುಣ ಅಂತ್ಯ ಕಂಡಿದ್ದಾಳೆ. ಹದಿನೈದು ವರ್ಷಗಳ ಕೆಳಗೆ ಸಾಗರದಲ್ಲಿ ಚೈತ್ರಾ ಎಂಬುವಳನ್ನು ಮದುವೆಯಾಗಬೇಕಿದ್ದ ಶ್ರೀಧರ ಕೂಡಾ ಇದೇ ರೀತಿ ಕೊಂದಿದ್ದ ಘಟನೆ ಪೊಲೀಸರಿಗೆ ನೆನಪಾಗುತ್ತಿದೆ. ಒಟ್ಟಿನಲ್ಲಿ ಈ ವಿಚಿತ್ರ ಪ್ರಕರಣ ಕಂಡು ಕುಮಟಾ ಜನ ಬೆಚ್ಚಿದ್ದಾರೆ.












Click it and Unblock the Notifications