ತುಮಕೂರು: ಟೆಂಪೋ KSRTC ಬಸ್ ಢಿಕ್ಕಿ, 15 ಸಾವು

ಹೆಗ್ಗರೆಯ ಸಿದ್ದಾರ್ಥ ಮೆಡಿಕಲ್ ಕಾಲೇಜು ಬಳಿ ಸಂಭವಿಸಿದ ಟೆಂಪೋ ಟ್ರಾಕ್ಸ್ ಹಾಗೂ ಕೆಎಸ್ಆರ್ ಟಿಸಿ ಬಸ್ ಢಿಕ್ಕಿಯಿಂದ ಟೆಂಪೋದಲ್ಲಿದ್ದ ಅಷ್ಟೂ ಜನ ಸತ್ತಿದ್ದಾರೆ. ಗಾಯಾಳುಗಳನ್ನು ಗುಬ್ಬಿ ಹಾಗೂ ತುಮಕೂರಿನ ಸರ್ಕಾರಿ ಆಸ್ಪತೆಗೆ ಸೇರಿಸಲಾಗಿದೆ. ರಸ್ತೆ ಅಪಘಾತಕ್ಕೆ ಚಾಲಕರ ನಿರ್ಲಕ್ಷ್ಯ, ಅತಿ ವೇಗದ ಚಾಲನೆ ಕಾರಣ ಇರಬಹುದು. ಆದರೆ, ರಸ್ತೆಗಳಲ್ಲಿ ಯಾವುದೇ ದೋಷಗಳಿಲ್ಲ. ಆ ಭಾಗದ ರಸ್ತೆಗಳು ಸುಸ್ಥಿತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ಸೋಮಶೇಖರ್ ಪ್ರತಿಕ್ರಿಯಿಸಿದ್ದಾರೆ.
ಗಾಯಾಳುಗಳಿಗೆ ಉಚಿತ ಚಿಕಿತ್ಸೆಗೆ ಏರ್ಪಾಡು ಮಾಡಲಾಗುವುದು ಹಾಗೂ ಮೃತರ ಕುಟುಂಬಕ್ಕೆ ತಲಾ 50 ಸಾವಿರ ರೂ ನೀಡಲಾಗುವುದು ಈ ಅಪಘಾತದಲ್ಲಿ ಸರ್ಕಾರಿ ಬಸ್ ಚಾಲಕನದ್ದು ಏನು ತಪ್ಪಿಲ್ಲ. ಬಸ್ ಓವರ್ ಟೇಕ್ ಮಾಡುವಾಗ ಟೆಂಪೋ ಡ್ರೈವರ್ ನಿಯಂತ್ರಣ ಕಳೆದುಕೊಂಡು ಬಸ್ ಗೆ ಗುದ್ದಿದ್ದಾನೆ
ಈ ಭಾಗದಲ್ಲಿ ವಿಶೇಷವಾಗಿ ಮಂಡ್ಯ, ತುಮಕೂರು ಕಡೆ ಖಾಸಗಿ ವಾಹನಗಳ ಹಾವಳಿ ಬಗ್ಗೆ ದೂರುಗಳು ಕೇಳಿ ಬಂದಿದೆ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಸಾರಿಗೆ ಸಚಿವ ಆರ್ ಅಶೋಕ್ ಹೇಳಿದ್ದಾರೆ.












Click it and Unblock the Notifications