ಚಿತ್ರದುರ್ಗ: ಒಂಟಿ ಮಹಿಳೆ ಕೊಲೆ, 2 ಲಕ್ಷ ಅಭರಣ ಅಪಹರಣ

Lonely Woman Murder Chitradurga
ಚಿತ್ರದುರ್ಗ ಜೂ 24: ಹಳ್ಳಿಯಾದರೇನು? ದಿಲ್ಲಿಯಾದರೇನು? ಒಂಟಿ ಮಹಿಳೆಯರು ಪಾತಕಿಗಳಿಗೆ ಸುಲಭದ ಟಾರ್ಗೆಟ್. ಒಂಟಿ ಮಹಿಳೆಗೆ ರಕ್ಷಣೆ ಇಲ್ಲದ್ದಂತಾಗಿದೆ. ಮನೆಯಲ್ಲಿದ್ದ ಒಂಟಿ ಮಹಿಳೆಯ ಕೈಕಾಲು ಕಟ್ಟಿ ಕುತ್ತಿಗೆ ಬಿಗಿದು ದುಷ್ಕರ್ಮಿಗಳು ಹತ್ಯೆ ಮಾಡಿದ ಘಟನೆ ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಹೊಸದುರ್ಗ ತಾಲೂಕಿನ ಜಾನಕಲ್ ಗ್ರಾಮದ ಬಸ್ ಏಜೆಂಟ್ ರಂಗನಾಥ್ ಅವರ ಪತ್ನಿ ಅನ್ನಪೂರ್ಣಮ್ಮ(48) ಹತ್ಯೆಗೀಡಾದ ನತದೃಷ್ಟೆ. ಬಸ್ ಏಜೆಂಟ್ ಆಗಿರುವ ರಂಗನಾಥ್, ಬಡ್ಡಿ ವ್ಯವಹಾರವನ್ನು ನಡೆಸುತ್ತಿದ್ದಾರೆ. ಕೆಲಸದ ಮೇಲೆ ಹೊಸದುರ್ಗಕ್ಕೆ ಹೋಗಿದ್ದರು. ಮನೆಯಲ್ಲಿ ಅನ್ನಪೂರ್ಣಮ್ಮ ಒಬ್ಬರೇ ಇದ್ದ ವೇಳೆ ದುಷ್ಕರ್ಮಿಗಳು ಎಂಟ್ರಿ ಕೊಟ್ಟಿದ್ದಾರೆ. ಯಾರು ಏನು ಎಂದು ಈಕೆ ವಿಚಾರಿಸುವಷ್ಟರಲ್ಲಿ ಅನ್ನಪೂರ್ಣಮ್ಮ ಅವರ ಬಾಯಿಗೆ ಬಟ್ಟೆ ತುರುಕಿ, ಕೈಕಾಲು ಕಟ್ಟಿಹಾಕಿದ್ದಾರೆ.

ಮನೆಯಲ್ಲಿ ಇಟ್ಟಿದ್ದ ಆಭರಣಗಳನ್ನು ದೋಚಿದ ಮೇಲೆ ಆಕೆ ಕುತ್ತಿಗೆ ಬಿಗಿದು ಸಾಯಿಸಿ, ಮಾಂಗಲ್ಯ ಸರ, ಬಳೆ ಕಿತ್ತುಕೊಂಡು ಪರಾರಿಯಾಗಿದ್ದಾರೆ. ರಾತ್ರಿ ತಡವಾಗಿ ಮನೆಗೆ ಬಂದ ರಂಗನಾಥ್, ಪತ್ನಿ ಕೊಲೆಯಾಗಿರುವುದನ್ನು ಕಂಡು ದಿಗ್ಭ್ರಾಂತನಾಗಿ ಪೊಲೀಸರಿಗೆ ತಿಳಿಸಿದ್ದಾರೆ.

ಊರ ಮಧ್ಯದಲ್ಲಿರುವ ರಂಗನಾಥ್ ಮನೆಯಲ್ಲಿ ನಡೆದಿರುವ ಈ ಕೊಲೆಯಿಂದ ನಗರದ ಜನತೆ ಬೆಚ್ಚಿಬಿದ್ದಿದ್ದಾರೆ. ಬಡ್ಡಿ ವ್ಯವಹಾರ ಅನ್ನಪೂರ್ಣಮ್ಮ ಅವರನ್ನು ಬಲಿ ತೆಗೆದುಕೊಂಡಿತೇ ಎಂಬ ಪ್ರಶ್ನೆಯೊಂದಿಗೆ ಹೊಸದುರ್ಗ ಪೊಲೀಸರು ದುಷ್ಕರ್ಮಿಗಳಿಗೆ ಬಲೆ ಬೀಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+