ಇಸ್ರೋ ಉದ್ಯೋಗಿ, ಕಚೇರಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ
ಬೆಂಗಳೂರು
ಜೂ 24: ಮುಂದಿನ ತಿಂಗಳು ಕೆಲಸದಿಂದ ರಿಟೈರ್ ಆಗಬೇಕಿದ್ದ ಇಸ್ರೋ ಉದ್ಯೋಗಿಯೊಬ್ಬರು, ಕಚೇರಿಯಲ್ಲಿದ್ದ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಕೌಂಟ್ ಆಫೀಸರ್ ಆಗಿದ್ದ ಚಂದ್ರಶೇಖರ್(60) ಅವರು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ಕೆಲಸದಿಂದ ನಿವೃತ್ತಿ ಹೊಂದುತ್ತಿರುವ ವಿಷಯ ಅವರನ್ನು ಕಾಡಿಸುತ್ತಿತ್ತು ಎಂದು ಅವರ ಸಹದ್ಯೋಗಿಗಳು ಹೇಳಿದ್ದಾರೆ. id="toptextpromo">ರಾಮಮೂರ್ತಿ
ನಗರದ ನಿವಾಸಿ ಎಂ ಚಂದ್ರಶೇಖರ್ ಅವರು ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗನನ್ನು ಅಗಲಿದ್ದಾರೆ. ಅವರು ಗುರುವಾರ 7.30 ಗಂಟೆಗೆ ಕಚೇರಿ ಹಾಜರಾಗಿದ್ದರು. ಆದರೆ, ಮೊದಲ ಟೀ ವಿರಾಮ ವೇಳೆಗೆ ಅವರ ಶವ ಕಚೇರಿ ಫ್ಯಾನ್ ನಲ್ಲಿ ನೇತಾಡುತ್ತಿತ್ತು. 8.30ರ ಸುಮಾರಿಗೆ ಚಂದ್ರಶೇಖರ್ ಅವರ ಚೇಂಬರ್ ಪ್ರವೇಶಿಸಿದ ಕೆಲಸದಾಳು ನಂತರ ಎಲ್ಲರಿಗೂ ವಿಷಯ ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಪ್ರತಿದಿನ
8.30 ಕ್ಕೆ ಬರುತ್ತಿದ್ದ ಚಂದ್ರಶೇಖರ್ ಗುರುವಾರ ಒಂದು ಗಂಟೆ ಮುಂಚಿತವಾಗಿ ಕೆಲಸಕ್ಕೆ ಬಂದಿದ್ದರು. ಆತ್ಮಹತ್ಯೆಗೆ ಕಾರಣ ತಿಳಿಸುವ ಯಾವುದೇ ಪತ್ರ ಸಿಕ್ಕಿಲ್ಲ. ನಿವೃತ್ತಿ ಜೀವನವನ್ನು ಎದುರಿಸಲಾಗದೆ ಗೋಳಾಡುತ್ತಿದ್ದರು. ಮಾನಸಿಕ ಒತ್ತಡ ನಿವಾರಣೆಗಾಗಿ ಚಿಕಿತ್ಸೆ ಕೂಡಾ ಪಡೆಯುತ್ತಿದ್ದರು ಎಂದು ಚಂದ್ರಶೇಖರ್ ಅವರ ಪತ್ನಿ ಪರಿಮಳ ತಿಳಿಸಿದ್ದಾರೆ ಎಂದು ಜೀವನ್ ಭೀಮಾ ನಗರ ಪೊಲೀಸರು ಹೇಳಿದ್ದಾರೆ.











Click it and Unblock the Notifications