ಮಾಯಾವತಿ ರಾಜ್ಯದಲ್ಲಿ ಮಹಿಳೆ ಗ್ಯಾಂಗ್ ರೇಪ್, ಸಜೀವ ದಹನ

ಬಹುಜನ ಸಮಾಜವಾದಿ ಪಕ್ಷ ಆಗಲೇ 2012ರ ಅಸೆಂಬ್ಲಿ ಚುನಾವಣೆಗೆ ತಯಾರಿ ನಡೆಸಿದೆ. ಆದರೆ, ಜನರಿಗೆ ರಕ್ಷಣೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಜನ ನೆಮ್ಮದಿಯಾಗಿ ಮನೆಯಲ್ಲಿ ಇರಲು ಹೆದರುತ್ತಿದ್ದಾರೆ. ಇದು ಈ ವಾರದಲ್ಲಿ ನಾಲ್ಕನೆ ಅತ್ಯಾಚಾರ ಪ್ರಕರಣವಾಗಿದೆ. ಗನ್ ಪಾಯಿಂಟ್ ನಲ್ಲಿ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಹಾಗೂ 14 ವರ್ಷದ ಹುಡುಗಿ ಮೇಲೆ ಅತ್ಯಾಚಾರ ಹಾಗೂ ಕಣ್ಣು ಕಿತ್ತ ಪ್ರಕರಣವನ್ನು ಜನ ಅರಗಿಸಿಕೊಳ್ಳುವಷ್ಟರಲ್ಲೇ ಈ ಸಾಮೂಹಿಕ ಅತ್ಯಾಚಾರ ಘಟನೆ ನಡೆದಿದೆ.
ಏತಾ ಪ್ರಾಭಾಪುರ್ ಗ್ರಾಮದ ಅನಾರ್ಕಲಿ ಎಂಬ ಮಹಿಳೆಯ ಪತಿ ದೆಹಲಿಯಲ್ಲಿ ಕೆಲಸಕ್ಕೆ ಹೋಗಿದ್ದ ವೇಳೆ ನೋಡಿಕೊಂಡು ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ. ಐದು ಜನರ ಗುಂಪು ಆಕೆ ಮೇಲೆ ಬಿದ್ದು ಮೃಗಗಳಂತೆ ವರ್ತಿಸಿ, ಅತ್ಯಾಚಾರ ಮಾಡಿ ನಂತರ ಆಕೆಯನ್ನು ಸುಟ್ಟು ಹಾಕಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಯುಪಿ ಪೊಲೀಸರು ಹೇಳಿದ್ದಾರೆ.
ದಲಿತರೇ ಟಾರ್ಗೆಟ್: ಕನೌಜ್ ನ ಘುರ್ ಪೂರ್ವಗ್ರಾಮದ 14 ವರ್ಷದ ಹುಡುಗಿ ಅತ್ಯಾಚಾರ ಹಾಗೂ ಕಣ್ಣು ಕಿತ್ತ ಪ್ರಸಂಗ, ಅಪ್ರಾಪ್ತ ಹುಡುಗಿಯ ಮೇಲೆ ಪೊಲೀಸರ ಸಾಮೂಹಿಕ ಅತ್ಯಾಚಾರ, ರಾಣಿಪುರ್ ಬೆಲ್ವಾಡಿ ಗ್ರಾಮದ 18 ವರ್ಷದ ಯುವತಿ ಮೇಲೆ ಗನ್ ತೋರಿಸಿ ಹೆದರಿಸಿ ರೇಪ್ ಮಾಡಿದ ಘಟನೆ ಎಲ್ಲದರಲ್ಲೂ ದಲಿತ ಹುಡುಗಿಯರೇ ಟಾರ್ಗೆಟ್ ಆಗಿದ್ದಾರೆ. ಒಬ್ಬ ಮಹಿಳೆ ಮುಖ್ಯಮಂತ್ರಿಯಾಗಿರುವ ರಾಜ್ಯದಲ್ಲಿ ಮಹಿಳೆಯ ಸ್ಥಿತಿ ಈ ರೀತಿ ಆಗುತ್ತಿರುವುದು ದುರದುಷ್ಟಕರ ಎಂದು ಪ್ರತಿಪಕ್ಷಗಳು ಟೀಕಿಸುತ್ತಿದೆ.












Click it and Unblock the Notifications