ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಘಮ ಘಮ ಒಗ್ಗರಣೆ ಪರಿಮಳ
ಪೊಲೀಸಪ್ಪನ ಹೊಟ್ಟೆ ಎಂದು ಜನ ಮೊದಲೇ ಆಡಿಕೊಳ್ಳುತ್ತಾರೆ. ಅದರ ಜೊತೆಗೆ ದಿನ ಸರಿಯಾದ ಸಮಯಕ್ಕೆ ಊಟ ತಿಂಡಿ ಸಿಗದೇ ಸಮಯ ಸಿಕ್ಕಾಗ ಹೋಟೆಲ್ ಗೆ ಹೋಗಿ ಸಿಕ್ಕಿದ್ದು ತಿನ್ನುವುದು ಪೊಲೀಸರ ಕರ್ಮ. ಹೋಟೆಲ್ ಊಟ ಮಾಡಿದರೆ ಗ್ಯಾಸ್ಟ್ರೀಕ್ ಹೊಟ್ಟೆ ಉಬ್ಬರ ಗ್ಯಾರಂಟಿ, ಅದಲ್ಲದೆ ಖರ್ಚು ವೆಚ್ಚ ಬೇರೆ ಜಾಸ್ತಿ. ಹೀಗಿದ್ದ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಬದಲಾಯಿಸಿದ್ದು ಮಹಮ್ಮದ್ ಅಸ್ಲಾಂ.
ಈಗ ಸುಮಾರು 145ಕ್ಕೂ ಅಧಿಕ ಸಿಬ್ಬಂದಿಗೆ ಮಧ್ಯಾಹ್ನ ಬಿಸಿಬಿಸಿ ಸಸ್ಯಾಹರ ಊಟ ತಯಾರಾಗುತ್ತಿದೆ. ಇಬ್ಬರು ಆರ್ಮಿ ಆಫೀಸರ್ ಗಳು ಅಡುಗೆ ಕೋಣೆ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಸಮಯಕ್ಕೆ ಸರಿಯಾಗಿ ಟೀ ಕಾಫಿ ಕೂಡಾ ವಿತರಣೆ ಆಗುತ್ತಿದೆ. ಪೊಲೀಸರಿಗಿಂತ ಖೈದಿಗಳಿಗೆ ಖುಷಿಯೋ ಖುಷಿ. ಪೊಲೀಸರ ಜೊತೆಗೆ ಅವರಿಗೆ ನಿತ್ಯ ಅನ್ನದಾನ ಸೇವೆ ಆಗುತ್ತಿದೆ.
ಕತ್ತಲು, ಧೂಳು ತುಂಬಿದ್ದ ಕೋಣೆ ಈಗ ಸ್ವಚ್ಛ ಸುಂದರವಾಗಿದೆ, exhaust ಫ್ಯಾನ್ಸ್ ಹಾಕಲಾಗಿದೆ. ಪಾತ್ರೆ, ಅಡುಗೆ ಕೋಣೆ ಸ್ವಚ್ಛಗೊಳಿಸಲು ಕೆಲಸದಾಕೆ ದಿನಕ್ಕೊಮ್ಮೆ ಬರುತ್ತಾಳೆ. ಅಸ್ಲಾಂ ಅವರ ಐಡ್ಯಾ ಕೊನೆಗೂ ಕ್ಲಿಕ್ ಆಗಿದೆ.
ಮಾರ್ಡನ್ ಕಿಚನ್: 40 ಚ.ಅ ಇರುವ ಅಡುಗೆ ಮನೆಯಲ್ಲಿ ಸ್ಟವ್, ವಾಷ್ ಬೇಸಿನ್, ಸೋಪು, ಅಡುಗೆ ಪದಾರ್ಥ,ಪಾತ್ರೆ ಇಟ್ಟುಕೊಳ್ಳಲು ಸ್ಥಳ, ಚಮಚ, ಸಟ್ಟುಗ, ಪ್ಯಾನ್, ಬಾಣಲೆ ಗೆ ಪ್ರತ್ಯೇಕ ಸ್ಥಳಗಳನ್ನು ಗುರುತಿಸಿ ಇಡಲಾಗಿದೆ. ಇದಲ್ಲದೆ ಮೈಕ್ರೋವೇವ್ ಒವನ್, ಇಂಡಕ್ಷನ್ ಸ್ಟವ್ ಹಾಗೂ ಪ್ಯಾನ್ ಇದ್ದು ಮಾರ್ಡನ್ ಕಿಚನ್ ಲುಕ್ ಪಡೆದಿದೆ.
ಇದಕ್ಕೂ ಮುನ್ನ ನಮ್ಮ ಸಿಬ್ಬಂದಿ ಬೀದಿ ಬದಿ ಸಿಗುವ ಆಹಾರ ತಿಂದು ಅಜೀರ್ಣ ಸಮಸ್ಯೆಯಿಂದ ಬಳಲುತ್ತಿದರು. ಅಡುಗೆ ಕೋಣೆ ಸ್ಥಾಪನೆಗೆ ಹಲವರ ವಿರೋಧ ವ್ಯಕ್ತವಾಗಿತ್ತು ಆದರೂ ನಮ್ಮ ಸಿಬ್ಬಂದಿಯ ಆರೋಗ್ಯದ ಹಿತ ದೃಷ್ಟಿಯಿಂದ ಇದು ಅವಶ್ಯಕವಾಗಿತ್ತು ಎನ್ನುತ್ತಾರೆ ಅಸ್ಲಾಂ.
ಸುಂದರ ಠಾಣೆ: ಠಾಣೆಯ ಸುತ್ತಾ ಔಷಧೀಯ ಹಾಗೂ ಸುಗಂಧ ಸಸ್ಯಗಳನ್ನು ನೆಡಲಾಗುವುದು. ಅಕ್ವೇರಿಯಂ, ಕೊಳದಲ್ಲಿ ಬಾತುಕೋಳಿ ಈಜಬೇಕು, ಮೊಲಗಳನ್ನು ಸಾಕುವ ಯೋಜನೆಯಿದೆ ಎಂದು ತಮ್ಮ ಆಲೋಚನೆಗಳ ಬುತ್ತಿ ಬಿಚ್ಚುತ್ತಾರೆ ಅಸ್ಲಾಮ್. ಬೆಂಗಳೂರು ನಗರ ಪೊಲೀಸ್ ವಿಭಾಗದಲ್ಲಿ ಬಸವನಗುಡಿ ಪೊಲೀಸ್ ಠಾಣೆ ಮಾದರಿ ಠಾಣೆಯಾಗಿ ರೂಪುಗೊಳ್ಳುತ್ತಿದೆ.













Click it and Unblock the Notifications