ಸಾಯಿ ಬಾಬಾ ರೂಂನಲ್ಲಿ 456 ಕೆಜಿ ಚಿನ್ನ, 200 ಕೋಟಿರು ನಗದು?

Satya Sai Baba Personal Chamber opened
ಅನಂತಪುರ, ಜೂ 17: ಸುಮಾರು ಎರಡು ತಿಂಗಳ ಬಳಿಕೆ ಭಾರಿ ಕುತೂಹಲ ಕೆರಳಿಸಿದ್ದ ಸತ್ಯ ಸಾಯಿಬಾಬಾರ ಅಂತರಂಗ ಮಂದಿರದ ಬಾಗಿಲು ಇಂದು ತೆಗೆಯಲಾಗಿದೆ. ಮಾರ್ಚ್ 28ರಿಂದ ಸೀಲ್ ಮಾಡಲಾಗಿದ್ದ ಯಜುರ್ ಮಂದಿರದಲ್ಲಿ ಬಾಬಾ ಬರೆದಿಟ್ಟ ವಿಲ್ ಕೂಡಾ ಪತ್ತೆಯಾಗಿದೆ. ಅಪಾರ ಚಿನ್ನಾಭರಣ, ನಗದು, ಅಮೂಲ್ಯ ವಸ್ತುಗಳ ಖಜಾನೆಯೇ ಅಲ್ಲಿದೆ.

ದೇವಮಾನವ ಸತ್ಯಸಾಯಿಬಾಬ ಅವರ ನಿವಾಸ 'ಯಜುರ್ ಮಂದಿರ"ದ ಕೋಣೆಯನ್ನು ಸತ್ಯಜಿತ್ ಮೂಲಕ ಟ್ರಸ್ಟ್ ಗುರುವಾರ ತೆರೆಯಿಸಿದೆ. ಈ ಕೋಣೆಗೆ ಪ್ರವೇಶಿಸಲು ಬಯೋಮೆಟ್ರಿಕ್ ವ್ಯವಸ್ಥೆ ಇರುವ ಕಾರಣ ಈ ಸೀಕ್ರೇಟ್ ಕೋಡ್‌ಗಳನ್ನು ಸತ್ಯಜಿತ್ ಅವರು ಮಾತ್ರವೇ ತಿಳಿದ ಹಿನ್ನಲೆಯಲ್ಲಿ ಸತ್ಯಜಿತ್ ಅವರನ್ನು ಟ್ರಸ್ಟ್ ಪ್ರಶಾಂತಿ ನಿಯಲಕ್ಕೆ ಕರೆಯಿಸಿಕೊಂಡಿತ್ತು.

ಟ್ರಸ್ಟ್‌ನ ಹೆಸರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅನಂತಪುರ ಜಿಲ್ಲೆಯ ವಿವಿಧ ಶಾಖೆಗಳ ಲಾಕರ್‌ಗಳಲ್ಲಿ ಅನೇಕ ದಾಖಲೆಗಳನ್ನು ಇರಿಸಲಾಗಿತ್ತು. ಮತ್ತು ಕೆಲ ಅತಿ ಮುಖ್ಯ ಕೀಗಳನ್ನು ಕೂಡ ಇರಿಸಲಾಗಿತ್ತು.

ಈ ಹಿನ್ನಲೆಯಲ್ಲಿ ಟ್ರಸ್ಟ್‌ನ ಎಲ್ಲಾ ಸದಸ್ಯರ ಮನವಿ ಮೇರೆಗೆ ಎಸ್‌ಬಿಐನ ಹಿರಿಯ ಅಧಿಕಾರಿ ಶಿವಕುಮಾರ್ ಅವರು ಕೂಡ 'ಯಜುರ್ ಮಂದಿರ" ಕೋಣೆ ತೆರೆದಾಗ ಎದುರಲ್ಲೇ ಇದ್ದರು.

ಅಲ್ಲದೇ, ಕೋಣೆಯಲ್ಲಿನ ಹಣವನ್ನು ಎಣಿಸಲಿಕ್ಕಾಗಿ ಬ್ಯಾಂಕ್‌ನ ಹಿರಿಯ ಅಧಿಕಾರಿಗಳು ಕೋಣೆ ಪ್ರವೇಶಿಸಿದ್ದು ಎರಡು ದಿನದಿಂದ ನೋಟುಗಳ ಎಣಿಕೆ, ಕೋಟ್ಯಾಂತರ ರುಪಾಯಿ ಮೌಲ್ಯದ ಬಂಗಾರ, ವಜ್ರಗಳ ಕುರಿತು ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ.

ಭಗವತಿ, ಇಂದೂಲಾಲ್ ಶಾ, ರತ್ನಾಕರ್, ನಾಗಾನಂದಶೆಟ್ಟಿ ಸೇರಿ ಇನ್ನಿತರ ಟ್ರಸ್ಟಿಗಳ ಸಮ್ಮುಖದಲ್ಲೇ ದಾಖಲೆಗಳ ಮೂಲಕ ಈ ಕಾರ್ಯ ನಡೆದಿದೆ. ಟ್ರಸ್ಟ್‌ನ ಸದಸ್ಯರು ಮತ್ತು ಸೇವಾ ಸದಸ್ಯರೇ ಈ ಎಲ್ಲಾ ಚಟುವಟಿಕೆಗಳನ್ನು ಚಿತ್ರೀಕರಿಸಿಕೊಳ್ಳುತ್ತಿದ್ದಾರೆ.

ಇದೆಲ್ಲದರ ಮಧ್ಯೆ ದೇಶದ ಗಣ್ಯ ಉದ್ಯಮಿ ರತನ್ ಟಾಟಾ ಪುಟ್ಟಪರ್ತಿಗೆ ವಿಶೇಷ ವಿಮಾನದಲ್ಲಿ ಶುಕ್ರವಾರ ಭೇಟಿ ನೀಡಿ ಟ್ರಸ್ಟ್ ಹಮ್ಮಿಕೊಂಡಿದ್ದ 'ವಿದ್ಯಾವಾಹಿನಿ" ಶಿಕ್ಷಣ ಸೇವಾ ಯೋಜನೆಗೆ ಚಾಲನೆ ನೀಡಿದ್ದಾರೆ.

ಈ ಮಾಹಿತಿ ಅಧಿಕೃತ: 450 ಕೆಜಿ ಬಂಗಾರ, ನೂರಾರು ಕೋಟಿ ರುಪಾಯಿ ಮೌಲ್ಯದ ವಜ್ರಗಳು, ಅತಿ ಮುಖ್ಯವಾದ ಕಾಗದ ಪತ್ರಗಳು ಸಿಕ್ಕಿವೆ. ಟ್ರಸ್ಟ್‌ನ ಕೆಲ ಸದಸ್ಯರು ವಂಚಿಸಲಿಕ್ಕಾಗಿ ಈ ಕಾರ್ಯವನ್ನು ಅತ್ಯಂತ ರಹಸ್ಯವಾಗಿ ನಡೆಸುತ್ತಿದ್ದಾರೆ. ಸೇವೆಗಾಗಿ ಭಕ್ತರು ಬಾಬಾಗೆ ನೀಡಿದ್ದ ಹಣ ಲಪಟಾಯಿಸುವ ತಂತ್ರಗಳು ಟ್ರಸ್ಟ್‌ನ ಬಹುತೇಕರಲ್ಲಿದೆ.

ಟ್ರಸ್ಟ್‌ನ ವಾರಸುದಾರತ್ವದ ವಿಲ್ ಕೂಡ ಈ ಸಂದರ್ಭದಲ್ಲಿ ಬಯಲಾಗಿದೆ ಎನ್ನುವುದು ಪುಟ್ಟಪರ್ತಿ ಜನರ ಸಾಮಾನ್ಯ ಅಭಿಪ್ರಾಯ. ಆದರೆ, ಒಟ್ಟಾರೆ ಲೆಕ್ಕ ಹಾಕುವ, ದಾಖಲಿಸುವ ಕೆಲಸ ನಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+