• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗಡಾಫಿ ಮಗನಿಗೆ ಒಲಂಪಿಕ್ಸ್‌ ವೀಕ್ಷಣೆಗೆ ನೂರಾರು ಪಾಸ್ !

By Srinath
|
ಲಂಡನ್‌, ಜೂನ್ 16 : ಯಾವ ದೇಶದ (ಲಿಬಿಯಾ) ವಿರುದ್ಧ ತನ್ನದೇ ನೇತೃತ್ವದ ಪಡೆಗಳು ಸೇನಾ ಕಾರ್ಯಚರಣೆಯಲ್ಲಿ ತೊಡಗಿವೆಯೋ ಅದೇ ದೇಶದ ಅಧ್ಯಕ್ಷನ ಪುತ್ರನಿಗೆ ತನ್ನ ದೇಶ ಒಲಂಪಿಕ್ಸ್‌ ಕ್ರೀಡಾಕೂಟ ಆತಿಥ್ಯ ನೀಡಲು ಬಯಸಿದೆ.

ಏನೆಂದರೆ, ಮುಂದಿನ ವರ್ಷ ಲಂಡನ್‌ನಲ್ಲಿ ನಡೆಯುವ ಒಲಂಪಿಕ್ಸ್‌ ಕ್ರೀಡಾಕೂಟ ವೀಕ್ಷಿಸಲು ನೂರಾರು ಟಿಕೆಟ್‌ಗಳನ್ನು ಲಿಬಿಯಾಗೆ ಅಂದರೆ ಲಿಬಿಯಾ ಅಧ್ಯಕ್ಷ ಕರ್ನಲ್‌ ಮೊಹಮದ್ ಗಡಾಫಿ ಪುತ್ರ ಮುಹಮ್ಮದ್‌ ಗಡಾಫಿಗೆ ಹಂಚಲಾಗಿದೆ.

ಲಂಡನ್‌ ಒಲಂಪಿಕ್ಸ್‌ ಕೂಟದ ಒಟ್ಟು 88 ಲಕ್ಷ ಟಿಕೆಟ್‌ಗಳ ಪೈಕಿ 10 ಲಕ್ಷದಷ್ಟು ಟಿಕೆಟ್‌ಗಳನ್ನು ವಿವಿಧ ದೇಶಗಳ ಒಲಂಪಿಕ್ಸ್‌ ಸಮಿತಿಗಳಿಗೆ ವಿತರಿಸಲಾಗಿದೆ. ಹಾಗಾಗಿ, ಲಿಬಿಯಾದ ರಾಷ್ಟ್ರೀಯ ಒಲಂಪಿಕ್ಸ್‌ ಸಮಿತಿಗೆ ಕೆಲವು ನೂರು ಪಾಸ್‌ಗಳನ್ನು ನೀಡಿರುವುದು ನಿಜ ಎಂದು ಒಲಂಪಿಕ್ಸ್‌ ಸಂಘಟಕರು ಒಪ್ಪಿಕೊಂಡಿದ್ದಾರೆ.

ಹೇಳಿ ಕೇಳಿ, ಲಿಬಿಯಾದ ಒಲಂಪಿಕ್ಸ್‌ ಸಮಿತಿಗೆ ಗಡಾಫಿ ಪುತ್ರ ಮೊಹಮದ್ ಅಲ್ ಗಡಾಫಿ ಅಧ್ಯಕ್ಷ. ಆದರೆ, ಅಂತಾರಾಷ್ಟ್ರೀಯ ಪ್ರವಾಸ ನಿರ್ಬಂಧ ಮತ್ತು ಬಂಧನ ವಾರೆಂಟ್‌ ಎದುರಿಸುತ್ತಿರುವ ಕರ್ನಲ್‌ ಗಡಾಫಿಗೆ ಒಲಂಪಿಕ್ಸ್‌ ಕೂಟಕ್ಕೆ ಆಗಮಿಸಲು ಅವಕಾಶ ನೀಡುವುದಿಲ್ಲ ಎಂದೂ ಹೇಳಲಾಗಿದೆ.

ಮಿತ್ತಲ್‌ಗೆ 5000 ಟಿಕೆಟ್‌: ಈ ಮಧ್ಯೆ, ಬ್ರಿಟನ್‌ನ ಶ್ರೀಮಂತ ವ್ಯಕ್ತಿ ಲಕ್ಷ್ಮೀ ಮಿತ್ತಲ್‌ ಗೆ 5,000 ಟಿಕೆಟ್‌ ನೀಡಲಾಗುತ್ತಿದೆ. ಇದಕ್ಕೆ ಪ್ರತಿಯಾಗಿ ಮಿತ್ತಲ್‌ ಅವರ ಆರ್ಸೆಲಾರ್ ಮಿತ್ತಲ್‌ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಅದರ ಮೂಲಕ ಕೂಟದ ಸಂದರ್ಭದಲ್ಲಿ ಆರ್ಬಿಟ್‌ ಟವರ್ ಅನ್ನು ವಾಣಿಜ್ಯೋದ್ದೇಶಗಳಿಗೆ ಬಳಸಿಕೊಳ್ಳಬಹುದಾಗಿದೆ. ಟವರ್ ನ ನಿರ್ಮಾಣಕ್ಕೆ ಮಿತ್ತಲ್‌ 10 ಮಿಲಿಯನ್‌ ಪೌಂಡ್‌ ನೀಡಿದ್ದು, 96 ದಶಲಕ್ಷ ಪೌಂಡ್‌ ಸಾಲವನ್ನೂ ಒದಗಿಸಿದ್ದಾರೆ.

ಏತನ್ಮಧ್ಯೆ, ಲಂಡನ್‌ನಲ್ಲಿ ಸಾರ್ವಜನಿಕ ವೀಕ್ಷಣೆಯ ಟಿಕೆಟ್‌ಗಳ ಅಭಾವ ಉಂಟಾಗಿದ್ದು, ಸಾರ್ವತ್ರಿಕವಾಗಿ ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ಬ್ಯಾಲೆಟ್‌ಗಳ ಮೂಲಕ ಟಿಕೆಟ್‌ಗೆ ನೋಂದಾಯಿಸಿಕೊಂಡವರಿಗೆ ಬಾಕಿ ಟಿಕೆಟ್‌ಗಳ ವಿತರಣೆ ಸಂದರ್ಭದಲ್ಲಿ ಮೊದಲು ಬಂದವರಿಗೆ ಆದ್ಯತೆ ಮೇರೆಗೆ ಟಿಕೆಟ್‌ ನೀಡಲಾಗುವುದು ಎಂದು ಸಂಘಟಕರು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Colonel Muammar Gaddafi's son Muhammad al-Gaddafi has been allocated hundreds of tickets for the 2012 Olympics in London, despite millions of Britons missing out. it may also prove to be an embarrassment to the British government which is waging Nato military action against Libya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more