ಭ್ರಷ್ಟಾಚಾರ ದಾಖಲೆ ರಿಲೀಸ್ ಮಾಡ್ಬೇಡಿ ಕುಮಾರ್ ಎಂದಿದ್ದ ಯಡ್ಡಿ?
ಬೆಂಗಳೂರು
ಜೂ 16: ಯಡಿಯೂರಪ್ಪ ಅವರು ಕುರ್ಚಿ ಉಳಿಸಿಕೊಳ್ಳಲು ತಮ್ಮ ಆತ್ಮೀಯರ ಮೂಲಕ ನನ್ನೊಂದಿಗೆ ಸಂಧಾನ ಬಯಸಿದ್ದರು. ಭ್ರಷ್ಟಾಚಾರ ದಾಖಲೆಗಳನ್ನು ಬಿಡುಗಡೆ ಮಾಡದಂತೆ ಕೋರಿದ್ದರು ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಕಿಡಿ ಹಾರಿಸಿದ್ದಾರೆ. id="toptextpromo">ದುಡ್ಡು
ಕೊಟ್ಟು ಡೀಲ್ ಕುದುರಿಸಿಕೊಂಡು ನನ್ನನ್ನಾಗಲಿ, ಜೆಡಿಎಸ್ ಪಕ್ಷವನ್ನಾಗಲಿ ಖರೀದಿಸಲು ಸಾಧ್ಯವಿಲ್ಲ. ಯಡಿಯೂರಪ್ಪ ಸಂಧಾನ ಬಯಸಿದ್ದು ನಿಜ. ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರನ್ನು ಖರೀದಿಸಿದಷ್ಟು ಸುಲಭವಾಗಿ ನಮ್ಮನ್ನು ಖರೀದಿಸಲು ಬರುವುದಿಲ್ಲ. ನಾನು ಹೋದ ಕಡೆ ಬಂದ ಕಡೆ ನೆರಳಂತೆ ಅವರ ಶಿಷ್ಯರು ಸುತ್ತಾಡಿ ಕಾಲು ನೋಯಿಸಿಕೊಂಡಿದ್ದಾರೆ ಆದರೆ, ನನ್ನ ಮನಸ್ಸು ಬದಲಾಯಿಸಿ ಅಕ್ರಮ ಮ್ರೈತ್ರಿ ಸಾಧಿಸಲು ಆಗಲಿಲ್ಲ ಎಂದು ಕುಮಾರಸ್ವಾಮಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಇದು
ನಿನ್ನೆ ಮೊನ್ನೆಯ ಮಾತಲ್ಲ. ಆರು ತಿಂಗಳಿನಿಂದ ಅವರ ಅನುಯಾಯಿಗಳು ನನ್ನ ಬೆನ್ನ ಹಿಂದೆ ಬಿದ್ದಿದ್ದಾರೆ. ನನ್ನ ಪರ್ಸನಲ್ ಕಾರ್ಯಕ್ರಮದಿಂದ ಹಿಡಿದು ಎಲ್ಲವೂ ಮುಖ್ಯಮಂತ್ರಿಗಳ ಕಚೇರಿ ತಲುಪುವಂತೆ ವ್ಯವಸ್ಥೆ ಸೃಷ್ಟಿಸಿಕೊಂಡಿದ್ದಾರೆ. ಸರ್ಕಾರಿ ಹಣವನ್ನು ಸ್ವಂತಕ್ಕೆ ಸ್ವಾರ್ಥಕ್ಕೆ ಬಳಸುವುದರಲ್ಲಿ ಯಡಿಯೂರಪ್ಪ ಎತ್ತಿದ ಕೈ. ನಮ್ಮ ಕುಟುಂಬದ ಮಾನ ಪತ್ರಿಕೆಯಲ್ಲಿ ಹರಾಜು ಹಾಕುವುದಾಗಿ ಬೊಬ್ಬೆ ಹೊಡೆಯುವ ಯಡಿಯೂರಪ್ಪ "ಪೈಪರ್ ಟೈಗರ್ ಅಷ್ಟೇ ಎಂದು ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.











Click it and Unblock the Notifications