ಮರ, ಕೊಂಬೆ ಒಣಗಿ ಬೀಳುವಂತಿದ್ದರೆ ತಪ್ಪದೇ ಕರೆ ಮಾಡಿ
ಮೈಸೂರು,
ಜೂ. 15: ಮೈಸೂರು ನಗರ ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲಿ ಬೆಳೆದಿರುವ ಮರಗಳ ಪೈಕಿ ಕೆಲವು ಮರಗಳು, ಕೊಂಬೆಗಳು ಒಣಗಿವೆ. ಈಗ ಬೇಸಿಗೆ ಕಾಲ ಮುಗಿದು ಮಳೆಗಾಲ ಪ್ರಾರಂಭವಾಗಿದ್ದು ದೊಡ್ಡ ದೊಡ್ಡ ಮರಗಳು, ಕೊಂಬೆಗಳು ಗಾಳಿ ಮಳೆ ರಭಸಕ್ಕೆ ಮುರಿದು ಬೀಳುವುದನ್ನು ತಪ್ಪಿಸಲು ನಗರ ಪಾಲಿಕೆ ಹಾಗೂ ಅರಣ್ಯ ಇಲಾಖೆ ಸುರಕ್ಷಿತ ಕ್ರಮಗಳನ್ನು ಸಿದ್ಧಪಡಿಸಿಕೊಂಡಿದೆ. id="toptextpromo">ಈ
ಮೂಲಕ ಸಾರ್ವಜನಿಕರು ಅಥವಾ ಅವರ ಆಸ್ತಿಪಾಸ್ತಿ ಮೇಲೆ ಬಿದ್ದು ಭಾರಿ ಅನಾಹುತವಾಗುವ ಸಂಭವವನ್ನು ಕಮ್ಮಿ ಮಾಡಲು ಜನತೆ ಸಹಕಾರ ಕೋರಲಾಗಿದೆ. ಅಂಥ ಮರಗಳನ್ನು ತೆರವುಗೊಳಿಸಲು ಹಾಗೂ ಮುಂಜಾಗ್ರತೆಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಸಾರ್ವಜನಿಕರು ಅಂಥ ಮರ ಕೊಂಬೆಗಳು ಗಮನಕ್ಕೆ ಬಂದರೆ ಕೂಡಲೇ ಅರಣ್ಯ ಇಲಾಖೆ ಮೈಸೂರು ವಲಯ ಕಚೇರಿಗೆ ತಿಳಿಸಲು ಕೋರಿದೆ. id='are-slot-1' class='oiad oi-axt oiadv'> id='top-searched-articles'>ಸಾರ್ವಜನಿಕರು
ಅರಣ್ಯ ಇಲಾಖೆಯ ಮೈಸೂರು ವಲಯ ಅರಣ್ಯಾಧಿಕಾರಿ ವಿ ಗೋವಿಂದಯ್ಯ :ಮೊಬೈಲ್ ಸಂಖ್ಯೆ 91414 16170 ಅಥವಾ ವನಪಾಲಕ ಕೆ.ಸಿ. ನಾಗಭೂಷಣಾರಾಧ್ಯ :77602 21008 ಅಥವಾ ಎಲ್. ಮಲ್ಲಶೆಟ್ಟಿ: 94490 85344 ಇವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ನೀಡಬೇಕೆಂದು ಮೈಸೂರು ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆರ್ ಗೋಪಿನಾಥ್ ಮನವಿ ಮಾಡಿದ್ದಾರೆ.**
ಕುಂದುಕೊರತೆ
ಫೋನ್
ಇನ್:
ಮೈಸೂರು
ಜಿಲ್ಲಾಧಿಕಾರಿಗಳ
ಕಚೇರಿಯಲ್ಲಿ
ಪ್ರತಿ
ತಿಂಗಳಿನಂತೆ
ಈ
ತಿಂಗಳೂ
3ನೇ
ಗುರುವಾರ
ದಿನಾಂಕ
16ರಂದು
ಬೆಳಿಗ್ಗೆ
10
ಗಂಟೆಯಿಂದ
11
ಗಂಟೆವರೆಗೆ
ಫೋನ್
ಇನ್
ಕಾರ್ಯಕ್ರಮ
ಹಾಗೂ
ನಂತರ
ಸಾರ್ವಜನಿಕ
ಕುಂದುಕೊರತೆ
ಕುರಿತ
ಜಿಲ್ಲಾಮಟ್ಟದ
ಅಧಿಕಾರಿಗಳ
ಸಭೆ
ನಡೆಯಲಿದೆ.












Click it and Unblock the Notifications