ಯುನೆಸ್ಕೋ ಹಣೆಪಟ್ಟಿ ಬೇಡ; ಅರಣ್ಯ ಮಾರಾಟಕ್ಕಿದೆ

Karnataka declines World heritage tag
ಬೆಂಗಳೂರು, ಜೂ.15: ವಿಶ್ವ ಪಾರಂಪರಿಕ ತಾಣಗಳನ್ನಾಗಿ ರಾಜ್ಯದ ಪಶ್ಚಿಮ ಘಟ್ಟಗಳಲ್ಲಿನ 10 ಸ್ಥಳಗಳನ್ನು ಗುರುತಿಸಲಾಗಿದ್ದು, ಇದರಿಂದ ರಾಜ್ಯ ಅಭಿವೃದ್ಧಿಗೆ ಮಾರಕವಾಗಿದೆ. ಕೂಡಲೇ ರಾಜ್ಯದ ಸ್ಥಳಗಳನ್ನು ಯುನೆಸ್ಕೊಗೆ ರವಾನಿಸಲಾಗುತ್ತಿರುವ ಪಟ್ಟಿಯಿಂದ ಕೈ ಬಿಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ರಾಜ್ಯ ಅರಣ್ಯ ಸಚಿವ ಸಿಎಚ್ ವಿಜಯಶಂಕರ್ ಅವರು ಹೇಳಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಮಾತನಾಡಿದ ಅರಣ್ಯ ಸಚಿವ ಸಿ.ಎಚ್.ವಿಜಯ್‌ಶಂಕರ್, ಯುನೆಸ್ಕೊ ಪಟ್ಟಿಯಲ್ಲಿ ರಾಜ್ಯದ ಪುಷ್ಪಗಿರಿ ವನ್ಯಜೀವಿ ಧಾಮ, ಬ್ರಹ್ಮಗಿರಿ ವನ್ಯ ಜೀವಿ ಧಾಮ, ತಲಕಾವೇರಿ ವನ್ಯಜೀವಿ ಧಾಮ, ಪಡಿನಲಕ್ನಾಡ್ ಸಂರಕ್ಷಿತ ಅರಣ್ಯ, ಕೇರ್ತಿ ಸಂರಕ್ಷಿತ ಅರಣ್ಯ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಸೋಮೇಶ್ವರ ವನ್ಯಜೀವಿ ಧಾಮ, ಸೋಮೇಶ್ವರ ಸಂರಕ್ಷಿತ ಅರಣ್ಯ, ಆಗುಂಬೆ ಸಂರಕ್ಷಿತ ಅರಣ್ಯ, ಬಾಲಹಳ್ಳಿ ಸಂರಕ್ಷಿತ ಅರಣ್ಯ ಪ್ರದೇಶವನ್ನು ಪಾರಂಪರಿಕ ತಾಣಗಳನ್ನಾಗಿ ಗುರುತಿಸಲಾಗಿದೆ ಎಂದರು.

ಪಾರಂಪರಿಕ ತಾಣಗಳನ್ನಾಗಿ ಗುರುತಿಸಿಕೊಳ್ಳುವ ಸ್ಥಳಗಳಲ್ಲಿ ಯಾವುದೇ ಬಗೆಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕಾದರೂ ಯುನೆಸ್ಕೊ ಅನುಮತಿ ಪಡೆಯಬೇಕಾಗುತ್ತದೆ. ಆದ್ದರಿಂದ, ಜನಪ್ರತಿನಿಧಿಗಳು ಹಾಗೂ ಸ್ಥಳೀಯರ ಅಭಿಪ್ರಾಯದಂತೆ ಕೇಂದ್ರ ಸರಕಾರ ಯುನೆಸ್ಕೊಗೆ ರವಾನಿಸಲಿರುವ ಪಟ್ಟಿಯಿಂದ ರಾಜ್ಯದ ಈ 10 ಸ್ಥಳಗಳ ಹೆಸರನ್ನು ಕೈ ಬಿಡುವಂತೆ ಮನವಿ ಸಲ್ಲಿಸಲಾಗುವುದು ಎಂದು ವಿಜಯಶಂಕರ್ ತಿಳಿಸಿದರು.

ವಿಶ್ವ ಪಾರಂಪರಿಕ ತಾಣಗಳನ್ನಾಗಿ ಗುರುತಿಸಿಕೊಳ್ಳುವ ಸ್ಥಳಗಳಿಗೆ ಯಾವುದೇ ವಿಶೇಷ ಕಾನೂನುಗಳು ಅನ್ವಯಿಸುವುದಿಲ್ಲ. ಅಲ್ಲದೆ, ಯಾವುದೇ ವಿಶೇಷ ಅನುದಾನವೂ ಲಭ್ಯವಾಗುವುದಿಲ್ಲ. ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಪ್ರಸ್ತುತ ಜಾರಿಯಲ್ಲಿರುವ ಕೇಂದ್ರ ಹಾಗೂ ರಾಜ್ಯ ಸರಕಾರದ ಅರಣ್ಯ ಕಾನೂನುಗಳೇ ಪ್ರಬಲ ವಾಗಿವೆ. ಈ ಹಿನ್ನೆಲೆಯಲ್ಲಿ ಈ ಸ್ಥಳಗಳನ್ನು ಯುನೆಸ್ಕೊ ಪಟ್ಟಿಗೆ ಸೇರಿಸುವ ಅಗತ್ಯವಿಲ್ಲ ಎಂದು ಅವರು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+