ಜೆಡೆ ಹತ್ಯೆ: ದಾವೂದ್ ಶಿಷ್ಯ ಛೋಟಾ ಶಕೀಲ್ ಬಂಟರ ಬಂಧನ
ಮುಂಬೈ,
ಜೂ 15: ಜೆಡೆಯನ್ನು ದಾವೂದ್ ಗ್ಯಾಂಗ್ ಹತ್ಯೆ ಮಾಡಿದೆ ಎಂಬ ಸಂಶಯ ನಿಜವಾಗಿದೆ. ಹಿರಿಯ ಕ್ರೈಂ ರಿಪೋರ್ಟರ್ ಜೋತಿರ್ಮಯಿ ಡೆ ಅವರ ಹತ್ಯೆಗೆ ಸಂಬಂಧಿಸಿದಂತೆ ಇಂದು ಇಬ್ಬರು ಆರೋಪಿಗಳನ್ನು ಪೂವೈ ಪೊಲೀಸರು ಬಂಧಿಸಿದ್ದಾರೆ. ಬಂಧಿತತನ್ನು ಇಕ್ಬಾಲ್ ಹತೆಲಾ ಹಾಗೂ ಮತೀನ್ ಎಂದು ಗುರುತಿಸಲಾಗಿದ್ದು, ಈ ಇಬ್ಬರು ಶೂಟರ್ ಗಳು ದಾವೂದ್ ನ ಬಲಗೈ ಬಂಟ ಛೋಟಾ ಶಕೀಲ್ ಗ್ಯಾಂಗ್ ನ ಶಾರ್ಪ್ ಶೂಟರ್ ಗಳು ಎಂದು ತಿಳಿದು ಬಂದಿದೆ. id="toptextpromo">ಈ
ಕೊಲೆಗೆ ಸಂಬಂಧಿಸಿದಂತೆ ಇನ್ನೂ ಇಬ್ಬರು ಶೂಟರ್ ಗಳನ್ನು ಹಿಡಿಯಲು ಪೊಲೀಸರು ಜಾಲ ಬೀಳಿಸಿದ್ದಾರೆ. ಬಂಧಿತ ಇಕ್ಬಾಲ್ ಈ ಹಿಂದೆ ಮೂರು ಕಳ್ಳತನ ಹಾಗೂ ಒಂದು ಕೊಲೆ ಕೇಸ್ ನಲ್ಲಿ ಆರೋಪಿ ಆಗಿದ್ದಾನೆ. ಉಳಿದ ಆರೋಪಿಗಳಲ್ಲಿ ಗಂಧದ ಮರ ಸ್ಮಗಲಿಂಗ್ ಮಾಡುವ ದುಬೈನಲ್ಲಿರುವ ಜಾಫರ್ ಖಾಸಿಂ ಹಾಗೂ ಮತ್ತೊಬ್ಬನನ್ನು ಆದಷ್ಟು ಬೇಗ ಬಂಧಿಸುವುದಾಗಿ ಮುಂಬೈ ಪೊಲೀಸ್ ಆಯುಕ್ತ ಆರುಪ್ ಪಟ್ನಾಯಕ್ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ದಾವೂದ್
ಆಪ್ತ ಖಾಸಿಂ ಹಾಗೂ ಅವನ ಸಹಚರರು ನಡೆಸುತ್ತಿದ್ದ ಅಕ್ರಮ ದಂಧೆಯ ಬಗ್ಗೆ ಜೆಡೆ ಲೇಖನ ಬರೆಯತೊಡಗಿದ್ದರು. ಜೆಡೆ ಯೊಂದಿಗೆ ಡೀಲ್ ಕುದರಿಸ ಹೊರಟ ಖಾಸಿಂ, ಇನ್ ಫಾರ್ಮರ್ ಮೂಲಕ 10 ಲಕ್ಷ ರೂ ಆಫರ್ ನೀಡಿದ. ಆದರೆ, ಇದಕ್ಕೆ ಒಪ್ಪದ ಜೆಡೆ ಲೇಖನ ಬರೆದು ಪ್ರಕಟಿಸುವುದಾಗಿ ಹೇಳಿದ್ದು, ಖಾಸಿಮ್ ನನ್ನು ಕೆರಳಿಸಿದೆ. ಛೋಟಾ ಶಕೀಲ್ ಸಹಾಯ ಪಡೆದು ಜೆಡೆ ಅಧ್ಯಾಯ ಜೂ 11 ರಂದು ಮುಕ್ತಾಯ ಹಾಡಿದ್ದಾರೆ.











Click it and Unblock the Notifications