ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾನ್ಸೂನ್ ನಂತರ ಹೆಲಿ ಟೂರಿಸಂ ಶುರು: ಜನಾರ್ದನ ರೆಡ್ಡಿ

By Mahesh
|
Google Oneindia Kannada News

Janardhan Reddy on Heli Tourism
ಬೆಂಗಳೂರು ಜೂ 15: ಕೊಟ್ಟ ಮಾತಿಗೆ ನಾನು ತಪ್ಪುವುದಿಲ್ಲ. ರಾಜ್ಯದಲ್ಲಿ ಹೆಲಿ ಟೂರಿಸಂ ಆರಂಭಿಸುವುದು ಶತಃಸಿದ್ಧ. ಮುಂಗಾರು ಮಳೆ ಮುಗಿದ ನಂತರ ಹೆಲಿ ಟೂರಿಸಂ ಆರಂಭಿಸಲಾಗುವುದು ಎಂದು ಕ್ರೀಡಾ ಹಾಗೂ ಪ್ರವಾಸೋದ್ಯಮ ಸಚಿವ ಜನಾರ್ಧನ ರೆಡ್ಡಿ ಹೇಳಿದ್ದಾರೆ. ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ವೈಎಸ್ ಎಸ್ ಕಂಪೆನಿಯೊಂದಿಗೆ ಈ ಬಗ್ಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು.

ಈಗ ಟೆಂಡರ್ ಸೇರಿದಂತೆ ಎಲ್ಲ ಪ್ರಕ್ರಿಯೆಗಳು ಮುಗಿದಿವೆ. ಹೆಲೆಕಾಪ್ಟರ್ ಬಳಸಿ ರಾಜ್ಯದ ಪ್ರವಾಸೋದ್ಯಮ ಕೇಂದ್ರಗಳ ವೀಕ್ಷಣೆಗೆ ಸೌಲಭ್ಯ ಕಲ್ಪಿಸಲಾಗುವುದು ಎಂದು ವಿಧಾನಸೌಧ ಮುಂಭಾಗದಲ್ಲಿ ಮನೆಯಂಗಳಕ್ಕೆ ಕ್ರೀಡೆ ಎಂಬ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಜನಾರ್ದನ ರೆಡ್ಡಿ ಹೇಳಿದರು.

ಅಕ್ರಮ ಗಣಿಗಾರಿಕೆ ನಡೆಸಿಲ್ಲ: ಸಿಇಸಿ ಸಮಿತಿ ವರದಿಯಂತೆ ಈಗ ಬಳ್ಳಾರಿಯಲ್ಲಿ 99 ಗಣಿಗಳ ಸರ್ವೆ ಕಾರ್ಯ ನಡೆದಿದೆ. ಈ ಸರ್ವೆ ಕಾರ್ಯ ಮುಗಿದ ಮೇಲೆ ಸತ್ಯಾಂಶ ಹೊರಬೀಳಲಿದೆ. ಲೋಕಾಯುಕ್ತ ವರದಿಯಲ್ಲೂ ತಾವು ಸಾಚಾ ಎಂಬು ಸಾಬೀತಾಗಲಿದೆ ಎಂದು ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು. ಸುಪ್ರೀಂ ಕೋರ್ಟ್ ಆದೇಶದಂತೆ ನಡೆದಿರುವ ಸಮೀಕ್ಷೆ ವರದಿ ಬಂದ ನಂತರ ನಮ್ಮ ಬಗ್ಗೆ ಆರೋಪ ಮಾಡುವವರ ಬಾಯಿ ಮುಚ್ಚಲಿದೆ ಎಂದು ಸಚಿವ ಜನಾರ್ದನ ರೆಡ್ಡಿ ಹೇಳಿದ್ದಾರೆ.

English summary
I have not involved in any illegal mining, I will come clean after Supreme court CEC survey report. Heli Tourism will be started in state after monsoon. Government taken necessary steps to encourage sports said Minister Janardhan Reddy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X