ಗೋರೆಗುಡ್ಡೆ ದಿವ್ಯಾಶ್ರಿ ಅಶೋಕ್ ಪ್ರೇಮ್ ಕಹಾನಿ

ಪ್ರೀತಿ ಮಾಡೋರನ್ನ ಯಾರಾದ್ರೂ ಕೊಲ್ತಾರಾ ಸಾರ್, ಅವಳನ್ನು ಕೊಲೆ ಮಾಡುವ ಯಾವ ಉದ್ದೇಶನೂ ನನಗೆ ಇರಲಿಲ್ಲ. ಆದರೆ, ಅವಳು ಸತ್ತ ಮೇಲೆ ಸಕತ್ ಭಯ ಆಯ್ತು, ಶವದ ಚೂಡಿದಾರ ಕೆಳಕ್ಕೆ ಸರಿಸಿ, ಕೊಲೆಗೆ ಬೇರೆ ಅರ್ಥ ಕಲ್ಪಿಸುವ ಎಂದು ಯೋಚಿಸಿದೆ. ನನ್ನನ್ನು ನಂಬಿ ಮನೆ ಬಿಟ್ಟು ಓಡಿ ಬಂದಿದ್ದ ಆಕೆ ತಂದಿದ್ದ ಲಗೇಜ್ ಅನ್ನು ಶರಾವತಿ ನೀರಿಗೆ ಎಸೆದು ಮನ ಬಂದ ಕಡೆ ಅಲೆದೆ. ಒಂದು ದಿನ ಕೂಡಾ ನೆಮ್ಮದಿಯಿಂದ ಇರೋಕ್ಕೆ ಆಗಲಿಲ್ಲ ಎನ್ನುತ್ತಾನೆ ಅಶೋಕ.
ಶವವನ್ನು ಕಂಡಾಗ ಪೊಲೀಸರಿಗೆ ಮೊದಲಿಗೆ ಇದು ರೇಪ್ ಅಂಡ್ ಮರ್ಡರ್ ಕೇಸ್ ಇರಬಹುದೇ ಎಂದು ಅನುಮಾನ ಹುಟ್ಟಿದ್ದು ನಿಜ. ಆದರೆ, ಇದು ಪ್ರೇಮ ಪ್ರಕರಣ ದುರಂತ ಸಾವು ಎಂದು ತನಿಖೆ ನಂತರ ತಿಳಿದ ಮೇಲೆ ಪಾಗಲ್ ಪ್ರೇಮಿ ಹುಡುಕಾಟದಲ್ಲಿ ತೊಡಗಿದರು. ಕೊನೆಗೆ ಊರೂರು ಅಲೆಯುತ್ತಿದ್ದ ಅಶೋಕ, ಕುಮಟಾ ಪೊಲೀಸರ ಕೈಗೆ ಸಿಕ್ಕಿಬಿದ್ದ.
ಅವತ್ತು ಏನಾಯ್ತು ಗೊತ್ತಾ ಸಾರ್...: ನಾನು ಅವಳು ತುಂಬಾ ಪ್ರೀತಿಸ್ತಾ ಇದ್ವಿ. ಮದುವೆಯಾಗಲು ಸಿದ್ದತೆ ನಡೆದಿತ್ತು. ಆಕೆ ಮನೆಯಲ್ಲಿ ಮೊದಲಿಗೆ ಒಪ್ಪಿದ್ದರು ಆಮೇಲೆ ಏನೋ ತಕರಾರು ತೆಗೆದು ಬೇರೆ ಸಂಬಂಧ ನೋಡತೊಡಗಿದರು. ಈ ಸಂದರ್ಭದಲ್ಲಿ ಬೇಗ ಮದುವೆಯಾಗುವಂತೆ ಅವಳು ನನ್ನನ್ನು ಪೀಡಿಸತೊಡಗಿದಳು. ಆ ದಿನ ಅವಳಿಗೆ ಹೊಸ ಚಪ್ಪಲಿ ಕೊಡಿಸಿದೆ. ಪೇಟೆಯಲ್ಲಿ ಸುತ್ತಾಟ ಆದ ಮೇಲೆ ಅವಳು ಮತ್ತೆ ಮದುವೆ ಪ್ರಸ್ತಾಪ ಮಾಡಿದಳು.
ಮಾತುಗಳು ಜೋರಾಗಿ ಜಗಳಕ್ಕೆ ತಿರುಗಿತು. ನಾನು ಪ್ರೀತಿಯಿಂದ ಕೊಡಿಸಿದ ಹೊಸ ಚಪ್ಪಲಿಯಲ್ಲೇ ಹೊಡೆಯಳು ಬಂದಳು. ಆಮೇಲೆ ಕಲ್ಲಿನಿಂದ ಹೊಡೆಯಲು ಶುರು ಮಾಡಿದಳು. ತಪ್ಪಿಸಿಕೊಂಡ ನಾನು ಆಕೆಯನ್ನು ದೂಡಿದೆ. ಆದು ಅವಳ ಜೀವಕ್ಕೆ ಅಪಾಯವಾಯಿತು. ಕಲ್ಲಿಗೆ ತಲೆ ಬಡಿದು ಅವಳು ಅಲ್ಲೇ ಹೆಣವಾಗಿ ಬಿಟ್ಟಳು.ನನಗೆ ಅವಳನ್ನು ಕೊಲ್ಲುವ ಯಾವುದೇ ದುರುದ್ದೇಶವೂ ಇರಲಿಲ್ಲ. ಆಗ ಏನೂ ಮಾಡಲು ತೋಚದೆ ಅಲ್ಲಿಂದ ತಪ್ಪಿಸಿಕೊಂಡು ಓಡಿದೆ ಎಂದು ಅಶೋಕ ಕಣ್ಣೀರಿಡುತ್ತಾನೆ.[ಅಸಲಿ ಕಥೆ ಇಲ್ಲಿದೆ ಓದಿ]












Click it and Unblock the Notifications