• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿದ್ಯಾರ್ಥಿನಿಗೆ ಸೆಕ್ಸ್ ಮೆಸೇಜ್ ಕಳಿಸಿದ ಲೆಕ್ಚರರ್

By Srinath
|

ಗುರ್ ಗಾಂವ್, ಜೂನ್ 15: ಇಲ್ಲಿನ ಪ್ರತಿಷ್ಠಿತ ಕಾಲೇಜಿನ ಒಬ್ಬ ಲೆಕ್ಚರ್ ಕಾಮಾಂಧನಾಗಿ ದ್ವಿತೀಯ ಪಿಯುಸಿಯಲ್ಲಿ ಓದುವ 17 ವರ್ಷದ ತನ್ನ ವಿದ್ಯಾರ್ಥಿಯನ್ನೇ ಸೆಕ್ಸ್ ಪ್ರಲೋಭವೊಡ್ಡಿದ್ದಾನೆ. ಪ್ರಕರಣದ ಸಂಬಂಧ ಯಾವುದೇ ದೂರು ದಾಖಲಾಗಿಲ್ಲವಾದರೂ ಕಾಲೇಜು ಆಡಳಿತ ಮಂಡಳಿಯು ಪ್ರಕರಣ ತನ್ನ ಗಮನಕ್ಕೆ ಬಂದಿದೆ ಎಂದು ಷರಾ ಬರೆದಿದೆ.

ಈ ಮಧ್ಯೆ, ಪ್ರಕರಣದ ಖಳನಾಯಕ ಎಲ್.ಎಸ್. ಪಾಟ್ಕರ್ ಕಾಲೇಜಿನ ಕಂಪ್ಯೂಟರ್ ಲೆಕ್ಚರರ್ 24 ವರ್ಷದ ರಾಹುಲ್ ಶರಂಗ್ಲೆ ಅಪರಾಧದ ದೃಷ್ಟಿಯಿಂದ ಹೀಗೆ ಮಾಡಲಿಲ್ಲ. ಸುಮ್ಮನೆ ಹಾಗೇ ತಮಾಷಿಗಾಗಿ ಮಾಡಿದೆ ಎಂದೆಲ್ಲ ಹಲುಬಿದ್ದಾನೆ. ನಿನ್ನ ಪ್ರೇಮಪಾಶಕ್ಕೆ ಬಿದ್ದಿರುವೆ, ಸೆಕ್ಸ್ ಅಂದರೆ ನಿನಗೇನು ಗೊತ್ತಿಲ್ವಾ, ಎಂದೆಲ್ಲ ಒಂದೇ ಸಮನೆ ಎಸ್ಎಂಎಸ್ ಮೂಲಕ ಗೋಳುಹೊಯ್ದುಕೊಂಡಿದ್ದಾನೆ.

ಜೂನ್ 11ರಂದು ಫಲಿತಾಂಶ ಹೊರಬಿದ್ದೇ ತಡ, ಶರಂಗ್ಲೆ ತನ್ನ ವಿದ್ಯಾರ್ಥಿನಿಗೆ ಕಿರುಕುಳ ನೀಡಲಾರಂಭಿಸಿದ್ದಾನೆ. ಫಿಸಿಕ್ಸ್ ನಲ್ಲಿ ಡುಮ್ಕಿ ಹೊಡೆದಿದ್ದ ಈ ವಿದ್ಯಾರ್ಥಿನಿ, ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಜಸ್ಟ್ ಪಾಸ್ ಆಗಿದ್ದಳು. ಇದನ್ನೇ ಶರಂಗ್ಲೆ ತನ್ನ ದುರ್ಲಾಭಕ್ಕೆ ಬಳಸಿಕೊಂಡ. ಯಾಕ್ ಸಾರ್ ನನಗೆ ಮಾರ್ಕು ಕಮ್ಮಿ ಎಂದು ಕೇಳಿ ಈ ವಿದ್ಯಾರ್ಥಿನಿ ಅಮಾಯಕವಾಗಿ ಶರಂಗ್ಲೆಗೆ ಎಸ್ಎಂಎಸ್ ಮಾಡಿದ್ದೇ ಬಂತು. ಅವಳ ನಂಬರ್ ನೋಟ್ ಮಾಡಿಕೊಂಡವ ಸತತವಾಗಿ ವಿಕೃತ ಮನಸ್ಸನ್ನು ಅವರಳ ಮೇಲೆ ಹರಿಯಬಿಟ್ಟ.

ನೀನು, ಅಶ್ಲೀಲ ಚಿತ್ರಗಳನ್ನು ನೋಡಿರುವೆಯಾ, ಸೆಕ್ಸ್ ಅನುಭವಿಸಿದ್ದೀಯಾ, ಅದರ ಬಗ್ಗೆ ಸ್ವಲ್ಪನಾದರೂ ಐಡಿಯಾ ಇದೆಯಲ್ಲ, ಹೀಗೇ... ಇನ್ನೂ ಕೆಟ್ಟದ್ದಾಗೆಲ್ಲ ಮೆಸೇಜ್ ಕಳಿಸತೊಡಗಿದ. ಮೊದಲೇ ಕಂಪ್ಯೂಟರ್ ಮಾಸ್ಟರ್, ಇಂಟರ್ ನೆಟ್ ಅಶ್ಲೀಲತೆಯನ್ನು ಢಾಳಾಗಿ ಬಳಸತೊಡಗಿದ.

ಫೇಸ್ ಬುಕ್ ನಲ್ಲಿ ತನ್ನ ಸೆಕ್ಸ್ ಸಾಮರ್ಥ್ಯದ ಬಗ್ಗೆ ಕೊಚ್ಚಿಕೊಳ್ಳುವುದು ಇವನ ಹವ್ಯಾಸ. ಅನೇಕ ವಿದ್ಯಾರ್ಥಿನಿಯರೊಂದಿಗೆ ಮಲಗಿರುವೆ. ಅವರಿಗೆಲ್ಲ ಒಳ್ಳೊಳ್ಳೆ ಅಂಕಗಳು ಬಂದಿವೆ. ನನ್ನ ಟೀಚಿಂಗ್ ಸ್ಟೈಲ್ ಬಗ್ಗೆ ಹೆಣ್ಮಕ್ಕಳು ಹಾಡಿಹೊಗಳುತ್ತಾರೆ. ಒಬ್ಬಳಂತೂ ಇಡೀ ಕಾಲೇಜಿಗೆ ಫಸ್ಟ್ ಬದಳು. ಅದು ಸೆಕ್ಸ್ ಫಾರ್ ಮಾರ್ಕ್ಸ್ ಅಷ್ಟೆ ಎಂದೆಲ್ಲ ಈ ಭಡವ ಬರೆದುಕೊಂಡಿದ್ದಾನೆ.

ಆದರೆ ಇದನ್ನೆಲ್ಲ ನನಗೆ ತಡೆಯಲಾಗಲಿಲ್ಲ. ಇದಕ್ಕೆಲ್ಲ ಇತಿಶ್ರೀ ಹಾಡಬೇಕೆಂದು ನಿರ್ಧರಿಸಿದೆ. ಆಗಲೇ ಅನನ್ನು ಬಯಲಿಗೆಳೆದಿದ್ದು. ಆದರೆ ಪ್ರಿನ್ಸಿಪಾಲ್ ರನ್ನು ಭೇಟಿ ಮಾಡುವುದು ಇನ್ನೂ ಸಾಧ್ಯವಾಗಿಲ್ಲ ಎಂದು ಬಾಧಿತ ವಿದ್ಯಾರ್ಥಿನಿ ಹಿರಿಯ ಲೆಕ್ಚರ್ ಒಬ್ಬರಿಗೆ ತಿಳಿಸಿದ್ದಾಳೆ.

ಈ ಮಧ್ಯೆ, ವಿಷಯ ಪ್ರಿನ್ಸಿಪಾಲ್ ಎಂ.ಬಿ. ಕೇಕರ್ ಅವರ ಕಿವಿಗೂ ಬಿದ್ದಿದೆ. ನನ್ನ ಕಾಲೇಜಿನ 6,000 ವಿದ್ಯಾರ್ಥಿ/ವಿದ್ಯಾರ್ಥಿನಿಯರು ಮತ್ತು 200 ಬೋಧಕ ಸಿಬ್ಬಂದಿ ಇದ್ದಾರೆ. ಅಂತಹುದರಲ್ಲಿ ಇದ್ಯಾವೊದೂ ಕರಿ ಕುರಿ ನುಸುಳಿದೆ. ಆತನನ್ನು ವಿಚಾರಣೆಗೊಳಪಡಿಸಿ, ಸಸ್ಪೆಂಡ್ ಮಾಡುವೆ. ಅಂತಿಮಬವಾಗಿ ಇದು ನನ್ನ ಕಾಲೇಜಿನ ಗೌರವ ಮತ್ತು ಪ್ರತಿಷ್ಠೆಯ ಪ್ರಶ್ನೆ ಎಂದು ಭರವಸೆಯ ಮಾತುಗಳನ್ನು ಹೇಳಿದ್ದಾರೆ. ಕಾಲೇಜು ಇಂದಿನಿಂದ (ಜೂನ್ 15) ಪುನರಾರಂಭಗೊಂಡಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A lecturer of a reputed Goregaon college asked his 17-year-old student from Std XII to have sex with him, and flooded her with lewd SMSes. But Rahul Sarangle, 24, who teaches computer hardware at L S Patkar College of Arts and Science in Goregaon (W), claims he meant no offence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more