ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಣಸೂರು ವಿದ್ಯಾರ್ಥಿಗಳ ಅಪಹರಣ, ಕೊಲೆ: ಆರ್.ಕೆ. ದತ್ತಾ ವಿಚಾರಣೆಗೆ

By Srinath
|
Google Oneindia Kannada News

RK Dutta
ಹುಣಸೂರು, ಜೂನ್ 13: ಇಡೀ ರಾಜ್ಯವೇ ಬೆಚ್ಚಿಬಿದ್ದರುವ ಹುಣಸೂರು ಕಾಲೇಜು ವಿದ್ಯಾರ್ಥಿಗಳ ಅಪಹರಣ, ಕೊಲೆ ಪ್ರಕರಣ ತನಿಖೆಯನ್ನು ನೇರವಾಗಿ ಕಾನೂನು ಸುವ್ಯವಸ್ಥೆ ಮಹಾ ನಿರ್ದೇಶಕ ರೂಪ್ ಕುಮಾರ್ ದತ್ತಾ ಅವರಿಗೇ ವಹಿಸಲಾಗಿದೆ.

ಗೃಹ ಸಚಿವ ಆರ್. ಅಶೋಕ್ ಈ ಕುರಿತು ಆದೇಶ ಹೊರಡಿಸಿದ್ದು, ದತ್ತಾ ನೇತೃತ್ವದ ತಂಡ ತಕ್ಷಣದಿಂದಲೇ ತನಿಖೆ ಕೈಗೆತ್ತಿಕೊಂಡಿದೆ ಎಂದು ತಿಳಿಸಿದ್ದಾರೆ. ಈ ಮಧ್ಯೆ, ವಿದ್ಯಾರ್ಥಿಗಳ ಹತ್ಯೆ ಖಂಡಿಸಿ, ಹುಣುಸೂರು ಪಟ್ಟಣದಲ್ಲಿ ಇಂದು (ಜೂನ್ 13) ಬಂದ್ ಆಚರಿಸಲಾಗುತ್ತಿದೆ.

ಮೈಸೂರು ಮಹಾಜನ ಕಾಲೇಜಿನ ಬಿಬಿಎಂ ವಿದ್ಯಾರ್ಥಿಗಳಾದ ವಿಘ್ನೇಶ್ ಮತ್ತು ಸುಧೀಂದ್ರ ಅವರನ್ನು ಒಂದು ವಾರದ ಹಿಂದೆ ಅಪಹರಿಸಿದ್ದ ದುಷ್ಕರ್ಮಿಗಳು 6 ಕೋಟಿ ರುಪಾಯಿ ಬೇಡಿಕೆಯಿಟ್ಟಿದ್ದರು. ಹಣ ದೊರೆಯದೆ ನಿರಾಶೆಗೊಂಡ ದುಷ್ಮರ್ಮಿಗಳು ಈ ಹತ್ಯೆಗಳನ್ನು ಮಾಡಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಭಾನುವಾರ ಬೆಳಗ್ಗೆ ಚಿಕ್ಕಬಳ್ಳಾಪುರದ ಅಗಲಗುರ್ಕಿ ಬಳಿ ರಸ್ತೆ ಬದಿ ವಿಘ್ನೇಶ್ ಮತ್ತು ಸುಧೀಂದ್ರ ಅವರ ಶವಗಳು ದೊರೆತಿದ್ದವು.

English summary
Kidnapped Hunasur students killing case: RK Dutta to investigate in the meanwhile to protest against killigs today (June 13) Hunasur bandh has been observed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X