ಡಿಕೆ ಸುರೇಶ್ ಹತ್ಯೆಗೆ ಸುಪಾರಿ: ಆರೋಪಿ ಜಯದೇವ ಆಸ್ಪತ್ರೆಗೆ

ಕನಕಪುರ ತಾಪಂ ಮಾಜಿ ಅಧ್ಯಕ್ಷ ಹಾಗೂ ಜೆಡಿಎಸ್ ಮುಖಂಡ ಬಾಲನರಸಿಂಹೇಗೌಡರಿಗೆ ಹೃದಯ ಸಂಬಂಧಿ ಕಾಯಿಲೆ ಇಲ್ಲ. ಆದರೆ ಡಿ.ಕೆ. ಸುರೇಶ್ ಹತ್ಯೆಗೆ ಸುಪಾರಿ ಕೊಟ್ಟು ಪೊಲೀಸರ ಕೈಗೆ ಸಿಕ್ಕಿ ಬಿದ್ದಿರುವ ಹಿನ್ನೆಲೆಯಲ್ಲಿ ಅನಾರೋಗ್ಯದ ನೆಪವೊಡ್ಡಿ ಆಸ್ಪತ್ರೆಗೆ ಸೇರಿದ್ದಾರೆ. ಜಯದೇವ ಆಸ್ಪತ್ರೆಗೆ ಸೇರಿಸಿರುವುದರ ಹಿಂದೆ ಜೆಡಿಎಸ್ ಮುಖಂಡರ ಕೈವಾಡವಿದೆ ಎಂದು ಆರೋಪಿಸಲಾಗಿದೆ.
ಕನಕಪುರ ಪೊಲೀಸರ ಈ ಕ್ರಮವನ್ನು ಖಂಡಿಸಿ ಕನಕಪುರ ಹಾಗೂ ರಾಮನಗರ ಕಾಂಗ್ರೆಸ್ ಕಾರ್ಯಕರ್ತರು ಭಾನುವಾರ ಜಯದೇವ ಆಸ್ಪತ್ರೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ.
ಘಟನೆ ಹಿನ್ನಲೆ: ಡಿ.ಕೆ.ಶಿ ಅವರ ತಮ್ಮ ಡಿ.ಕೆ. ಸುರೇಶ್ ಕೊಲೆಗೆ ಸಂಚು ರೂಪಿಸಿದ್ದ ಆರೋಪದ ಮೇಲೆ ನಾಲ್ವರನ್ನ ಕೋಡಿಹಳ್ಳಿ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದರು. ಬಾಲನರಸಿಂಹೇಗೌಡ, ಕಾಳೇಗೌಡ, ಚಿಕ್ಕರಾಜು ಮತು ಲಕ್ಷ್ಮಣ್ ಅಲಿಯಾಸ್ ಹರೀಶ್ ಬಂಧಿತರು. ಸುರೇಶ್ ಹತ್ಯೆಗೆ ಬಾಲನರಸಿಂಹೇಗೌಡ ಸಂಚು ರೂಪಿಸಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಗುರುವಾರ ದೂರು ನೀಡಿದ್ದರು.
ಕಾರ್ಯಾಚರಣೆ ನಡೆಸಿದ ಕೋಡಿಹಳ್ಳಿ ಪೊಲೀಸರು, ಗುರುವಾರ ಮಧ್ಯರಾತ್ರಿಯೇ ತಾಲೂಕಿನ ಹೇರೋಂಪ್ಪನ ಹಳ್ಳಿಯಲ್ಲಿದ್ದ ಬಾಲನರಸಿಂಹೇಗೌಡ, ಚಿಕ್ಕರಾಜು ಮತ್ತು ಕಾಳೇಗೌಡರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.












Click it and Unblock the Notifications