ವೆಬ್ ಕ್ಯಾಮ್ ಹ್ಯಾಕ್ ಮಾಡಿ ನಗ್ನ ಚಿತ್ರ ಕ್ಲಿಕ್ಕಿಸುತ್ತಿದ್ದ!

ಆತನ ಹೆಸರು ತ್ರಿವೆರ್ ಹಾರ್ವೆಲ್. ಕೆಲಸ ಕಂಪ್ಯೂಟರ್ ಟೆಕ್ನೀಷಿಯನ್. ತನ್ನ ಮನೆಯಲ್ಲಿ ಕುಳಿತು ಬೇರೆ ಮನೆಯ ಬಾತ್ ರೂಂನಲ್ಲಿ ಇಣುಕಲು ಆತನೇನೂ ಕ್ಯಾಮೆರಾ ಇಟ್ಟಿರಲಿಲ್ಲ. ಕಂಪ್ಯೂಟರ್ ಬಳಕೆದಾರರ ಸ್ಪೈವೇರ್ ತಂತ್ರಾಂಶ ಅಪಹರಿಸಿ, ಅದೇ ಬಳಕೆದಾರರ ವೆಬ್ ಕ್ಯಾಮ್ ನ್ನು ತನ್ನ ಮನೆಯಲ್ಲಿ ಕುಳಿತು ಆಪರೇಟ್ ಮಾಡುತ್ತಿದ್ದ ಎಂದು ಡೈಲಿ ಮೇಲ್ ವರದಿ ಮಾಡಿದೆ.
ಬೇರೆ ಕಂಪ್ಯೂಟರ್ ನ ವೆಬ್ ಕ್ಯಾಮ್ ಆಕ್ಸೆಸ್ ಮಾಡಲು ಆತ ಪ್ರೋಗ್ರಾಂ ಬರೆದು ತನ್ನ ಕಂಪ್ಯೂಟರ್ ಗೆ ಇನ್ ಸ್ಟಾಲ್ ಮಾಡಿದ್ದ. ಇದರಿಂದ ಆತನಿಗೆ ಕಂಪ್ಯೂಟರ್ ಬಳಕೆದಾರರ ಕಂಪ್ಯೂಟರ್ ಮತ್ತು ವೆಬ್ ಕ್ಯಾಮ್ ರಿಮೋಟ್ ಆಕ್ಸೆಸ್ ಮಾಡಲು ಸಾಧ್ಯವಾಗಿತ್ತು. ಹೆಚ್ಚಾಗಿ ಮಹಿಳೆಯರು ಬಳಸುತ್ತಿದ್ದ ಕಂಪ್ಯೂಟರ್ ಗಳಿಗೆ ಕನ್ನ ಹಾಕುತ್ತಿದ್ದ. ಆತ ಸ್ಥಳೀಯ ಕಂಪ್ಯೂಟರ್ ರಿಪೇರಿ ಸಂಸ್ಥೆಯಲ್ಲಿ ದುಡಿಯುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಆತನಿಗೆ ಅವರೆಲ್ಲರ ಕಂಪ್ಯೂಟರ್ ವೆಬ್ ಕ್ಯಾಮ್ ಬಳಕೆ ಮಾಡಲು ಸಾಧ್ಯವಾಗಿತ್ತು. ಆದರೆ ಅವರ ಊಟ ಮಾಡುವ, ಪೇಪರ್ ಓದುವ ದೃಶ್ಯಗಳನ್ನು ವೆಬ್ ಕ್ಯಾಮ್ ನಲ್ಲಿ ಎಷ್ಟು ನೋಡುವುದು ಎಂದು ಅವನಿಗೆ ಖೇದವಾಗುತ್ತಿತ್ತು. ಕೆಲವರು ಬೆಡ್ ರೂಮಿನಲ್ಲಿ ಲ್ಯಾಪ್ ಟಾಪ್ ಇಟ್ಟರಂತೂ ಆತನಿಗೆ ಸ್ವರ್ಗ ಸಿಕ್ಕಂತಾಗುತ್ತಿತ್ತು.
ಆತನ ಬಳಿ ದೊರಕಿದ ಹೆಚ್ಚಿನ ನಗ್ನ ಚಿತ್ರಗಳು ಬಾತ್ ರೂಮ್ ಚಿತ್ರಗಳು. ಬಾತ್ ರೂಮಿಗ್ಯಾಕೆ ಅವರೆಲ್ಲರೂ ಲ್ಯಾಪ್ ಟಾಪ್/ಕಂಪ್ಯೂಟರ್ ಕೊಂಡೊಯ್ದರು ಎಂದು ಯೋಚಿಸಬೇಡಿ. ಈ ವಿ"ಚಿತ್ರ" ಕಾಮುಕ ಅದಕ್ಕೂ ಉಪಾಯ ಮಾಡಿದ್ದ. ಅದೇ ಉಪಾಯ ಆತ ಸುಲಭವಾಗಿ ಪೊಲೀಸರಿಗೆ ಸಿಕ್ಕಿ ಹಾಕಿಕೊಳ್ಳುವಂತೆ ಮಾಡಿತ್ತು.
ಈ ಚಿತ್ರಕೂಟದ ಕಳ್ಳ ಸಿಕ್ಕಿ ಬಿದ್ದದ್ದು ಹೇಗೆ? ಆತನ ನೆರೆಮನೆಯಾಕೆಯೊಬ್ಬಳ ಕಂಪ್ಯೂಟರಿನಲ್ಲಿ ಇಂಟರ್ನಲ್ ಸೆನ್ಸಾರ್ ಎರರ್ ಸಂದೇಶ ಬರುತ್ತಿತ್ತು. ಅದರಲ್ಲಿ "ನಿಮಗೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲವೇ. ಹಾಗಾದರೆ ಸೆನ್ಸಾರ್ ಕ್ಲೀನ್ ಆಗಲು ಬಿಸಿ ಆವಿಯ ಹತ್ತಿರವಿಡಿ" ಎಂಬ ಪದಗಳು ಬರುತ್ತಿದ್ದವು.
ಇಂತಹ ಸಂದೇಶ ಹಲವಾರು ಜನರಿಗೆ ಬರುತ್ತಿತ್ತು. ಅವರಲ್ಲಿ ಕೆಲವರು ತಮ್ಮ ಲ್ಯಾಪ್ ಟಾಪ್ ಗಳನ್ನು ಬಾತ್ ರೂಮಿನಲ್ಲಿ ತಾವು ಸ್ನಾನ ಮಾಡುವಲ್ಲಿ ತಂದಿಟ್ಟರು. ಸೆನ್ಸಾರ್ ಕ್ಲೀಯರ್ ಆಗಲಿ ಅಂತ. ಅವರಲ್ಲಿ ಯಾರಾದರೂ ಸ್ನಾನ ಮಾಡಿದಾಗ ನಗ್ನ ಚಿತ್ರಗಳನ್ನು ತನ್ನ ಕಂಪ್ಯೂಟರಿನಿಂದ ತೆಗೆಯುತ್ತಿದ್ದ. ಸದ್ಯ ಆತ ಜೈಲಿನಲ್ಲಿದ್ದಾನೆ. ಆದರೂ ಇದೀಗ ಹೆಚ್ಚಿನವರು ಲ್ಯಾಪ್ ಟಾಪ್ ಅಡಗಿಸಿಟ್ಟು ನಗ್ನವಾಗುತ್ತಿದ್ದಾರಂತೆ!












Click it and Unblock the Notifications