ಪತ್ನಿ ಮೇಲೆ ಕೋಪ ಅತ್ತೆ ಮೇಲೆ ತೀರಿಸಿಕೊಂದ!

Woman killed in Adugodi
ಬೆಂಗಳೂರು, ಜೂ 10: ತಂಗಿ ಮದುವೆಗೆ ತನ್ನ ಪತ್ನಿಯನ್ನು ಕರೆದುಕೊಂಡು ಹೋಗಲು ಬಂದ ಪತಿರಾಯನಿಗೆ ಅತ್ತೆಮನೆಯಲ್ಲಿ ಆದ ಅವಮಾನ ಸಹಿಸಲು ಆಗಲಿಲ್ಲ. ತನಗಿಂತ ತಾಯಿ ಮಾತನ್ನೇ ಹೆಚ್ಚಾಗಿ ಕೇಳುವ ಪತ್ನಿ ಮೇಲೆ ಹಲ್ಲೆ ಮಾಡಲು ಯತ್ನಿಸಿದ ಪತಿರಾಯನ ಕತ್ತಿಗೆ ಸಿಕ್ಕಿದ್ದು ಮಾತ್ರ ಅತ್ತೆಯ ಕೊರಳು. ಎಕೆ ಕಾಲೋನಿ ನಿವಾಸಿ 60 ವರ್ಷದ ಜಯಮ್ಮ ಮಾರಾಣಾಂತಿಕ ಹಲ್ಲೆಗೊಳಗಾಗಿ ನಿಮ್ಹಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಹೆಂಡತಿಯ ಮೇಲೆ ಕೋಪವನ್ನು ಅತ್ತೆ ಮೇಲೆ ತೀರಿಸಿಕೊಂಡ ಭೂಪ ವಿಜಯ್ ಕುಮಾರ್ ತಲೆ ಮರೆಸಿಕೊಂಡಿದ್ದಾನೆ.

ಅವನ ಹೆಸರು ವಿಜಯ್ ಕುಮಾರ್(27). ಆಡುಗೋಡಿ ಸದ್ಯಕ್ಕೆ ಕ್ಯಾಬ್ ಡ್ರೈವರ್ ಆಗಿದ್ದ. ಅನ್ಯಜಾತಿಯ ಹುಡುಗಿ ವಿಜಯಲಕ್ಷ್ಮಿ25 ಯನ್ನು ಮದುವೆಯಾಗಿದ್ದ. ಆದರೆ, ಇದು ವಿಜಯಲಕ್ಷ್ಮಿ ತಾಯಿಗೆ ಇಷ್ಟವಿರಲಿಲ್ಲ. 2009 ರಲ್ಲಿ ಮದುವೆಯಾದ ಈ ವಿಜಯ ಜೋಡಿ ನಡುವೆ ಮನಸ್ತಾಪ, ಹೊಡೆದಾಟ, ಬಡಿದಾಟ ಕಾಮನ್ ಆಗಿಬಿಟ್ಟಿತ್ತು. ಹೋಗ್ಲಿ ಮಗು ಹುಟ್ಟಿದ ಮೇಲಾದರೂ ಸಂಸಾರ ಸರಿ ಹೋಗುತ್ತೆ ಅಂದ್ರೆ, ಪರಿಸ್ಥಿತಿ ಇನ್ನೂ ಬಿಗಡಾಯಿಸಿತು. ವಿಜಯಲಕ್ಷ್ಮಿ ಮಗು ಕರೆದುಕೊಂಡು ತವರು ಮನೆಯಲ್ಲಿ ನೆಲೆಸಿದಳು.

ತನ್ನ ಸಂಸಾರದ ಈ ದುಃಸ್ಥಿತಿಗೆ ಅತ್ತೆಯೇ ಕಾರಣ ಎಂದು ವಿಜಯ್ ಕುಮಾರ್ ಗೆ ಅನ್ನಿಸತೊಡಗಿತ್ತು. ಗುರುವಾರ ಮಧ್ಯಾಹ್ನ ಅತ್ತೆ ಮನೆಗೆ ಬಂದು ಹೆಂಡತಿಯನ್ನು ಕರೆದುಕೊಂಡು ಹೋಗಲು ನಿರ್ಧರಿಸುತ್ತಾನೆ. ಆದರೆ, ವಿಜಯನ ಮಾತು ಕೇಳದ ಲಕ್ಷ್ಮಿ ತವರುಮನೆಯಲ್ಲೇ ಉಳಿಯುತ್ತಾಳೆ. ಕೋಪಗೊಂಡ ವಿಜಯ ತನ್ನ ಹಳೆ ರೌಡಿಸಂ ರೋಷವನ್ನು ತೋರಿಸಿತ್ತಾ ಕತ್ತಿ ಹಿಡಿದು ಆರ್ಭಟಿಸಿದ್ದಾನೆ. ಬೆಚ್ಚಿದ ಲಕ್ಷ್ಮಿ ಹಿಂದೆ ಸರಿದಿದ್ದಾಳೆ. ಮಗಳ ರಕ್ಷಣೆಗೆ ನಿಂತ ತಾಯಿ ತಲೆ ಕೊಟ್ಟು ಪ್ರಾಣ ತೆತ್ತಿದ್ದಾಳೆ.

ಆಡುಗೋಡಿ ಹಾಗೂ ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ವಿಜಯ್ ಕೊರಳಿಗೆ ಅತ್ತೆ ಕೊಂದ ಕೇಸ್ ಕೂಡಾ ಸುತ್ತಿಕೊಂಡಿದ್ದು, ವಿಜಯ್ ಗಾಗಿ ಮಡಿವಾಳ ಠಾಣಾ ಪೊಲೀಸರು ಹುಡುಕಾಟ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+