ಕಚ್ಚತ್ತೀವು ದ್ವೀಪ ಹಸ್ತಾಂತರ: ಕರುಣಾನಿಧಿಗೆ ಮುಳುಗುನೀರು

Kachchativu Island
ಚೆನ್ನೈ, ಜೂನ್ 10: ಕರುಣಾನಿಧಿ ಕೈಗೊಂಡ ಒಂದೊಂದೇ ನಿರ್ಧಾರಗಳಿಗೆ ತಮಿಳುನಾಡಿನ ಹಾಲಿ ಮುಖ್ಯಮಂತ್ರಿ ಜಯಲಲಿತಾ ಜಯರಾಂ ಒಂದೊಂದಾಗಿ ಕಲ್ಲು ಹಾಕುತ್ತಿದ್ದಾರೆ. ಕರುಣಾನಿಧಿಯ ಉಚಿತ ಟಿವಿ ಬಣ್ಣಗೆಟ್ಟಿದ್ದಾಯಿತು.

ಈಗ ನೆರೆಯ ಶ್ರೀಲಂಕಾ ವಶದಲ್ಲಿರುವ ಕಚ್ಚತ್ತೀವು ದ್ವೀಪವನ್ನು ಮರಳಿ ಭಾರತಕ್ಕೆ ಸೇರಿಸಲು ಜಯಲಲಿತಾ ಪಣ ತೊಟ್ಟಿದ್ದಾರೆ. ಈ ಮೂಲಕ ಸುಮಾರು ನಾಲ್ಕು ದಶಕಗಳ ಹಿಂದಿನ ವಿವಾದವೊಂದನ್ನು ಕೆದಕಿದ್ದಾರೆ.

ವಿವಾದ ಸುತ್ತ ಲಂಗರು: ಭಾರತದ ವಶದಲ್ಲಿದ್ದ ಕಚ್ಚತ್ತೀವು ದ್ವೀಪವನ್ನು 1974ರಲ್ಲಿ ಲಂಕಾಕ್ಕೆ ಬಿಟ್ಟುಕೊಡಲಾಗಿತ್ತು. ಆದರೆ ಸುಪ್ರೀಂಕೋರ್ಟ್‌ನ ತೀರ್ಪಿನ ಅನ್ವಯ ಸಂಸತ್ತಿನ ಎರಡೂ ಸದನಗಳ ಅನುಮತಿ ಪಡೆಯದೇ ದೇಶದ ಯಾವುದೇ ಭಾಗವನ್ನು ಬಿಟ್ಟುಕೊಡುವಂತಿಲ್ಲ.

ಹೀಗಾಗಿ ಅಂದಿನ ಮುಖ್ಯಮಂತ್ರಿ ಕರುಣಾನಿಧಿ 1974 ಮತ್ತು 1976ರಲ್ಲಿ ಲಂಕಾ ಸರ್ಕಾರದೊಂದಿಗೆ ಮಾಡಿಕೊಂಡ ಒಪ್ಪಂದ ಸುಪ್ರೀಂಕೋರ್ಟ್‌ನ ತೀರ್ಪಿಗೆ ವಿರುದ್ಧವಾಗಿದೆ. ಆಯಕಟ್ಟಿನ ಜಾಗದಲ್ಲಿರುವ ಕಚ್ಚತೀವು ದ್ವೀಪವನ್ನು ಮರಳಿ ಪಡೆಯಬೇಕೆಂಬುದು ಜಯಲಲಿತಾ ವಾದ.

ಕಚ್ಚತ್ತೀವು ದ್ವೀಪವನ್ನು ಶ್ರೀಲಂಕಾಕ್ಕೆ ಬಿಟ್ಟುಕೊಟ್ಟ ನಿರ್ಧಾರದ ಬಗ್ಗೆ ಜಯಲಲಿತಾ 2008ರಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದರು. ಇದೀಗ ಈ ಪ್ರಕರಣದಲ್ಲಿ ತಮಿಳುನಾಡಿನ ಕಂದಾಯ ಇಲಾಖೆಯನ್ನೂ ಕಕ್ಷೀದಾರನನ್ನಾಗಿ ಮಾಡಲು ತಮಿಳುನಾಡು ವಿಧಾನಸಭೆ ಸರ್ವಾನುಮತದ ನಿರ್ಣಯ ಕೈಗೊಂಡಿದೆ. ಸರ್ಕಾರದ ನಿರ್ಧಾರದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್‌ ಅವರು ಜಯಲಲಿತಾರನ್ನು ಗುರುವಾರ ಭೇಟಿಯಾಗಿ ಮುಂದಿನ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+