ಸಂಬಳ ಕೊಡದೆ ಸಾಫ್ಟ್ ವೇರ್ ಕಂಪೆನಿ ಪರಾರಿ
ಬೆಂಗಳೂರು
ಜೂ 10: ಒಂದೂವರೆ ತಿಂಗಳಾದರೂ ಸಂಬಳವಿರಲಿಲ್ಲ, ನಾಳೆ ಕೇಳೋಣ ಅಂಥಾ ಆಫೀಸ್ ಗೆ ಹೋದ್ರೆ ಕಂಪೆನಿಯೇ ಮಾಯ. ದಿಕ್ಕು ತೋಚದೆ ಐಟಿ ಉದ್ಯೋಗಿಗಳ ಕ್ಷೇಮಾಭಿವೃದ್ಧಿ ವೇದಿಕೆ (ಐಟಿಇಸಿ)ಗೆ ಮೊರೆ ಹೊಕ್ಕೆವು ಎನ್ನುತ್ತಾರೆ ಸಂತ್ರಸ್ತ ಸಾಫ್ಟ್ ವೇರ್ ಉದ್ಯೋಗಿ ಸುರೇಶ್. ಎಲೆಕ್ಟ್ರೋಸಿಸ್ ಇಂಡಿಯಾ ಎಂಬ ಹೆಸರಿನ ನಕಲಿ ಐಟಿ ಕಂಪೆನಿ ಸುಮಾರು 100 ಜನ ಉದ್ಯೋಗಿಗಳ ಸಂಬಳದ ಹಣವನ್ನು ಮೂಟೆ ಕಟ್ಟಿಕೊಂಡು ಪರಾರಿಯಾಗಿದೆ. id="toptextpromo">ಬಿಇ
ಹಾಗೂ ಎಂಸಿಎ ಪದವೀಧರರನ್ನು ನೇಮಕ ಮಾಡಿಕೊಂಡಿದ್ದ ಸಂಸ್ಥೆ, 80 ಸಾವಿರದಿಂದ 2 ಲಕ್ಷದವರೆಗೂ ಹಣ ಪೀಕಿಸಿತ್ತು. ಸುಮಾರು ಒಂದು ತಿಂಗಳು ಕೆಲಸ ಮಾಡಿದ ಉದ್ಯೋಗಿಗಳಿಗೆ ಸಂಬಳ ಸಿಗುವುದರ ಬಗ್ಗೆ ಅನುಮಾನ ಹುಟ್ಟಿ ಮ್ಯಾನೇಜ್ಮೆಂಟ್ ಅನ್ನು ಸಂಪರ್ಕಿಸಿದ್ದಾರೆ. ಸಂಬಳ ನೀಡುವ ಭರವಸೆ ನೀಡಿದ ಅಧಿಕಾರಿಗಳು ರಾತ್ರೋ ರಾತ್ರಿ ಕಂಪೆನಿಯ ಅಸ್ತಿಯನ್ನು ಬಾಚಿ ಗುಡಿಸಿಕೊಂಡು ಎಸ್ಕೇಪ್ ಆಗಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಪ್ರಕರಣ
ಈಗ ಪೊಲೀಸ್ ಜಂಟಿ ಆಯುಕ್ತ ಅಲೋಕ್ ಕುಮಾರ್ ಅವರ ಮುಂದಿದೆ. ನೌಕರರನ್ನು ವಂಚಿಸಿದ ಸಂಸ್ಥೆ ವಿರುದ್ಧ ಶೀಘ್ರ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನೊಂದ ಉದ್ಯೋಗಿಗಳ ಪರವಾಗಿ ಐಟಿಇಸಿ ಮನವಿ ಸಲ್ಲಿಸಿದೆ. ಅಲೋಕ್ ಕುಮಾರ್ ಅವರು ಉದ್ಯೋಗಿಗಳಿಂದ ಮಾಹಿತಿ ಪಡೆದು ಸಂಬಂಧಪಟ್ಟ ಠಾಣೆಗೆ ಶೀಘ್ರವೇ ಪ್ರಕರಣವನ್ನು ಇತ್ಯರ್ಥಗೊಳಿಸುವಂತೆ ಆದೇಶಿಸಿದ್ದಾರೆ.











Click it and Unblock the Notifications