ಬಾಬಾ ಆರ್ಮಿಗೆ ಬಿಜೆಪಿ ಬೆಂಬಲವಿಲ್ಲ : ಪ್ರಕಾಶ್
ನವದೆಹಲಿ,
ಜೂ.10: ಭ್ರಷ್ಟಾಚಾರ ವಿರೋಧಿ ಅಭಿಯಾನಕ್ಕೆ ಸಶಸ್ತ್ರ ಪಡೆ ರಚಿಸುವ ಬಾಬಾ ರಾಮ್‌ದೇವ್‌ರ ಯೋಜನೆಯಿಂದ ಬಿಜೆಪಿ ದೂರವುಳಿಯಲು ನಿರ್ಧರಿಸಿದೆ. ನಮ್ಮ ಪಕ್ಷವು ಎಂದೂ ಹಿಂಸೆಗೆ ಬೆಂಬಲ ನೀಡುವುದಿಲ್ಲ ಎಂದು ಪಕ್ಷದ ವಕ್ತಾರ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ. id="toptextpromo">ಭ್ರಷ್ಟಾಚಾರದ
ವಿರುದ್ಧ ಹೋರಾಡುವ ಯಾರಿಗೇ ಆದರೂ ಬಿಜೆಪಿ ನೈತಿಕ ಬೆಂಬಲ ನೀಡಲು ಸಿದ್ಧ. ನಾಗರಿಕ ಹಕ್ಕು ಹೋರಾಟಗಾರ ಅಣ್ಣಾ ಹಜಾರೆ ಹಾಗೂ ಬಾಬಾ ರಾಮ್‌ದೇವ್ ಆರೆಸ್ಸೆಸ್‌ನ ಮುಖವಾಡ ಎಂದಿರುವಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಅವರ ಆರೋಪ ಸತ್ಯಕ್ಕೆ ದೂರವಾದುದು. ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುವವರನ್ನು ಸಂಕಷ್ಟಕ್ಕೆ ಸಿಲುಕಿ, ಜನತೆಯ ದಾರಿ ತಪ್ಪಿಸುವುದು ಕಾಂಗ್ರೆಸ್ ನ ತಂತ್ರ. ಆಧಾರವಿಲ್ಲದ ಆರೋಪ ಮಾಡುವ ಚಿದಂಬರಂ, ಆರೆಸ್ಸೆಸ್ ಬಗ್ಗೆ ಸರಿಯಾಗಿ ತಿಳಿದುಕೊಂಡು ಮಾತನಾಡಲಿ ಎಂದು ಪ್ರಕಾಶ್ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಆರೆಸ್ಸೆಸ್
ನಿಷೇಧಿತ ಸಂಘಟನೆಯಲ್ಲ. ಧೈರ್ಯವಿದ್ದರೆ ಸರ್ಕಾರ ಅದರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಸವಾಲು ಹಾಕಿದರು.ಜೂ.5ರಂದು ರಾಮ್‌ಲೀಲಾ ಮೈದಾನದಲ್ಲಿ ಭ್ರಷ್ಟಾಚಾರ ವಿರೋಧಿ ಹೋರಾಟಗಾರರ ಮೇಲೆ ನಡೆದ ಮಧ್ಯರಾತ್ರಿಯ ಪೊಲೀಸ್ ದಾಳಿಯನ್ನು ಜಾವಡೇಕರ್ ತೀವ್ರವಾಗಿ ಖಂಡಿಸಿದ್ದಾರೆ, ಇದರ ಹಿಂದಿನ ಸತ್ಯವನ್ನು ಬಹಿರಂಗಪಡಿಸಲು ಸುಪ್ರೀಂ ಕೋರ್ಟ್‌ನ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.











Click it and Unblock the Notifications