ರಾಮದೇವ್ ಆರೋಗ್ಯ ಚಿಂತಾಜನಕ, ಆಸ್ಪತ್ರೆಗೆ ದಾಖಲು
ಹರಿದ್ವಾರ,
ಜೂ 10: ಕಾಳ ಧನದ ವಿರುದ್ಧ ಏಳು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಯೋಗ ಗುರು ಬಾಬಾ ರಾಮದೇವ್ ಅವರ ಆರೋಗ್ಯ ಸ್ಥಿತಿಯಲ್ಲಿ ಶುಕ್ರವಾರ ಮಧ್ಯಹ್ನಾದ ವೇಳೆಗೆ ಭಾರಿ ಏರುಪೇರು ಕಂಡುಬಂದಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಪ್ರಧಾನಿ ಮನಮೋಹನ್ ಸಿಂಗ್ ಅವರು ಹಿರಿಯ ಸಚಿವ ಪ್ರಣಬ್ ಮುಖರ್ಜಿ ಅವರನ್ನು ಸಂಧಾನಕ್ಕೆ ಕಳಿಸಿದ್ದಾರೆ. ತಾಜಾ ವರದಿಗಳ
ಪ್ರಕಾರ
ಬಾಬಾರನ್ನು
ಡೆಹ್ರಾಡೂನ್
ಆಸ್ಪತ್ರೆಗೆ
ಕರೆದೊಯ್ಯಲಾಗಿದೆ.
id="toptextpromo">
ಇದಕ್ಕೂ
ಮುನ್ನ, ತಕ್ಷಣವೇ ಬಾಬಾ ಉಪವಾಸ ವ್ರತವನ್ನು ನಿಲ್ಲಿಸಿ, ತೀವ್ರ ನಿಗಾ ಘಟಕಕ್ಕೆ ದಾಖಲಾಗಲೇಬೇಕು. ಒಂದು ವೇಳೆ ಬಾಬಾ ಉಪವಾಸ ನಿಲ್ಲಿಸದಿದ್ದರೆ ಸರಿಪಡಿಸಲಾಗದಷ್ಟು ಅವರ ಆರೋಗ್ಯ ಹದಗೆಡಲಿದೆ ಎಂದು ಅವರನ್ನು ನೋಡಿಕೊಳ್ಳುತ್ತಿರುವ ವೈದ್ಯರು ಎಚ್ಚರಿಸಿದ್ದರು. id='are-slot-1' class='oiad oi-axt oiadv'> id='top-searched-articles'>ಬಾಬಾ
ಅವರ ನಾಡಿಮಿಡಿತ ನಿಮಿಷಕ್ಕೆ 98ರಷ್ಟು ಪ್ರಮಾಣಕ್ಕೆ ಕುಸಿದಿದೆ. ರಕ್ತದೊತ್ತಡ 104/70ರಷ್ಟಿದ್ದು ಕಳವಳಕಾರಿಯಾಗಿದೆ. ಇನ್ನೂ ಆತಂಕದ ವಿಷಯವೆಂದರೆ ಬಾಬಾರ ಕಿಡ್ನಿ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ವೈದ್ಯರು ಹೇಳಿದ್ದಾರೆ.











Click it and Unblock the Notifications