ಕರಾವಳಿಯಲ್ಲಿ ಭಾರಿ ಅಲೆಗಳ ಭೀತಿ, ಕಟ್ಟೆಚ್ಚರ
ಮಂಗಳೂರು
ಜೂ 9: ರಾಜ್ಯ ನೈಸರ್ಗಿಕ ವಿಕೋಪ ನಿಯಂತ್ರಣ ಕೇಂದ್ರದ ಮುನ್ಸೂಚನೆ ಪ್ರಕಾರ, ಕರಾವಳಿಯಲ್ಲಿ ಬುಧವಾರದಿಂದ ಮುಂದಿನ 48 ಗಂಟೆಗಳೊಗೆ ಭಾರಿ ಮಳೆ ಬೀಳುವ ಸಾಧ್ಯತೆಗಳಿವೆ. ಕೇರಳ ಹಾಗೂ ಕರ್ನಾಟಕದ ಕರಾವಳಿ ತೀರದ ಮೀನುಗಾರರು ಸಮುದ್ರಕ್ಕೆ ಇಳಿದಿರಲು ಸೂಚಿಸಲಾಗಿದೆ. ಭಾರಿ ಗಾತ್ರದ ಅಲೆಗಳ ಭೀತಿ ಆವರಿಸಿದ್ದು, ಸುರಕ್ಷತಾ ಕ್ರಮಗಳತ್ತ ನಗರ ಪಾಲಿಕೆಗಳು ಸಜ್ಜುಗೊಳ್ಳಬೇಕಿದೆ. id="toptextpromo">ದಕ್ಷಿಣ
ಕನ್ನಡ ಜಿಲ್ಲೆ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆಯ ಜೊತೆ ಸಮುದ್ರದಲ್ಲಿ ದೈತ್ಯ ಅಲೆಗಳು ಏಳುವುದರಿಂದ ಜನತೆ ಮುಂಜಾಗರೂಕತೆಯಿಂದ ವರ್ತಿಸಬೇಕಾಗಿ ದಕ್ಷಿಣ ಕನ್ನಡ ಜಿಲ್ಲೆ ಡಿಸಿ ಎನ್ ಎಸ್ ಚನ್ನಪ್ಪ ಗೌಡ ಮನವಿ ಮಾಡಿದ್ದಾರೆ. ಸುಮಾರು 2.5 ರಿಂದ 6.5 ಮೀ ಎತ್ತರದ ಅಲೆಗಳು ಏಳುವ ಸಾಧ್ಯತೆಯಿದೆ. ಬುಧವಾರ ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ ಯಾವುದೇ ಹಾನಿ ಸಂಭವಿಸಿಲ್ಲ. id='are-slot-1' class='oiad oi-axt oiadv'> id='top-searched-articles'>ಸಮುದ್ರದ
ಏರಿಳಿತದಲ್ಲಿ ಭಾರಿ ವ್ಯತ್ಯಾಸ ಉಂಟಾಗುವ ಕಾರಣ ತೀರ ಪ್ರದೇಶದಲ್ಲಿ ವಾಸಿಸುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವುದು ಉತ್ತಮ. ನದಿ ನೀರಿನ ಮಟ್ಟ ದಿನೇದಿನೇ ಏರುತ್ತಿದ್ದು, ಕೆಲ ನದಿಗಳು ಸುಮಾರು 6 ಮೀಟರ್ ಗಳಷ್ಟು ಹೆಚ್ಚಿನ ಒಳಹರವು ಕಂಡು ಎಚ್ಚರಿಕೆ ಗಂಟೆ ಬಡಿದಿವೆ. ಭಾರಿ ಮಳೆಯಿಂದ ಕೃತಕ ನೆರೆ ವಾತಾವರಣ ಸೃಷ್ಟಿಯಾಗಿದ್ದು, ಹದಗೆಟ್ಟ ರಸ್ತೆ, ಚರಂಡಿ ವ್ಯವಸ್ಥೆಯಿಂದ ಜನತೆ ಕಂಗೆಡುವಂತಾಗಿದೆ.











Click it and Unblock the Notifications