ಭ್ರಷ್ಟಾಚಾರದ ವಿರುದ್ಧ ಸೋನಿಯಾಗೂ ಬೆಂಬಲವೇ: ಆರ್ಎಸ್ಎಸ್
ಪುತ್ತೂರು,
ಜೂನ್ 9: ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೋರಾಟ ಮಾಡಿದರೆ ಆರೆಸ್ಸೆಸ್ ಅವರನ್ನೂ ಬೆಂಬಲಿಸುತ್ತದೆ. ಆರೆಸ್ಸೆಸ್‌ನ ಬೆಂಬಲ ಯಾವುದೇ ವ್ಯಕ್ತಿಗೆ ಸೀಮಿತವಾಗಿಲ್ಲ ಎಂದು ಆರೆಸ್ಸೆಸ್ ದಕ್ಷಿಣ ಕ್ಷೇತ್ರ ಸಂಪರ್ಕ ಪ್ರಮುಖ್ ಡಾ. ಪ್ರಭಾಕರ ಭಟ್ ಕಲ್ಲಡ್ಕ ಪ್ರತಿಕ್ರಿಯಿಸಿದ್ದಾರೆ. id="toptextpromo">ಕೇಂದ್ರ
ಗೃಹ ಸಚಿವ ಪಿ.ಚಿದಂಬರಂ ಅವರು ಬಾಬಾ ರಾಮ್‌ದೇವ್ ಅವರ ಭ್ರಷ್ಟಾಚಾರ ವಿರೋಧಿ ಹೋರಾಟದ ಹಿಂದೆ ಆರೆಸ್ಸೆಸ್ ಸಂಚು ಇದೆ. ಈ ಸಂಚನ್ನು ಪುತ್ತೂರಿನಲ್ಲಿ ನಡೆದ ಸಂಘದ ಅಖಿಲ ಭಾರತ ಪ್ರತಿನಿಧಿ ಸಭಾದಲ್ಲಿಯೇ ಸಿದ್ಧಪಡಿಸಲಾಗಿತ್ತು ಎಂಬ ಆರೋಪದ ಕುರಿತಂತೆ ದಿನಪತ್ರಿಕೆಯೊಂದಕ್ಕೆ ಡಾ. ಭಟ್ ಅವರು ಮೇಲಿನಂತೆ ಪ್ರತಿಕ್ರಿಯೆ ನೀಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಪುತ್ತೂರಿನಲ್ಲಿ
ನಡೆದ ಅಖಿಲ ಭಾರತ ಪ್ರತಿನಿಧಿ ಸಭಾದಲ್ಲಿ ಭ್ರಷ್ಟಾಚಾರದ ವಿರುದ್ಧ ಆರೆಸ್ಸೆಸ್ ನಿರ್ಣಯ ತೆಗೆದುಕೊಂಡಿತ್ತು. ಆದರೆ ಈ ನಿರ್ಣಯವು ಸಂಘ ಸಮಾಜಕ್ಕೆ ನೀಡಿದ ಸಂದೇಶವೇ ಹೊರತು ಯಾರದೇ ಪರ ಅಥವಾ ವಿರುದ್ಧ ತೆಗೆದುಕೊಂಡ ತೀರ್ಮಾನವಲ್ಲ. ಸಂಘದ ಈ ತೀರ್ಮಾನದ ಕುರಿತಂತೆ ದೇಶದ ಗೃಹ ಸಚಿವರು ತಪ್ಪಾಗಿ ಅರ್ಥೈಸಿಕೊಂಡು ತಮ್ಮ ಮೂಗಿನ ನೇರಕ್ಕೆ ಪ್ರತಿಕ್ರಿಯೆ ನೀಡಿರುವುದು ಸರಿಯಲ್ಲ ಎಂದು ಡಾ. ಭಟ್ ಸ್ಪಷ್ಟಪಡಿಸಿದ್ದಾರೆ.











Click it and Unblock the Notifications