ಮತಾಂತರಗೊಂಡ ದಲಿತರಿಗೆ ಮೀಸಲಾತಿ ಬೇಡ: ಬಿಜೆಪಿ

ಮತಾಂತರಗೊಂಡ ದಲಿತರಿಗೆ ಮೀಸಲಾತಿ ಬೇಡ: ಬಿಜೆಪಿ
ಉಡುಪಿ, ಜೂನ್ 8: ಇತರ ಧರ್ಮಗಳಿಗೆ ಮತಾಂತರಗೊಂಡ ದಲಿತರಿಗೆ ಮೀಸಲಾತಿ ನೀಡಬೇಕೆಂಬ ರಂಗನಾಥ್ ಮಿಶ್ರಾ ಆಯೋಗದ ಪ್ರಸ್ತಾಪಕ್ಕೆ ಅಂಕಿತ ಹಾಕಬಾರದೆಂದು ಉಡುಪಿ ಜಿಲ್ಲಾ ಬಿಜೆಪಿ ಘಟಕ ರಾಷ್ಟ್ರಪತಿಯವರಿಗೆ ಮನವಿ ಮಾಡಿದೆ.

ರಾಷ್ಟ್ರಪತಿಯವರಿಗೆ ಬರೆದ ಮನವಿ ಪತ್ರವನ್ನು ನಿನ್ನೆ ಜಿಲ್ಲಾಧಿಕಾರಿ ಎಂ.ಟಿ. ರಾಜು ಅವರಿಗೆ ನೀಡಲಾಗಿದೆ. ಮತಾಂತರಗೊಂಡವರಿಗೆ ಮೀಸಲಾತಿ ನೀಡುವುದರಿಂದ ಮತಾಂತರವಾಗದ ದಲಿತರಿಗೆ ನೀಡುವ ಮೀಸಲಾತಿ ಕಡಿತವಾಗುತ್ತದೆ ಎಂದು ಅದರಲ್ಲಿ ಹೇಳಲಾಗಿದೆ.

ಮಾನ್ಯ ರಾಷ್ಟ್ರಪತಿಯವರು ರಂಗನಾಥ್ ಮಿಶ್ರಾ ಪ್ರಸ್ತಾಪಕ್ಕೆ ಅಂಕಿತ ಹಾಕಬಾರದೆಂದು ಮನವಿ ಮಾಡಲಾಗಿದೆ. ಇದರಿಂದ ಮತಾಂತರವಾಗದ ದಲಿತರಿಗೆ ಅನ್ಯಾಯವಾಗಲಿದೆ ಎಂದು ಬಿಜೆಪಿ ವಾದಿಸಿದೆ.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಉದಯಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕಟಪಾಡಿ ಶಂಕರ್ ಪೂಜಾರಿ, ಬಿಜೆಪಿ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಶಿವರಾಜ್ ಮಲ್ಲಾರ್ ಮತ್ತು ಪ್ರಧಾನ ಕಾರ್ಯದರ್ಶಿ ಚಂದ್ರ ಮಲ್ಲಾರ್ ಒಟ್ಟಾಗಿ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+