ರಾಜ್ ಘಾಟ್ ನಲ್ಲಿ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ
ನವದೆಹಲಿ,
ಜೂನ್ 8: ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ನೇತೃತ್ವದ ತಂಡ ಒಂದು ದಿನದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಸಂತೋಷ್ ಹೆಗ್ಡೆಯನ್ನು ಹೊರತುಪಡಿಸಿ ಹಜಾರೆ ನಿಕಟವರ್ತಿಗಳಾದ ಅರವಿಂದ್ ಕ್ರೇಜಿವಾಲ್, ಪ್ರಶಾಂತ್ ಭೂಷಣ್, ಕಿರಣ್ ಬೇಡಿ ಕೂಡ ನಿರಶನ ನಡೆಸಲಿದ್ದಾರೆ. id="toptextpromo">ಜಂತರ್
ಮಂತರ್ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಅಲ್ಲಿ ನಿರಶನ ನಡೆಸದಂತೆ ದೆಹಲಿ ಪೋಲಿಸರು ಸೂಚಿಸಿದ್ದರು. ಹೀಗಾಗಿ ಅಣ್ಣಾ ನೇತೃತ್ವದ ತಂಡ ರಾಜ್ ಘಾಟ್ ನಲ್ಲಿ ಬೆಳಗ್ಗೆ ಹತ್ತು ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ಉಪವಾಸ ನಡೆಸುವುದಾಗಿ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಇಲ್ಲಿ
ನಿರಶನದೊಂದಿಗೆ ಸರ್ವಧರ್ಮ ಪ್ರಾರ್ಥನಾ ಸಭೆ ಮತ್ತು ಲೋಕಪಾಲ ವಿಧೇಯಕ ಕುರಿತು ಚರ್ಚೆ ಕೂಡ ನಡೆಸಲಿದ್ದಾರೆ. ತಾವು ಸರಕಾರಿ ಹುದ್ದೆಯಲ್ಲಿರುವುದರಿಂದ ಯಾವುದೇ ಪ್ರತಿಭಟನೆ ಮತ್ತು ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವುದಿಲ್ಲವೆಂದು ನ್ಯಾಯಮೂರ್ತಿ, ಕರ್ನಾಟಕ ಲೋಕಯುಕ್ತ ಸಂತೋಷ್ ಹೆಗ್ಡೆ ತಿಳಿಸಿದ್ದಾರೆ.











Click it and Unblock the Notifications