ದೇಶದಲ್ಲಿ ಗೋಧಿ ಸಂಗ್ರಹ ಎಷ್ಟಿದೆ ಗೊತ್ತಾ ?

Wheat Procurement 2011 in India
ನವದೆಹಲಿ ಜೂ 7 : ದೇಶದಲ್ಲಿ ಈ ವರ್ಷ ಗೋಧಿಯನ್ನು ದಾಖಲೆಯ ಪ್ರಮಾಣದಲ್ಲಿ ಬೆಳೆಯಲಾಗಿದ್ದು ಸರ್ಕಾರದ ಸಂಗ್ರಹದಲ್ಲಿ ಶೇ 18 ರಷ್ಟು ಹೆಚ್ಚಳ ದಾಖಲಾಗಿದ್ದು, ಒಟ್ಟು 26.43 ಗೋಧಿ ಸಂಗ್ರಹವಾಗಿದ್ದು ಇದು ದಾಖಲೆ ಆಗಿದೆ. ಕಳೆದ ವರ್ಷ ಆಹಾರ ನಿಗಮ ಒಟ್ಟು 22.41 ಮಿಲಿಯನ್ ಟನ್ ಗಳಷ್ಟು ಗೋಧಿಯನ್ನು ಸಂಗ್ರಹಿಸಿತ್ತು. ಭಾರತದಿಂದ ಸುಮಾರು 250,000 ಟನ್ ಗಳಷ್ಟು ಗೋಧಿಯನ್ನು ಅಫ್ಘಾನಿಸ್ತಾನಕ್ಕೆ ಈ ಬಾರಿ ರಫ್ತು ಮಾಡಲಾಗುತ್ತಿದೆ.

ಗೋಧಿ ಸಂಗ್ರಹವನ್ನು ಏಪ್ರಿಲ್ ತಿಂಗಳಿನಿಂದ ಜೂನ್ ತಿಂಗಳವರೆಗೆ ಮಾಡಲಾಗುತ್ತಿದ್ದು ಒಟ್ಟು ಉತ್ಪಾದನೆ 84.27 ಮಿಲಿಯನ್ ಟನ್ ಗಳಾಗಿವೆ. 2011-12 ನೇ ಸಾಲಿಗೆ ಆಹಾರ ನಿಗಮ 26.2 ಮಿಲಿಯನ್ ಟನ್ ಗಳಷ್ಟು ದಾಖಲೆ ಪ್ರಮಾಣದ ಗೋಧಿಯನ್ನು ಸಂಗ್ರಹಿಸಿದೆ. ದೇಶದ ಮಾರುಕಟ್ಟೆಗೆ ಒಟ್ಟು 30 ಮಿಲಿಯನ್ ಟನ್ ಗಳಷ್ಟು ಗೋಧಿ ಬಂದಿದ್ದು ಈ ಪ್ರಮಾಣ ಕಳೆದ ವರ್ಷ 25.12 ಮಿಲಿಯನ್ ಟನ್ ಗಳಾಗಿತ್ತು.

ಸರ್ಕಾರಿ ಮೂಲಗಳ ಪ್ರಕಾರ ಈ ವರ್ಷ ಪಂಜಾಬ್‌ನಿಂದ 10.92 ಮಿಲಿಯನ್ ಟನ್ ಗಳಷ್ಟು ಗೋಧಿ ಸಂಗ್ರಹ ಮಾಡಲಾಗಿದ್ದು ಹರ್ಯಾಣದಿಂದ 6.87 ಮಿಲಿಯನ್ ಟನ್, ಮಧ್ಯಪ್ರದೇಶ, ಉತ್ತರ ಪ್ರದೇಶ ಹಾಗೂ ರಾಜಸ್ತಾನದಿಂದ ಕ್ರಮವಾಗಿ 4.81, 2.4 ಹಾಗೂ 1.1 ಮಿಲಿಯನ್ ಟನ್ ಗಳಷ್ಟು ಸಂಗ್ರಹ ಮಾಡಲಾಗಿದೆ. ಸರ್ಕಾರ ಟನ್ ಒಂದಕ್ಕೆ 1170 ರೂಪಾಯಿ ಹಾಗೂ ಬೋನಸ್ ಆಗಿ ರೂ 50 ನ್ನು ರೈತರಿಗೆ ನೀಡುತ್ತಿದೆ.

ಈ ವರ್ಷ ಅಕ್ಕಿ ಸಂಗ್ರಹದಲ್ಲೂ ಏರಿಕೆ ದಾಖಲಾಗಿದ್ದು, ಒಟ್ಟು 28.39 ಮಿಲಿಯನ್ ಟನ್ ಗಳಷ್ಟು ಅಕ್ಕಿ ಸಂಗ್ರಹವಾಗಿದ್ದು ಹಿಂದಿನ ವರ್ಷ 28.05 ಮಿಲಿಯನ್ ಟನ್ ಗಳಷ್ಟು ಅಕ್ಕಿ ಸಂಗ್ರಹವಾಗಿತ್ತು. ಎರಡು ವರ್ಷಗಳ ಹಿಂದೆ 32,03 ಮಿಲಿಯನ್ ಟನ್ ಗಳಷ್ಟು ಅಕ್ಕಿಯನ್ನು ಸಂಗ್ರಹಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+