ಮರದ ಮೇಲೆ ಮನುಜನ ನಾಟಕ, ಏನಿದು ಸೋಜಿಗ!

Drama on Tree US Moiyuddin
ಬೆಂಗಳೂರು, ಜೂ 7: ಮಕ್ಕಳು ನೀಡುವ ಸಂದೇಶ ವಿಶಿಷ್ಟವಾಗಿರುತ್ತವೆ. ಕೆಲವೊಂದು ಸಂದೇಶಗಳಂತೂ ಮನಸ್ಸಲ್ಲಿ ಸದಾ ಹಸಿರಾಗಿ ಉಳಿಯುತ್ತವೆ. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮರದ ಮೇಲೆಯೇ ನಾಟಕ ನಡೆಸಿ ಪರಿಸರ ಉಳಿಸುವ ಸಂದೇಶ ಸಾರಿದ ಕನಕಪುರ ರಸ್ತೆಯ ಮ್ಯಾಗ್ನಿಫಿಕ್ ಪಬ್ಲಿಕ್ ಶಾಲೆಯ ಮಕ್ಕಳು ಗಮನ ಸೆಳೆದಿದ್ದಾರೆ.

ಆರ್ಟ್ ಆಫ್ ಲಿವಿಂಗ್ ಸಮೀಪವೇ ಇರುವ ಹಚ್ಚ ಹಸಿರಿನ ಪರಿಸರದ ನಡುವೆ ಈ ಶಾಲೆ ಇದೆ. ತಮ್ಮ ಪರಿಸರಕ್ಕೆ ತಕ್ಕಂತೆ ಅವರು ಪರಿಸರ ಉಳಿಸುವ ಸಂದೇಶವನ್ನು ನಾಟಕದ ಮೂಲಕ ಮರಗಳನ್ನು ಕಡಿಯಬೇಡಿ, ಗಿಡ ಮರಗಳನ್ನು ಪೋಷಿಸಿ, ಮನುಷ್ಯರಿಗೆ ಮಾತ್ರವಲ್ಲ, ಪ್ರಾಣಿ, ಪಕ್ಷಿಗಳಿಗೆ ಸಹ ಕಾಡು ಅಗತ್ಯ ಎಂಬ ಸಂದೇಶ ಸಾರಲಾಯಿತು.

"ಏ ಮನುಷ್ಯರೇ, ಕಾಡು ನಿಮಗೆ ಬೇಡದೆ ಇರಬಹುದು, ನಮಗಂತೂ ಬೇಕು" ಎಂದು ವನ್ಯಪ್ರಾಣಿಗಳು ಒಗ್ಗೂಡಿ ಮನುಷ್ಯರಿಗೆ ಬುದ್ಧಿ ಹೇಳುವಂತಹ ವಿಶಿಷ್ಟ ಸಂದೇಶ ರವಾನೆಯಾಯಿತು. ಪರಿಸರವಾದಿಯೂ ಆಗಿರುವ ಶಿಕ್ಷಣ ತಜ್ಞ ಯು ಎಸ್. ಮೊಯಿನುದ್ದೀನ್ ಅವರು ನಾಟಕವನ್ನು ರಚಿಸಿ ಮರದ ಮೇಲೆಯೇ ಪ್ರದರ್ಶನ ಕಾಣುವಂತೆ ನಿರ್ದೇಶಿಸಿದ್ದರು.

1ನೇ ತರಗತಿಯ ನಿಖಿತಾ ನವಿಲಿನ ಪಾತ್ರ ನಿರ್ವಹಿಸಿದರೆ, 9ನೇ ತರಗತಿಯ ಶಂಕರಮೂರ್ತಿ ಚಿರತೆಯ ಪಾತ್ರ ನಿರ್ವಹಿಸಿದ್ದ. ಅದೇ ತರಗತಿಯ ಫರೂಕ್ ಮರ ಕಡಿಯುವವನ ಪಾತ್ರ ನಿರ್ವಹಿಸಿದ್ದ. ಕಾಡುಮನುಷ್ಯರ ಪಾತ್ರಗಳೂ ಅಲ್ಲಿದ್ದವು. ವನ್ಯ ಪ್ರಾಣಿಗಳೆಲ್ಲ ಒಟ್ಟಾಗಿ ಮನುಷ್ಯರು ಮರ ಕಡಿಯುವುದಕ್ಕೆ ತಡೆ ಒಡ್ಡುವ ಸರಳ, ಸುಂದರ ನಿರೂಪಣೆ ನಾಟಕದ ಮೂಲಕ ಮೂಡಿಬಂತು. ಮರದ ಮೇಲೆಯೇ ನಾಟಕ ನಡೆದುದರಿಂದ ಅದು ವಿಶಿಷ್ಟವಾಗಿ ಗಮನ ಸೆಳೆಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+