ಇನ್ಫೋಸಿಸ್ ನಾರಾಯಣ ಮೂರ್ತಿ ಪುತ್ರ ರೋಹನ್ ವಿವಾಹ

ಮಾಧ್ವ ಬ್ರಾಹ್ಮಣ ಸಂಪ್ರದಾಯದಂತೆ ಮದುವೆ ಶಾಸ್ತ್ರಗಳು ನೆರವೇರಿದವು. ಚೆನ್ನೈನ ಹೊರವಲಯದಲ್ಲಿ ಸೋಮವಾರ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ, ವಾರಾಂತ್ಯದಲ್ಲಿ ಬೆಂಗಳೂರಿನಲ್ಲೂ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.
ಮುಂಜಾನೆ 10.15ರ ಶುಭ ಮಹೂರ್ತದಲ್ಲಿ ರೋಹನ್ (28), ಲಕ್ಷ್ಮೀಗೆ ಮಂಗಳಸೂತ್ರ ಕಟ್ಟಿದರು. ತಿರುಪತಿ ತಿರುಮಲ ದೇಗುಲದಿಂದ ಆಗಮಿಸಿದ್ದ 150 ಜನ ಪುರೋಹಿತರ ಮಂಗಳಘೋಷದ ನಡುವೆ ವಿವಾಹ ಕಾರ್ಯಕ್ರಮ ನಡೆಯಿತು. ರೋಹನ್ ರೇಷ್ಮೆ ವಸ್ತ್ರ ತೊಟ್ಟಿದ್ದರೆ, ಲಕ್ಷ್ಮೀ ಕೆಂಪು ಸೀರೆಯುಟ್ಟು ಎಲ್ಲರ ಗಮನ ಸೆಳೆದರು. ರೋಹನ್, ಮೈಕ್ರೋಸಾಫ್ಟ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಾರೆ.
ವಿವಾಹ ಸಮಾರಂಭದಲ್ಲಿ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ, ಕೇಂದ್ರ ಸಚಿವರಾದ ಚಿದಂಬರಂ, ಕಮಲ್‌ನಾಥ್, ಆನಂದ್ ಶರ್ಮಾ, ಜಿ.ಜೆ.ವಾಸನ್, ಇನ್ಫೋಸಿಸ್‌ನ ಮಾಜಿ ಮುಖ್ಯಸ್ಥ ನಂದನ್ ನಿಲೇಕಣಿ, ಏರ್ ಡೆಕ್ಕನ್ ಸಂಸ್ಥಾಪಕ ಕ್ಯಾಪ್ಟನ್ ಗೋಪಿನಾಥ್, ಗೋದ್ರೆಜ್ ಸಮೂಹದ ಅಧ್ಯಕ್ಷ ಆದಿ ಗೋದ್ರೆಜ್ ಸೇರಿದಂತೆ ಹಲವು ಗಣ್ಯರು ಶುಭ ಸಮಾರಂಭದಲ್ಲಿ ಉಪಸ್ಥಿತರಿದ್ದರು.












Click it and Unblock the Notifications