'ಮಠಗಳಲ್ಲಿರುವ ಕಾಳ ಧನ ಹೊರಕ್ಕೆ ಬರಲಿ'

Confiscate black money in religious mutts
ಬೆಂಗಳೂರು, ಜೂನ್ 6 : ಯೋಗ ಗುರು ರಾಮ್‌ದೇವ್‌ ಹೋರಾಟದ ಪರ ಬೆಂಬಲ ವ್ಯಕ್ತವಾಗಿರುವ ಬೆನ್ನಿಗೇ ಅವರ ಹೋರಾಟದ ರೀತಿ ಬಗ್ಗೆ ಅಪಸ್ವರವೂ ಕೇಳಿ ಬಂದಿದೆ. ಸ್ವಿಸ್‌ ಬ್ಯಾಂಕ್‌ನಲ್ಲಿರುವ ಕಪ್ಪು ಹಣದ ಬಗ್ಗೆ ಮಾತನಾಡುವವರು ದೇಶದ ಮಠಗಳಲ್ಲಿರುವ, ತೆರಿಗೆ ವ್ಯಾಪ್ತಿಗೆ ಬಾರದ ಲಕ್ಷಾಂತರ ಕೋಟಿ ರೂ. ಕಪ್ಪುಹಣದ ಬಗ್ಗೆ ಚಕಾರ ಎತ್ತುತ್ತಿಲ್ಲ. ಆ ಹಣ ಮುಟ್ಟುಗೋಲಿಗೆ ಕ್ರಮ ಕೈಗೊಳ್ಳಬೇಕು ಎಂದು ಜಯಪ್ರಕಾಶ್‌ ನಾರಾಯಣ್‌ ವಿಚಾರ ವೇದಿಕೆ ಒತ್ತಾಯಿಸಿದೆ.

ಕೇಂದ್ರ ಸರ್ಕಾರವೂ ಎಲ್ಲ ಮಠಗಳು ಹಾಗೂ ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನು ಲೆಕ್ಕ ಪರಿಶೋಧನೆಗೆ ಒಳಪಡಿಸಿ ತೆರಿಗೆ ವಿಧಿಸಲು ಮುಂದಾಗಬೇಕು. ಬಹುತೇಕ ರಾಜಕೀಯ ನಾಯಕರು, ಭ್ರಷ್ಟ ಅಧಿಕಾರಿಗಳು, ಉದ್ಯಮಿಗಳು ಈ ದೇಶದ ಧಾರ್ಮಿಕ ಶ್ರದ್ಧಾಕೇಂದ್ರಗಳಲ್ಲಿ ತಮ್ಮ ಭ್ರಷ್ಟಾಚಾರದ ಹಣ ತೊಡಗಿಸಿದ್ದಾರೆ. ಇವು ಭಾರತದಲ್ಲಿರುವ ಸ್ವಿಸ್‌ ಬ್ಯಾಂಕ್‌ಗಳಾಗಿವೆ ಎಂದು ವೇದಿಕೆ ಅಧ್ಯಕ್ಷ ಬಿ.ಎಂ.ಶಿವಕುಮಾರ್ ದೂರಿದ್ದಾರೆ.

ಅಡ್ವಾಣಿ ಮೇಲೆ ಕಾಳಧನ ಮಸಿ : ಎಲ್‌.ಕೆ. ಅಡ್ವಾಣಿ ಅವರೇ ಉಪ ಪ್ರಧಾನಿ ಮತ್ತು ಗೃಹ ಮಂತ್ರಿಯಾಗಿದ್ದರೂ ಅವರು ಕಪ್ಪು ಹಣ ತರುವ ಪ್ರಯತ್ನ ಮಾಡಲಿಲ್ಲ. ಬಿಜೆಪಿ ನಾಯಕರ ಕೈಯನ್ನು ಆಗ ಯಾರು ಕಟ್ಟಿ ಹಾಕಿದ್ದರು ಎಂಬುದನ್ನು ಅಡ್ವಾಣಿ ಮತ್ತು ಗಡ್ಕರಿ ಸ್ಪಷ್ಟಪಡಿಸಲಿ ಎಂದು ಜೆಡಿಎಸ್ ಮುಖಂಡ ಎಚ್. ಡಿ. ಕುಮಾರಸ್ವಾಮಿ ಲೇವಡಿ ಮಾಡಿದರು.

ಬಿಜೆಪಿಯ ಉಕ್ಕಿನ ಮನುಷ್ಯನೆಂದು ಕರೆ‌ಯಲ್ಪಡುವ ಅಡ್ವಾಣಿ ಅವರು ಈಗ ಕಪ್ಪುಹಣ ತರುವ ಶಪಥ ಮಾಡುತ್ತಾರೆ. ಆದರೆ ಅಧಿಕಾರ ಇದ್ದಾಗ ಮೌನವಾಗಿದ್ದರು. ರಾಮ್‌ದೇವ್‌ ಹೋರಾಟದ ಲಾಭ ಪಡೆಯಲು ಬಿಜೆಪಿ ಹವಣಿಸುತ್ತಿರುವುದು ಇದರಿಂದ ಗೊತ್ತಾಗಿದೆ. ಕೇಂದ್ರದಲ್ಲಿ ಯುಪಿಎ ಬದಲು ಎನ್‌ಡಿಎಯನ್ನು ಅಧಿಕಾರಕ್ಕೆ ತರಲು ರಾಮ್‌ದೇವ್‌ ಸಹ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+