ಕೆಲಸ ಸಿಗದಿದ್ದಕ್ಕೆ ಟೆಕ್ಕಿ ಪತ್ನಿ ಆತ್ಮಹತ್ಯೆ
ಬೆಂಗಳೂರು
ಜೂ 4: ಎಷ್ಟು ಹುಡುಕಿದರೂ ಕೆಲಸ ಸಿಗದಿದ್ದಕ್ಕೆ ಮನನೊಂದ ಸಾಫ್ಟ್ ವೇರ್ ಉದ್ಯೋಗಿಯೊಬ್ಬರ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೊಡಿಗೇಹಳ್ಳಿಯ ವಿರೂಪಾಕ್ಷಪುರದಲ್ಲಿ ವಾಸವಾಗಿರುವ ಅಭಿಜಿತ್ ಸಿಕಂದರ್ ಎಂಬುವರ ಪತ್ನಿ ಅಸ್ತೀ ಶೇಖರ್ (25) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡವರು. id="toptextpromo">ವಿಪ್ರೋ
ಕಂಪೆನಿಯ ಫೈನಾನ್ಸ್ ವಿಭಾಗದಲ್ಲಿ ವ್ಯವಸ್ಥಾಪಕರಾಗಿರುವ ಅಭಿಜಿತ್ ಸಿಕಂದರ್(29) ಬಿಹಾರದ ಪಾಟ್ನಾ ಮೂಲದವರು. ಅಭಿಜಿತ್ ಅವರು ಅಸ್ತೀ ಅವರನ್ನು ಮೂರು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು. ಅರ್ಥಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಅವರು ಕೆಲಸ ಹುಡುಕುತ್ತಿದ್ದರು. ಎರಡು ಮೂರು ಕಡೆ ಸಂದರ್ಶನಕ್ಕೆ ತೆರಳಿದ್ದ ಅವರು ಕೆಲಸ ಗಿಟ್ಟಿಸುವಲ್ಲಿ ವಿಫಲವಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಐದಾರು
ಕಡೆ ಇಂಟರ್ ವ್ಯೂಗೆ ಹೋಗಿದ್ದ ಅಸ್ತಿಗೆ ಕಳೆದವಾರ ಮತ್ತೊಂದು ಸಂದರ್ಶನ ಕೂಡಾ ವಿಫಲವದಾಗ ಸಾಕಷ್ಟು ನೋವು ಉಂಟು ಮಾಡಿತ್ತು. ಪತಿ ಎಷ್ಟೇ ಸಮಾಧಾನ ಮಾಡಿದರೂ ಅಸ್ತಿಗೆ ಬದುಕು ಸಾಕೆನಿಸಿತು. ಸಾಯಲು ನಿರ್ಧರಿಸಿ, ಪತಿಯನ್ನು ಬೇರೆ ಕೋಣೆಯಲ್ಲಿ ಮಲಗಲು ಹೇಳಿ, ನಾಲ್ಕೈದು ಪುಟಗಳ ಡೆತ್ ನೋಟ್ ಬರೆದು ತನ್ನ ಜೀವನಕ್ಕೆ ಅಂತ್ಯ ಹಾಡಿದ್ದಾಳೆ. ಡೆತ್ ನೋಟ್ ನಲ್ಲಿ ಪತಿಯ ಕ್ಷಮೆ ಕೋರಿದ್ದು, ಉದ್ಯೋಗ ಸಿಗದೆ ನಾನು ಈ ರೀತಿ ಮಾಡುತ್ತಿದ್ದೇನೆ. ನನ್ನ ಪತಿಗೆ ಇನ್ಮುಂದೆ ಯಾವುದೇ ತೊಂದರೆ ಇರುವುದಿಲ್ಲ ಎಂದು ಹೇಳಿದ್ದಾರೆ ಎಂದು ಕೋಡಿಗೆಹಳ್ಳಿ ಪೊಲೀಸರು ಹೇಳಿದ್ದಾರೆ.











Click it and Unblock the Notifications