ಕೆಎಂಎಫ್ ತನಿಖೆ ಅಂದ್ರೆ ರೇವಣ್ಣಗೆ ಗಢಗಢ: ರೆಡ್ಡಿ
ಬಳ್ಳಾರಿ,
ಜೂನ್ 3: ಕರ್ನಾಟಕ ಹಾಲು ಮಹಾಮಂಡಳದ ಮಾಜಿ ಅಧ್ಯಕ್ಷ ಎಚ್.ಡಿ. ರೇವಣ್ಣಗೆ ತನಿಖೆ ಅಂದ್ರೆ ಭಯ. ಅದಕ್ಕೆ ತಮ್ಮ ವಿರುದ್ಧ ಕೆಎಂಎಫ್ ನಡೆಸುತ್ತಿರುವ ತನಿಖೆಗೆ ಹೈಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದಾರೆ ಎಂದು ಕೆಎಂಎಫ್ ನ ಹಾಲಿ ಅಧ್ಯಕ್ಷ ಜಿ. ಸೋಮಶೇಖರ ರೆಡ್ಡಿ ಹೇಳಿದ್ದಾರೆ. id="toptextpromo">ಮಾಜಿ
ಸಚಿವ ಹಾಗೂ ಕೆಎಂಎಫ್ ಮಾಜಿ ಅಧ್ಯಕ್ಷ ರೇವಣ್ಣ ಅವರು ತಮ್ಮ ಅಧ್ಯಕ್ಷಗಿರಿ ಅವಧಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿದ್ದರೆ, ಆಡಳಿತದಲ್ಲಿ ಪಾರದರ್ಶಕತೆ ಹೊಂದಿದ್ದರೆ ತನಿಖೆಯ ಭಯವೇಕೆ ಅವರಿಗೆ ? ತಡೆಯಾಜ್ಞೆ ತರುವ ಅಗತ್ಯವೇನಿತ್ತು ? ಎಂದು ಸೋಮಶೇಖರ ರೆಡ್ಡಿ ಪ್ರಶ್ನಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ರೇವಣ್ಣ
ಅವಧಿಯಲ್ಲಿ ಅಕ್ರಮ ನೇಮಕಾತಿ, ಆಡಳಿತ ಯಂತ್ರ ದುರ್ಬಳಕೆ ಹಾಗೂ ಕೋಟ್ಯಂತರ ರುಪಾಯಿ ಅವ್ಯವಹಾರ ನಡೆದ ಆರೋಪಗಳಿವೆ. ತನಿಖೆಯ ಒಟ್ಟಾರೆ ಪ್ರಕ್ರಿಯೆ ನ್ಯಾಯಾಲಯದ ವಿಚಾರಣೆಯಲ್ಲಿದೆ. ಹೀಗಾಗಿ ಹೆಚ್ಚು ಮಾತನಾಡುವುದಿಲ್ಲ. ತಡೆಯಾಜ್ಞೆ ತೆರವಿಗೆ ಪ್ರಯತ್ನಿಸುತ್ತೇವೆ ಎಂದು ಇದೇ ವೇಳೆ ಅವರು ಸ್ಪಷ್ಟಪಡಿಸಿದರು.











Click it and Unblock the Notifications