ಕೆಎಂಎಫ್ ನಿಂದ ಅರ್ಥಪೂರ್ಣ ವಿಶ್ವ ಕ್ಷೀರ ದಿನಾಚರಣೆ

KMF World Milk Day
ಬೆಂಗಳೂರು, ಜೂ 2: ವಿಶ್ವ ಹಾಲು ದಿನಾಚರಣೆಯನ್ನು ಕರ್ನಾಟಕ ಹಾಲು ಮಹಾಮಂಡಲ(ಕೆಎಂಎಫ್ )ವು ಜೆ.ಪಿ ನಗರದಲ್ಲಿನ ಶ್ರೀ ಮಹರ್ಷಿ ಅಂಧ ಮಕ್ಕಳ ಶಾಲಾ ಮಕ್ಕಳಿಗೆ ಹಾಲು ವಿತರಣೆ ಮಾಡುವ ಮೂಲಕ ಅರ್ಥಪೂರ್ಣ ಆಚರಿಸಿತು.

ಇನ್ನೆರಡು ತಿಂಗಳುಗಳಲ್ಲಿ ಬಳ್ಳಾರಿಯಲ್ಲಿ 12 ಕೋಟಿ ರು ವೆಚ್ಚದಲ್ಲಿ ನಂದಿನಿ ಐಸ್ ಕ್ರೀಮ್ ಘಟಕವನ್ನು ಸ್ಥಾಪಿಸಲಾಗುವುದು. ಕೆಎಂಎಫ್ ನಂದಿನಿ ಹಾಲಿನ 10ಕ್ಕೂ ಹೆಚ್ಚು ಉತ್ಪನ್ನಗಳು ಮಾರಾಟ ಮಾಡಲಾಗುತ್ತಿದೆ. ಮಂಗಳೂರಿನಲ್ಲ್ಲಿ ಐಸ್ ಕ್ರೀಮ್ ಘಟಕ ಜನಪ್ರಿಯತೆ ಗಳಿಸಿದೆ. ಬಳ್ಳಾರಿಯಲ್ಲಿ ಘಟಕ ಸ್ಥಾಪಿಸುವುದರಿಂದ ಮಾರುಕಟ್ಟೆ ಇನ್ನಷ್ಟು ವಿಸ್ತರಣೆ ಮಾಡಬಹುದು ಎಂದು ಕೆಎಂಎಫ್ ಅಧ್ಯಕ್ಷ ಸೋಮಶೇಖರ ರೆಡ್ಡಿ ಹೇಳಿದರು.

ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಡಾ. ಎ.ಎಸ್.ಪ್ರೇಮನಾಥ್ ಮಾತನಾಡಿ, ಗುಜರಾತ್ ಬಿಟ್ಟರೆ ದೇಶದಲ್ಲಿ ಕೆಎಂಎಫ್ ಅತೀ ದೊಡ್ಡ ಹಾಲು ಉತ್ಪಾದಕರ ಸಹಕಾರಿ ಸಂಸ್ಥೆಯಾಗಿದೆ.ಪ್ರತಿ ದಿನ ಸರಿಸುಮಾರು 43 ಲಕ್ಷ ಲೀಟರ್‌ಗೂ ಹೆಚ್ಚು ಹಾಲನ್ನು ಶೇಖರಿಸಿ, ಸಂಸ್ಕರಿಸಿ, ಉಪ ಉತ್ಪನ್ನಗಳನ್ನಾಗಿ ಪರಿವರ್ತಿಸಲಾಗುತ್ತದೆ. ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಗ್ರಾಹಕರಿಗೂ ಸರಬರಾಜು ಮಾಡಲಾಗುತ್ತಿದೆ ಎಂದರು.

ಸಿಂಗಾಪುರಕ್ಕೆ ಕೆಎಂಎಫ್ ಹಾಲು: ಸಿಂಗಾಪುರದಲ್ಲಿ ಈ ಮುಂಚೆ ಚೀನಾ ಹಾಗೂ ಜಪಾನ್ ನಿಂದ ಹಾಲು ಆಮದು ಮಾಡಿಕೊಳ್ಳುತ್ತಿದ್ದರು. ಈಗ ಕೆಎಂಎಫ್ ಹಾಲಿನ ಗುಣಮಟ್ಟದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಕೆಎಂಎಫ್ ಹಾಲಿನ ಉತ್ಪನ್ನಗಳು ಸಿಂಗಾಪುರದಲ್ಲಿ ಬಳಸಲಾಗುತ್ತಿದೆ. ಉತ್ತಮ ಆಹಾರದ ಪ್ರಾಮುಖ್ಯತೆಯನ್ನು ಎಲ್ಲರಿಗೂ ತಿಳಿಸಲುವ ಸಲುವಾಗಿ ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆಯು ನಿಗದಿಪಡಿಸಿರುವಂತೆಯೇ ಈ ದಿನಾಚರಣೆಯನ್ನುಮಾಡಲಾಗುತ್ತಿದೆ ಎಂದು ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+